ಮುಂಬೈ: ಕಳೆದ ಮೂರು ತಿಂಗಳ ನಂತರ ಸೆನ್ಸೆಕ್ಸ್‌ನಲ್ಲಿ ಭಾರಿ ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಇಂದಿನ ಸೆಷನ್‌ನಲ್ಲಿ 1,100 ಅಂಕಗಳಷ್ಟು ನಷ್ಟದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.


COMMERCIAL BREAK
SCROLL TO CONTINUE READING

ನಿಫ್ಟಿ 346.55 ಪಾಯಿಂಟ್‌ಗಳು (1.94%) ಕುಸಿದು 17,530.85 ಕ್ಕೆ ತಲುಪಿದರೆ, ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 1,093.22 ಪಾಯಿಂಟ್ (1.82%) ಕುಸಿದು 58,840.79 ಅಂಕಗಳಲ್ಲಿ ವ್ಯಾಪಾರ ಮುಕ್ತಾಯಗೊಂಡಿತು.  ಟೆಕ್ ಮಹೀಂದ್ರಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಎರಡೂ 4% ಕ್ಕಿಂತ ಹೆಚ್ಚು ಕುಸಿತವನ್ನು ಅನುಭವಿಸಿದವು. ಇದು ಸೆನ್ಸೆಕ್ಸ್ ನಲ್ಲಿ ದೊಡ್ಡ ನಷ್ಟವನ್ನುಂಟುಮಾಡಿತು. ಇನ್ಫೋಸಿಸ್, ಮಹೀಂದ್ರಾ, ವಿಪ್ರೋ, ಟಿಸಿಎಸ್, ನೆಸ್ಲೆ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಕೆಲವು ಇತರೆ ಕಂಪನಿಗಳ ವ್ಯವಹಾರಗಳು ನಷ್ಟದಲ್ಲಿ ಕೊನೆಗೊಂಡರೆ, ಇಂಡಸ್‌ಇಂಡ್ ಬ್ಯಾಂಕ್ ಮಾತ್ರ ಲಾಭ ಅನುಭವಿಸಿತು.


ಇದನ್ನೂ ಓದಿ: Mukesh Ambani Vists Tirumala: ತಿರುಪತಿ ದೇವಸ್ಥಾನಕ್ಕೆ ಮುಖೇಶ್‌ ಅಂಬಾನಿ ಭೇಟಿ


ಟೆಕ್ ಮಹೀಂದ್ರಾ ಷೇರುಗಳು ಶೇಕಡಾ 4.43 ರಷ್ಟು ಕುಸಿತ ಅನುಭವಿಸಿವೆ. ಅಲ್ಟ್ರಾ ಕೆಮಿಕಲ್, ಇನ್ಫೋಸಿಸ್, ಎಂ & ಎಂ, ನೆಸ್ಲೆ ಇಂಡಿಯಾ, ವಿಪ್ರೋ, ಟಿಸಿಎಸ್, ರಿಲಯನ್ಸ್, ಡಾ ರೆಡ್ಡೀಸ್, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಟೈಟಾನ್, ಎಲ್‌ಟಿ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಎಚ್‌ಯುಎಲ್, ಭಾರ್ತಿ ಷೇರುಗಳು ಏರ್‌ಟೆಲ್, ಐಟಿಸಿ, ಐಸಿಐಸಿಐ ಬ್ಯಾಂಕ್, ಮಾರುತಿ, ಪವರ್ ಗ್ರಿಡ್, ಎನ್‌ಟಿಪಿಸಿ, ಸನ್ ಫಾರ್ಮಾ ಮತ್ತು ಕೋಟಕ್ ಬ್ಯಾಂಕ್‌ಗಳ ಶೇರ್‌ಗಳು ನಷ್ಟದಲ್ಲಿ ಕೊನೆಗೊಂಡಿವು.


ಇಂದು ಎಲ್ಲಾ ಕ್ಷೇತ್ರಗಳು ಕುಸಿತದೊಂದಿಗೆ ಕೊನೆಗೊಂಡವು. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಐಟಿ, ಮೀಡಿಯಾ, ಮೆಟಲ್, ಫಾರ್ಮಾ, ಪಿಎಸ್‌ಯು ಬ್ಯಾಂಕ್, ಖಾಸಗಿ ಬ್ಯಾಂಕ್, ರಿಯಾಲ್ಟಿ, ಹೆಲ್ತ್‌ಕೇರ್, ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ಆಯಿಲ್ ಮತ್ತು ಗ್ಯಾಸ್ ವಲಯಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗಿವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.