Mukesh Ambani Vists Tirumala: ತಿರುಪತಿ ದೇವಸ್ಥಾನಕ್ಕೆ ಮುಖೇಶ್‌ ಅಂಬಾನಿ ಭೇಟಿ

Mukesh Ambani Tirumala Visit: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸೋಮವಾರ ಮುಕೇಶ್ ಅಂಬಾನಿ ಅವರು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.  

Written by - Prashobh Devanahalli | Edited by - Nitin Tabib | Last Updated : Sep 16, 2022, 06:57 PM IST
  • ಆಂಧ್ರಪ್ರದೇಶದಲ್ಲಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.
  • ಈ ಸಂದರ್ಭದಲ್ಲಿ ಅವರ ಜೊತೆಗೆ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿಯವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಕೂಡಾ ಇದ್ದರು.
Mukesh Ambani Vists Tirumala: ತಿರುಪತಿ ದೇವಸ್ಥಾನಕ್ಕೆ ಮುಖೇಶ್‌ ಅಂಬಾನಿ ಭೇಟಿ title=
Mukesh Ambani Visits Tirumala Temple

ತಿರುಪತಿ: ಆಂಧ್ರಪ್ರದೇಶದಲ್ಲಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆಗೆ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿಯವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಕೂಡಾ ಇದ್ದರು.ಇದನ್ನೂ ಮೊದಲು ಸೋಮವಾರ ಮುಕೇಶ್ ಅಂಬಾನಿ ಅವರು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಶುಕ್ರವಾರ ಬೆಳಗ್ಗೆ ಅಭಿಷೇಕ ಹಾಗೂ ನಿಜಪಾದ ದರ್ಶನ ಸೇವೆಯನ್ನು ಅಂಬಾನಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎ ವೆಂಕಟ ಧರ್ಮ ರೆಡ್ಡಿಯವರು ಅಂಬಾನಿಯವರನ್ನು ಸ್ವಾಗತಿಸಿದ್ದಾರೆ ಮತ್ತು ಹಾಗೂ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ-ಅಲ್ಪಾವಧಿಗೆ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ ...!

ದರ್ಶನ ಪಡೆದ ನಂತರ ರಂಗನಾಯಕ ಮಂಟಪದಲ್ಲಿ ವೇದಪಾರಂಗತರಿಂದ ವೇದಘೋಷ ಕಾರ್ಯಕ್ರಮ ನೆರವೇರಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ತಿರುಮಲಕ್ಕೆ ಭೇಟಿ ನೀಡುವುದು ಅತ್ಯಂತ ಖುಷಿಯ ಸಂಗತಿ. ತಿರುಮಲ ದೇವಸ್ಥಾನ ಪ್ರತಿ ವರ್ಷವೂ ಅಭಿವೃದ್ಧಿ ಹೊಂದುತ್ತಿದೆ. ಎಲ್ಲರಿಗೂ ಒಳ್ಳೆಯದು ಮಾಡು ಎಂದು ವೆಂಕಟೇಶ್ವರ ಸ್ವಾಮಿಯ ಬಳಿ ಬೇಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ನಿಜವೇ… ಗ್ಯಾರಂಟಿ ಇಲ್ಲದೆಯೇ ಮಹಿಳೆಯರಿಗೆ 25 ಲಕ್ಷ ರೂ. ಸಾಲ ಕೊಡುತ್ತಿದೆಯಂತೆ ಈ ಬ್ಯಾಂಕ್!

1.5 ಕೋಟಿ ಕೊಡುಗೆ ನೀಡಿದ ಅಂಬಾನಿ 
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ತಿರುಮಲ ಬಳಿ ಇರುವ ಪುರಾತನ ವೆಂಕಟೇಶ್ವರನ ಬೆಟ್ಟಕ್ಕೆ 1.5 ಕೋಟಿ ರೂ. ಕೊಡುಗೆ ನೀಡಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಂಬಾನಿ ಅವರು 1.5 ಕೋಟಿ ರೂಪಾಯಿ ಚೆಕ್ ಅನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ ವೆಂಕಟ ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಿದರು. ಬೆಟ್ಟಗಳ ಮೇಲಿರುವ ಅತಿಥಿಗೃಹದಲ್ಲಿ ಸ್ವಲ್ಪ ಸಮಯ ತಂಗಿದ ನಂತರ ಅಂಬಾನಿಗಳು, ರಾಧಿಕಾ ಮರ್ಚೆಂಟ್ ಮತ್ತು ಇತರರು ಪವಿತ್ರ ಸ್ನಾನ ಮುಗಿಸಿ  ನಂತರ ವೆಂಕಟೇಶ್ವರ ದೇವರಿಗೆ ಪುರೋಹಿತರು ನಡೆಸಿದ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News