Budget 2021 : ನಿಮ್ಮ ಕಾರಿಗೆ ಎಷ್ಟು ವರ್ಷ ಆಯ್ತು? ಹಳೆಯ ಕಾರು ಇನ್ನು ರಸ್ತೆ ಮೇಲೆ ಓಡಲ್ಲ ಯಾಕೆ ಗೊತ್ತಾ?
20 ವರ್ಷ ಹಳೆಯದ್ದಾಗಿದ್ದರೆ ನಿಮಗೊಂದು ಕೆಟ್ಟ ಸುದ್ದಿಯಿದೆ. ಈ ಬಾರಿಯ ಬಜೆಟ್ ನಲ್ಲಿ (Budget) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಳೆಯ ವಾಹನಗಳಿಗೆ ಸಂಬಂಧಪಟ್ಟಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ನವದೆಹಲಿ: ನಿಮ್ಮ ವಾಹನ ಎಷ್ಟು ವರ್ಷ ಹಳೆಯದ್ದು.. 20 ವರ್ಷ ಹಳೆಯದ್ದಾಗಿದ್ದರೆ ನಿಮಗೊಂದು ಕೆಟ್ಟ ಸುದ್ದಿಯಿದೆ. ಈ ಬಾರಿಯ ಬಜೆಟ್ ನಲ್ಲಿ (Budget) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಳೆಯ ವಾಹನಗಳಿಗೆ ಸಂಬಂಧಪಟ್ಟಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ತೆಗೆದುಹಾಕಲು ಬಹುನಿರೀಕ್ಷಿತ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು (Vehicle Scrapping Policy) ಪ್ರಕಟಿಸಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮಂಡಿಸುವಾಗ ನಿರ್ಮಲಾ ಸೀತಾರಾಮನ್ ಈ ನೀತಿಯನ್ನು ಘೋಷಿಸಿದ್ದಾರೆ.
ಇದರ ಪ್ರಕಾರ, ಖಾಸಗಿ ವಾಹನಗಳಿಗೆ 20 ವರ್ಷವಾಗಿದ್ದರೆ ಫಿಟ್ನೆಸ್ (Fitness) ತಪಾಸಣೆಗೆ ಒಳಗಾಗಬೇಕಾಗುತ್ತದೆ. ಮತ್ತು ವಾಣಿಜ್ಯ ವಾಹನಗಳು 15 ವರ್ಷ ಹಳೆಯದ್ದಾಗಿದ್ದರೆ ಅವುಗಳನ್ನು ತಪಾಸಣೆಗೆ ಒಳಪಡಿಸಬೇಕಾಗುತ್ತದೆ. ಅಲ್ಲದೆ ವಾಹನ 20 ವರ್ಷ ಹಳೆಯದ್ದಾಗಿದ್ದರೆ ಅದನ್ನು ಸ್ಕ್ರಾಪ್ (Scrap) ಮಾಡಲಾಗುವುದು. ಈ ನೀತಿಯು ದೇಶದ ಆಮದು ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ, ಪರಿಸರ ಸ್ನೇಹಿ ಮತ್ತು ಕಡಿಮೆ ಇಂಧನ ಬಳಸುವ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುತ್ತದೆ.
ಇದನ್ನೂ ಓದಿ : ಕೋವಿಡ್ ಎಫೆಕ್ಟ್ ಆರೋಗ್ಯ ಕ್ಷೇತ್ರಕ್ಕೆ ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ ನಿಧಿ ಮೀಸಲು
ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸರ್ಕಾರಿ ಇಲಾಖೆಗಳು ಮತ್ತು ಪಿಎಸ್ಯುಗಳೊಂದಿಗೆ ಸ್ಕ್ರ್ಯಾಪ್ ಮಾಡುವ ನೀತಿಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹೇಳಿದ್ದರು. 2022 ರ ಏಪ್ರಿಲ್ 1 ರಿಂದ ಈ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಈ ನೀತಿಯನ್ನು ಸರ್ಕಾರ ಈಗಾಗಲೇ ಅನುಮೋದಿಸಿದೆ.
ಹಳೆಯ ವಾಹನಗಳನ್ನು ಸ್ಕ್ರಾಪ್ ಎಂದು ಘೋಷಿಸುವ ನೀತಿಯ ಮೇಲೆ ಕೆಲಸ ನಡೆಯುತ್ತಿದೆ. ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ಸಮಾಲೋಚಿಸಿದ ನಂತರ ನೀತಿಯನ್ನು ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Seetharaman )ಕೂಡಾ ಹೇಳಿದ್ದರು.
ಇದನ್ನೂ ಓದಿ : Budget 2021: Pensionನಿಂದ ಬಂದ ಆದಾಯಕ್ಕೆ No Tax, ಯಾವ ಯಾವ ಸರಕುಗಳ ಮೇಲೆ ಕೃಷಿ ಸೆಸ್ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.