Union Budget 2021 For Infrastructure Sector: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರ್ಷ 2021-22ರ ಆರ್ಥಿಕ ಅಯವ್ಯಯ ಪತ್ರ ಮಂಡಿಸಿದ್ದಾರೆ. ಇದು ಮೋದಿ ಸರ್ಕಾರದ (Modi Government) ಎರಡನೇ ಕಾರ್ಯಕಾಲದ ಮೂರನೇ ಬಜೆಟ್ ಆಗಿದೆ. ಕೊರೊನಾ ಮಹಾಮಾರಿ ಹಾಗೂ ಅದರ ನಂತರ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಬಳಿಕ ಮಂಡಿಸಲಾಗಿರುವ ಈ ಬಜೆಟ್ ಭಾರಿ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಬಜೆಟ್ ನಲ್ಲಿ ಆರ್ಥಿಕತೆಗೆ ಬೂಸ್ಟ್ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯಾಭಿವೃದ್ಧಿಗೂ (Union Budget For Infrastructure) ಕೂಡ ಸರ್ಕಾರ ಗಮನ ನೀಡಿದೆ. ತಮ್ಮ ಬಜೆಟ್ ನಲ್ಲಿ ಭಾರತಮಾಲಾ ಯೋಜನೆಯ ಕುರಿತು ಉಲ್ಲೇಖಿಸಿರುವ ವಿತ್ತ ಸಚಿವೆ, ಇದುವರೆಗೆ 13 ಸಾವಿರ ಕಿ.ಮೀ ಗೂ ಅಧಿಕ ರಸ್ತೆಗಳ ಅಗಲೀಕರಣ ಕಾರ್ಯ ನಡೆಸಲಾಗಿದ್ದು , ಸುಮಾರು 3800 ಕಿ.ಮೀ ರಸ್ತೆ ನಿರ್ಮಾಣ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದರ ಜೊತೆಗೆ ಮಾರ್ಚ್ 2022ರವರೆಗೆ ಸುಮಾರು 8500 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- Sovereign Gold Bond: ಮಾರುಕಟ್ಟೆಗೂ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವ ಸುವರ್ಣಾವಕಾಶ, ನಾಳೆ ತೆರೆದುಕೊಳ್ಳಲಿದೆ ಈ ಸರ್ಕಾರಿ ಯೋಜನೆ.


ತಮಿಳುನಾಡಿನಲ್ಲಿ 3500 ಕಿ.ಮೀ  ಕಾರಿಡಾರ್ ಪ್ರಸ್ತಾಪ
ಈ ಬಾರಿಯ ಬಜೆಟ್ (Budget 2021) ನಲ್ಲಿ ಕೇಂದ್ರ ವಿತ್ತ ಸಚಿವೆ ತಮಿಳುನಾಡಿನಲ್ಲಿ 3500 ಕಿ.ಮೀ ಕಾರಿಡಾರ್ ಕುರಿತು ಪ್ರಸ್ತಾಪಿಸಿದ್ದಾರೆ. ಕೇರಳದಲ್ಲಿ ಒಟ್ಟು 65 ಸಾವಿರ ಕೋಟಿ ಹೂಡಿಕೆಯಿಂದ 1100 ಕಿ.ಮೀ ಹೈವೆ ನಿರ್ಮಾಣ ಕಾಮಗಾರಿ ನಡೆಸಲಾಗುವುದು ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 25 ಸಾವಿರ ಕೋಟಿ ಹೂಡಿಕೆಯಲ್ಲಿ 675 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುವುದು ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಅಸ್ಸಾಂನಲ್ಲಿ 1300 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದು ಹೇಳಿದ್ದಾರೆ. 


ಇದನ್ನು ಓದಿ- 7th Pay Commission: Budget 2021ನಲ್ಲಿ ಸಿಗಲಿದೆಯೇ ನೌಕರರಿಗೆ ಈ ಸಂತಸದ ಸುದ್ದಿ!


PLI ಹೊರತುಪಡಿಸಿ ಮೆಗಾ ಇನ್ವೆಸ್ಟ್ಮೆಂಟ್ ಟೆಕ್ಸ್ಟೈಲ್ ಪಾರ್ಕ್ ಯೋಜನೆ (MITRA) ಜಾರಿಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಿಸಿದ್ದಾರೆ. ಇದರಿಂದ ವ್ಯಾಪಕ ಉದ್ಯೋಗ ಸೃಷ್ಟಿ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಯ ಅಡಿ ಮುಂದಿನ ಮೂರು ವರ್ಷಗಳಲ್ಲಿ 7 ಟೆಕ್ಸ್ಟೈಲ್ ಪಾರ್ಕ್ ಗಳನ್ನು ನಿರ್ಮಿಸಲಾಗುತ್ತಿದೆ. 2019 ರಲ್ಲಿ  ಜಾರಿಗೊಳಿಸಲಾಗಿದ್ದ ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ ಲೈನ್ (NIP) ಯೋಜನೆಯನ್ನು 7400 ಯೋಜನೆಗಳಿಗೆ ವಿಸ್ತರಿಸಲಾಗುವುದು. ಇದರಲ್ಲಿ ಈಗಾಗಲೇ 1.10 ಲಕ್ಷ ಕೋಟಿ ರೂ.ಗಳಲ್ಲಿ ಈಗಾಗಲೇ 217 ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.


ಇದನ್ನು ಓದಿ-Changes From February 1: ನಾಳೆಯಿಂದ ನಿಮ್ಮ ಜೀವನದಲ್ಲಾಗಲಿವೆ ಈ 10 ಪ್ರಮುಖ ಬದಲಾವಣೆಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.