Sovereign Gold Bond:ಫೆಬ್ರುವರಿ 1ನೇ ತಾರೀಖು ತುಂಬಾ ಆಕ್ಷನ್ ಗಳಿಂದ ತುಂಬಿರಲಿದೆ.
Sovereign Gold Bond: ಫೆಬ್ರುವರಿ 1ನೇ ತಾರೀಖು ತುಂಬಾ ಆಕ್ಷನ್ ಗಳಿಂದ ತುಂಬಿರಲಿದೆ. ಒಂದೆಡೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಅ ಸೀತಾರಾಮನ್ ತಮ್ಮ ಮೂರನೇ ಬಜೆಟ್ ಮಂಡಿಸುತ್ತಿದ್ದರೆ , ಮತ್ತೊಂದೆಡೆ, ಹಲವು ಸಂಗತಿಗಳ ನಿಯಮಗಳು ಬದಲಾಗುತ್ತವೆ, ಇಂತಹ ಸಂದರ್ಭದಲ್ಲಿ ನಿಮಗೆ ಅಗ್ಗದದರದಲ್ಲಿ ಚಿನ್ನ (Gold) ಖರೀದಿಸುವ ಅವಕಾಶ ಕೂಡ ಸಿಗುತ್ತಿದೆ. 11 ನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಫೆಬ್ರವರಿ 1 ರಿಂದ ಹೂಡಿಕೆಗೆ ತೆರೆದುಕೊಳ್ಳುತ್ತಿದೆ. ಫೆಬ್ರವರಿ 5 ರವರೆಗೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಇದನ್ನು ಓದಿ- ಅಗ್ಗವಾಗಲಿದೆಯೇ ಚಿನ್ನ? 2021ರ ಆರಂಭಕ್ಕೆ ರೂ.42,000 ಕ್ಕೆ ಇಳಿಯಲಿದೆಯಂತೆ Gold Rate
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
11 ನೇ ಆವೃತ್ತಿಯ ಸಾವೆರಿನ್ ಗೋಲ್ಡ್ ಬಾಂಡ್ ನಲ್ಲಿ ಚಿನ್ನದ ಇಶ್ಯೂ ಪ್ರೈಸ್ 49120 ರೂ. ಪ್ರತಿ 10 ಗ್ರಾಂ. ಇರಲಿದೆ . ಒಂದು ವೇಳೆ ನೀವು ಈ ಬಾಂಡ್ ಗಳನ್ನು ಆನ್ಲೈನ್ ನಲ್ಲಿ ಖರೀದಿಸಿದರೆ ನಿಮಗೆ ಪ್ರತಿ ಗ್ರಾ. ಹಿಂದೆ ರೂ.50 ರಿಯಾಯಿತಿ ಕೂಡ ಸಿಗಲಿದೆ. ಅಂದರೆ ನೀವು 10 ಗ್ರಾಂ ಚಿನ್ನವನ್ನು 500 ರೂ. ಕಡಿತದೊಂದಿಗೆ ರೂ.48620ಕ್ಕೆ ಖರೀದಿಸಬಹುದು.
ಚಿನ್ನದ ಬಾಂಡ್ ಯೋಜನೆಯ 10 ಸರಣಿಯಲ್ಲಿ ಪ್ರತಿ ಗ್ರಾಂ. ಚಿನ್ನದ ಇಶ್ಯೂ ಪ್ರೈಸ್ 5104 ರೂ ಗಳಷ್ಟಾಗಿತ್ತು. ಜನವರಿ 11 ರಿಂದ ಜನವರಿ 15ರವರೆಗಿನ ಸಬ್ಸ್ಕ್ರಿಪ್ಶನ್ ಗಾಗಿ ಇದು ತೆರೆದುಕೊಂಡಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ 49120 ರೂ. ಪ್ರತಿ 10 ಗ್ರಾ.ಗೆ ನಿಗದಿಪಡಿಸಲಾಗಿದೆ. ಇಂಡಿಯನ್ ಬುಲಿಯನ್ ಅಂಡ್ ಜುವೆ ಲರ್ಸ್ ಅಸೋಸಿಯೇಷ ಲಿಮಿಟೆಡ್ (IBJA) ಈ ಮೂಲ ದರವನ್ನು ನಿರ್ಧರಿಸುತ್ತದೆ.
ಗೋಲ್ಡ್ ಬಾಂಡ್‌ಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನೀವು ಒದಗಿಸಬೇಕು. ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಆರ್‌ಆರ್‌ಬಿಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು ಹೊರತುಪಡಿಸಿ), ಪೋಸ್ಟ್ ಆಫೀಸ್ (Post Office), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಅಥವಾ ನೇರವಾಗಿ ಏಜೆಂಟರ ಮೂಲಕ ಅರ್ಜಿಗಳು ಮತ್ತು ಗ್ರಾಹಕರನ್ನು ಸ್ವೀಕರಿಸಲು ಸೇವೆಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ.
ಸಾರ್ವಭೌಮ ಗೋಲ್ಡ್ ಬಾಂಡ್ (SOVEREIGN GOLD BOND) ಯೋಜನೆಯಡಿ ಹೂಡಿಕೆದಾರರು ಒಂದು ವರ್ಷದಲ್ಲಿ ಗರಿಷ್ಠ 400 ಗ್ರಾಂ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. ಅದೇ ಸಮಯದಲ್ಲಿ ಕನಿಷ್ಠ ಒಂದು ಗ್ರಾಂ ಚಿನ್ನವನ್ನು ಖರೀದಿಸುವುದು ಅವಶ್ಯಕ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆಯನ್ನು ಉಳಿಸಬಹುದು. ಟ್ರಸ್ಟಿ ವ್ಯಕ್ತಿಗಳು, ಎಚ್‌ಯುಎಫ್‌ಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಬಾಂಡ್‌ಗಳನ್ನು ಮಾರಾಟ ಮಾಡಲು ನಿಷೇಧಿಸಲಾಗಿದೆ.
ಸಾವೆರಿನ್ ಗೋಲ್ಡ್ ಬಾಂಡ್ ನಲ್ಲಿ ಮಾಡಿರುವ ಹೂಗಿಕೆಗೆ ಪ್ರತಿ ವರ್ಷ ಶೇ.2.5 ರಷ್ಟು ಬಡ್ಡಿ ದೊರೆಯಲಿದ್ದು, ಈ ಹೂಡಿಕೆಯನ್ನು ದೀರ್ಘಾವಧಿಗೆ ಮಾಡಿದ ಸಂದರ್ಭದಲ್ಲಿ ಲಾಭ ಕೂಡ ತೆರಿಗೆ ಮುಕ್ತವಾಗಿರುತ್ತದೆ. 1. ಸಾವರಿನ್ ಗೋಲ್ಡ್ ಬಾಂಡ್ ಕನಿಷ್ಠ ಅವಧಿ 8 ವರ್ಷಗಳು. 2. ಆದಾಗ್ಯೂ, ಐದು ವರ್ಷಗಳ ನಂತರ ಅದನ್ನು ಮಾರಾಟ ಮಾಡಬಹುದು. 3. ನೀವು ಈ ಬಾಂಡ್ ಅನ್ನು ಮಾರಾಟ ಮಾಡಲು ಬಯಸಿದಲ್ಲಿ(ಕನಿಷ್ಠ ಐದು ವರ್ಷಗಳ ನಂತರ), ಆ ದಿನಾಂಕದ ಕೇವಲ ಮೂರು ದಿನಗಳ ಮೊದಲು, ಸರಳ ಸರಾಸರಿ ಬೆಲೆಗೆ ಅನುಗುಣವಾಗಿ ಬಾಂಡ್ ಅನ್ನು ರಿಡೀಮ್ ಮಾಡಿಕೊಳ್ಳಬಹುದು.