Budget 2021 Updates - ನವದೆಹಲಿ: Budget 2021 ರ ಬಜೆಟ್‌ನಲ್ಲಿ ವಿತ್ತ ಸಚಿವರು ಪಿಂಚಣಿದಾರರಿಗೆ ದೊಡ್ಡ ಪರಿಹಾರ ಘೋಷಿಸಿದ್ದು, ಪಿಂಚಣಿಯಿಂದ ಬರುವ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ,  ಸರ್ಕಾರವು ವೃದ್ಧರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ.  ಇದರ ಅಡಿಯಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಆದಾಯ ತೆರಿಗೆ ರಿಟರ್ನ್ ಪಾವತಿಯಿಂದ ವಿನಾಯಿತಿ ನೀಡಿದೆ. ಅಂದರೆ, ಅವರು ಇನ್ನು ಮುಂದೆ ತೆರಿಗೆಯನ್ನು ಹಿಂತಿರುಗಿಸಬೇಕಾಗಿಲ್ಲ. ಇದಲ್ಲದೆ , ಹಣಕಾಸು ಸಚಿವರು ಮಾಡಿದ ಪ್ರಮುಖ ಪ್ರಕಟಣೆಗಳ ನೋಟ ಇಲ್ಲಿದೆ.


COMMERCIAL BREAK
SCROLL TO CONTINUE READING

-  ಟ್ಯಾಕ್ಸ್ ಕಪ್ಲೈನ್ಸೆಸ್ ಹೆಚ್ಚಿಸಲು ಸುಧಾರಣೆ ಕೈಗೊಳ್ಳಲಾಗುವುದು.
- 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಟ್ಯಾಕ್ಸ್ ಪಾವತಿಸಬೇಕಾಗಿಲ್ಲ
- 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಟ್ಯಾಕ್ಸ್ ರಿಟರ್ನ್ ಕೂಡ ದಾಖಲಿಸಬೇಕಾಗಿಲ್ಲ. 
- 3 ವರ್ಷಕ್ಕಿಂತ ಹಳೆಯದಾಗಿರುವ ಟ್ಯಾಕ್ಸ್ ಪ್ರಕರಣಗಳನ್ನು ಮತ್ತೆ ತೆರೆಯಲಾಗುವುದಿಲ್ಲ.
- ಮೊಬೈಲ್ ಪಾರ್ಟ್ಸ್ ಗಳ ಮೇಲಿನ ಕಷ್ಟಂ ಡ್ಯೂಟಿಯಲ್ಲಿ ಶೇ.2.5 ರಷ್ಟು ಹೆಚ್ಚಳ.


ಇದನ್ನು ಓದಿ-Budget 2021: Ujjwala Yojana ಕುರಿತು ವಿತ್ತ ಸಚಿವರಿಂದ ಮಹತ್ವದ ಘೋಷಣೆ

- ಅಲಾಯ್, ಸ್ಟೀಲ್ ಗಳ ಮೇಲಿನ ಕಸ್ಟಮ್ ಡ್ಯೂಟಿ ಶೇ.7.5 ಕ್ಕೆ ಇಳಿಕೆ.
- ಚಿನ್ನ-ಬೆಳ್ಳಿಯ ಮೇಲಿನ ಇಂಪೋರ್ಟ್ ಡ್ಯೂಟಿಗಳನ್ನು ರಾಷ್ಟ್ರೀಕೃತಗೊಳಿಸಲಾಗುವುದು.
- ಸ್ಟಾರ್ ಅಪ್ ಗಳಿಗೆ ಮುಂದಿನ ಒಂದು ವರ್ಷಗಳವರೆಗೆ ಯಾವುದೇ ತೆರಿಗೆ ಇಲ್ಲ.
- ಅಗ್ಗದ ಮನೆ ಖರೀದಿ ಗೆ ಪಡೆದ ಸಾಲದ ಮೇಲಿನ 1.5 ಲಕ್ಷ ರೂ. ಬಡ್ಡಿಗೆ ತೆರಿಗೆ ವಿನಾಯ್ತಿ.
- ಬೇಳೆಕಾಳುಗಳ ಮೇಲೆ ಶೇ.20 ರಷ್ಟು ಕೃಷಿ ಸೆಸ್.
- ಹತ್ತಿಯ ಮೇಲೆ ಶೇ.5 ರಷ್ಟು ಕೃಷಿ ಸೆಸ್
-ಸೂರ್ಯಕಾಂತಿ ಎಣ್ಣೆಗೆ 
- ಮೀನಿನ ಆಹಾರದ ಮೇಲಿನ ಕೃಷಿ ಸುಂಕ ಶೇ.5 ರಿಂದ ಶೇ.15ಕ್ಕೆ ಏರಿಕೆ
- ಮಧ್ಯದ ಮೇಲೆ ಶೇ.100 ರಷ್ಟು ಕೃಷಿ ಸೆಸ್ 


ಇದನ್ನು ಓದಿ- Budget 2021 : Petrol ಬೆಲೆಯಲ್ಲಿ 2.5 ರೂ. Diesel ದರದಲ್ಲಿ 4 ರೂ. ಹೆಚ್ಚಳ

- ಸೂರ್ಯಕಾಂತಿಯ ಎಣ್ಣೆಯ ಮೇಲೂ ಶೇ.20 ರಷ್ಟು ಕೃಷಿ ಸೆಸ್ ವಿಧಿಸಿದ ಕೇಂದ್ರ ಸರ್ಕಾರ.
- ಕಚ್ಚಾ ರೇಷ್ಮೆ ಮೇಲಿನ ಕೃಷಿ ಸುಂಕ ವನ್ನು ಶೇ.15 ರಿಂದ ಶೇ.20 ಕ್ಕೆ ಏರಿಕೆ 
- ಸೇಬುಹಣ್ಣಿನ ಮೇಲೆ ಶೇ.35 ರಷ್ಟು ಕೃಷಿ ಸೆಸ್ 
- ಚಿನ್ನ, ಬೆಳ್ಳಿ ಹಾಗೂ ಗಟ್ಟಿ ಚಿನ್ನದ ಮೇಲೆ ಶೇ.2.5 ರಷ್ಟು ಕೃಷಿ ಸುಂಕ.
- ಕಲ್ಲಿದ್ದಲು. ಲಿಗ್ನೈಟ್ ಹಾಗೂ ಲಿಟ್ ಮೇಲೆ ಶೇ.1.5ರಷ್ಟು ಕೃಷಿ ಸುಂಕ.
- ಕಾಬೂಲಿ ಕಡಲೆಯ ಮೇಲೆ ಶೇ.40 ರಷ್ಟು ಕೃಷಿ ಸುಂಕ 
- ನಾಳೆಯಿಂದಲೇ ಕೃಷಿ ಮೂಲ ಸೌಕರ್ಯ ಸುಂಕ ಜಾರಿ , ಆದರೆ ಇದರಿಂದ ಗ್ರಾಹಕರ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಹೊರೆ ಬೀಳುವುದಿಲ್ಲ.
- ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2.5 ರೂ. ಏರಿಕೆ, ಡಿಸೇಲ್ ಬೆಲೆಯಲ್ಲಿಯೂ ಕೂಡ ಪ್ರತಿ ಲೀಟರ್ ಗೆ 4 ರೂ. ಏರಿಕೆ.


ಇದನ್ನು ಓದಿ- Budget 2021: ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಜಿಗಿತ, Sensexನಲ್ಲಿ 1650 ಅಂಕಗಳ ಏರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.