Budget 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು 2021-22ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಹಲವಾರು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದರು. ಈ ಸಮಯದಲ್ಲಿ ಹಣಕಾಸು ಸಚಿವರು ಉಜ್ವಾಲಾ ಯೋಜನೆಗೆ (Ujjwala Yojana) ಸಂಬಂಧಿಸಿದಂತೆ ಕೂಡ ಮಹತ್ವದ ಘೋಷಣೆ ಮಾಡಿದರು.
ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳಲ್ಲಿ ಗ್ಯಾಸ್ ಪೈಪಲೈನ್ ಯೋಜನೆ:
ಉಜ್ವಾಲಾ ಯೋಜನೆಯಡಿ (Ujjwala Yojana) ಈವರೆಗೆ 8 ಮಿಲಿಯನ್ ಜನರಿಗೆ ಅನಿಲ ಸಂಪರ್ಕ ನೀಡಲಾಗಿದೆ. ಮತ್ತೆ 1 ಕೋಟಿ ಜನರಿಗೆ ಇದರ ಲಾಭ ನೀಡಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಇದರೊಂದಿಗೆ ದೇಶದ 100 ಜಿಲ್ಲೆಗಳನ್ನು ನಗರ ಅನಿಲ ವಿತರಣೆಯೊಂದಿಗೆ ಸಂಪರ್ಕಿಸಲಾಗುವುದು. 1000 ನೂತನ ಗ್ಯಾಸ್ ಏಜೆನ್ಸಿಗಳಿಗೆ ಅನುಮತಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ - Union Budget ಇತಿಹಾಸ - ಬಜೆಟ್‌ಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ
ಜಮ್ಮು ಮತ್ತು ಕಾಶ್ಮೀರದಲ್ಲೂ (Jammu and Kashmir) ಗ್ಯಾಸ್ ಪೈಪ್‌ಲೈನ್ ಯೋಜನೆ ಆರಂಭಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಇದರೊಂದಿಗೆ, ವಿಮಾ ಕ್ಷೇತ್ರದಲ್ಲಿ ಈಗ ಶೇಕಡಾ 74 ರಷ್ಟು ಎಫ್‌ಡಿಐ ಮಾಡಬಹುದು ಎಂದು ವಿತ್ತ ಸಚಿವರು ಘೋಷಿಸಿದರು, ಈ ಮೊದಲು ಇಲ್ಲಿ ಕೇವಲ 49 ಪ್ರತಿಶತದಷ್ಟು ಮಾತ್ರ ಅವಕಾಶವಿತ್ತು ಎಂದು ಅವರು ಬಜೆಟ್ ಮಂಡನೆ ವೇಳೆ ವಿವರಿಸಿದರು.
ಇದರೊಂದಿಗೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 'ಸ್ವಾವಲಂಬಿ ಆರೋಗ್ಯಕರ ಭಾರತ ಯೋಜನೆ' ಯನ್ನೂ ಘೋಷಿಸಿದರು. ಈ ಕ್ಷೇತ್ರಕ್ಕೆ 64,180 ಕೋಟಿ ರೂಪಾಯಿಗಳನ್ನು ಸರ್ಕಾರ ಒದಗಿಸಿದ್ದು, ಆರೋಗ್ಯ ಬಜೆಟ್ (Budget) ಹೆಚ್ಚಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅನ್ನು ಮುಂದುವರಿಸುವುದಾಗಿ ಘೋಷಿಸಿದ ಹಣಕಾಸು ಸಚಿವರು ಇದರ ಅಡಿಯಲ್ಲಿ ನಗರಗಳಲ್ಲಿ ಅಮೃತ್ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ - ಇಂದು Union Budgetನಲ್ಲಿ ಕರ್ನಾಟಕಕ್ಕೆ ಏನೇನು ಸಿಗಬಹುದು?
ಕರೋನಾ ಲಸಿಕೆಗಾಗಿ (Corona Vaccine) ನಿರ್ಮಲಾ ಸೀತಾರಾಮನ್ ಅವರು 35 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸಿದ್ದಾರೆ. ಆರೋಗ್ಯ ಕ್ಷೇತ್ರದ ಬಜೆಟ್ ಅನ್ನು ಶೇಕಡಾ 137 ರಷ್ಟು ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.