Union Budget 2022:  ವಿತ್ತ ಸಚಿವ ಸೀತಾರಾಮನ್  (FM Nirmala Sitharaman) ಇಂದು ತಮ್ಮ ನಾಲ್ಕನೇ ಬಜೆಟ್ (Budget 2022) ಅನ್ನು ಮಂಡಿಸಿದ್ದಾರೆ. ಇಂದಿನ ಬಜೆಟ್‌ನಲ್ಲಿ ಅವರು ಹಲವು ಮಹತ್ವದ ಘೋಷಣೆಗಳನ್ನು ಘೋಷಿಸಿದ್ದಾರೆ. . ಬಜೆಟ್ ಮಂಡನೆ ನಂತರ ಕೆಲವು ಸರಕುಗಳು ದುಬಾರಿಯಾಗಲಿದ್ದು, ಕೆಲವು ಸರಕುಗಳು ಅಗ್ಗವಾಗಲಿವೆ. ಹಾಗಾದರೆ ಬನ್ನಿ ಯಾವ ಸರಕುಗಳು ದುಬಾರಿಯಾಗಲಿವೆ ಹಾಗೂ ಯಾವ ಸರಕುಗಳು ಅಗ್ಗವಾಗಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಯಾವ ಸರಕುಗಳು ಅಗ್ಗ (These Goods Become Cheaper)
>> ವಿದೇಶಗಳಿಂದ ಆಮದಾಗುವ ಮಶೀನ್ ಗಳು ಅಗ್ಗವಾಗಲಿವೆ.
>> ಬಟ್ಟೆ ಹಾಗೂಚರ್ಮಕ್ಕೆ ಸಂಬಂಧಿಸಿದ ಸರಕುಗಳು ಅಗ್ಗವಾಗಲಿವೆ.
>> ಕೃಷಿ ಉಪಕರಣಗಳು ಅಗ್ಗವಾಗಲಿವೆ
>> ಮೊಬೈಲ್ ಚಾರ್ಜರ್ ಗಳು ಅಗ್ಗವಾಗಲಿವೆ
>> ಶೂ-ಚಪ್ಪ್ಪಲಿಗಳು ಅಗ್ಗವಾಗಲಿವೆ.
>> ರತ್ನಾಭರಣಗಳು ಅಗ್ಗವಾಗಲಿವೆ
>> ಪ್ಯಾಕೆಜಿಂಗ್ ಗಾಗಿ ಬಳಸಲಾಗುವ ಡಬ್ಬಾಗಳು ಅಗ್ಗವಾಗಲಿವೆ
>> ಜೇಮ್ಸ್ ಹಾಗೂ ಆಭರಣಗಳು ಅಗ್ಗವಾಗಲಿವೆ
>> ಇಲೆಕ್ಟ್ರಾನಿಕ್ ಉಪಕರಣಗಳೂ ಕೂಡ ಅಗ್ಗವಾಗಲಿವೆ


ಯಾವ ಸರಕುಗಳು ದುಬಾರಿ? (These Goods Become Costlier)
>> ಕೊಡೆಗಳು ದುಬಾರಿಯಾಗಲಿವೆ
>> ಕ್ಯಾಪಿಟಲ್ ಸರಕು ದುಬಾರಿಯಾಗಲಿದೆ.
>> ಬ್ಲೆಂಡಿಂಗ್ ರಹಿತ ಇಂಧನ  ದುಬಾರಿಯಾಗಲಿದೆ
>> ಇಮಿಟೆಶನ್ ಆಭರಣಗಳು ದುಬಾರಿಯಾಗಲಿವೆ


ಇದನ್ನೂ ಓದಿ-Budget 2022 : ಈ ಬಾರಿಯ ಬಜೆಟ್ ನ ಪ್ರಮುಖ ಘೋಷಣೆಗಳು ಇವು


ಕಸ್ಟಮ್ ಸುಂಕ ಕಡಿತ
ಬಜೆಟ್‌ನಲ್ಲಿ ರತ್ನಗಳು ಮತ್ತು ಆಭರಣಗಳ ಮೇಲಿನ ಕಸ್ಟಮ್ ಸುಂಕವನ್ನು ಸರ್ಕಾರ ಕಡಿತಗೊಳಿಸಿದೆ. 5 ರಷ್ಟು ಕಸ್ಟಮ್ ಸುಂಕವನ್ನು ಕಡಿತಗೊಳಿಸಲಾಗಿದೆ. ಇದಲ್ಲದೆ, ಕಟ್ ಮತ್ತು ಪಾಲಿಶ್ ಮಾಡಿದ ವಜ್ರಗಳ ಮೇಲಿನ ಕಸ್ಟಮ್ ಸುಂಕವನ್ನು ಸಹ ಸರ್ಕಾರ ಕಡಿಮೆ ಮಾಡಿದೆ. ಇದರಲ್ಲೂ ಶೇ 5ರಷ್ಟು ಕಡಿತ ಮಾಡಲಾಗಿದೆ. ಸ್ಟೀಲ್ ಸ್ಕ್ರ್ಯಾಪ್ ಮೇಲಿನ ಕಸ್ಟಮ್ ಸುಂಕವನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಅದೇ ಸಮಯದಲ್ಲಿ, ಮೆಂತೆ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸಹ ಕಡಿಮೆ ಮಾಡಲಾಗಿದೆ.


ಇದನ್ನೂ ಓದಿ-Budget 2022: ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು..?


ಯಾವ ಸರಕುಗಳ ಮೇಲೆ ಕಸ್ಟಮ್ ಸುಂಕ ಹೆಚ್ಚಳ?
ಬಂಡವಾಳ ಸರಕುಗಳ ಮೇಲೆ ಶೇಕಡಾ 7.5ರಷ್ಟು ಆಮದು ಸುಂಕವನ್ನು ವಿಧಿಸಲಾಗಿದ್ದು, ಈ ಮೊದಲು ಇದ್ದ ಆಮದು ಸುಂಕದಲ್ಲಿ ವಿನಾಯಿತಿಯನ್ನು ತೆಗೆದುಹಾಕಲಾಗಿದೆ. ಅನುಕರಣೆ ಆಭರಣಗಳ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದ್ದು, ಅದರ ಆಮದನ್ನು ಕಡಿಮೆ ಮಾಡಬಹುದು. ವಿದೇಶಿ ಕೊಡೆ ಕೂಡ ದುಬಾರಿಯಾಗಲಿದೆ. ಇದಲ್ಲದೆ ಮಿಶ್ರಣ ಮಾಡದ ಇಂಧನದ ಮೇಲೂ ಕೂಡ ಬೆಲೆ ಏರಿಕೆ.


ಇದನ್ನೂ ಓದಿ-Budget 2022: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.