Budget 2022: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?

Budget 2022 For Education - ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಿರುವುದರಿಂದ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.  

Written by - Nitin Tabib | Last Updated : Feb 1, 2022, 01:30 PM IST
  • ಈ ಬಾರಿಯ ಬಜೆಟ್ ನಲ್ಲಿ ವಿತ್ತ ಸಚಿವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿದ್ದೇನು?
  • ಒನ್ ಕ್ಲಾಸ್ ಒನ್ ಟಿವಿ ಚಾನೆಲ್ ಯೋಜನೆಯ ವಿಸ್ತಾರ, ಪ್ರಾಂತೀಯ ಭಾಷೆಗಳಿಗೆ ಪ್ರಾಮುಖ್ಯತೆ
  • ವಿಶ್ವದರ್ಜೆಯ ಡಿಜಿಟಲ್ ವಿಶ್ವವಿದ್ಯಾನಿಲಯ ಘೋಷಣೆ
Budget 2022: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?  title=
One Class, One TV Channel (Photo Courtesy-ANI)

Education Budget 2022: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಕರೋನಾ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿಗೆ ಮತ್ತು ಸತತ ನಾಲ್ಕನೇ ಬಾರಿಗೆ ದೇಶದ ಬಜೆಟ್ (Union Budget 2022) ಅನ್ನು ಮಂಡಿಸುತ್ತಿದ್ದಾರೆ. ಹೀಗಿರುವಾಗ ಈ ಬಾರಿಯ ಬಜೆಟ್‌ನಲ್ಲಿ ತಮಗೇನು ಸಿಗಲಿದೆ ಎಂಬುದು ವಿದ್ಯಾರ್ಥಿಗಳು ಕೂಡ ನಿರೀಕ್ಷಿಸುತ್ತಿದ್ದಾರೆ. 

ಈ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರವನ್ನು ಉಲ್ಲೇಖಿಸಿದ ಹಣಕಾಸು ಸಚಿವರು, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದ, ನಮ್ಮ ಮಕ್ಕಳು, ವಿಶೇಷವಾಗಿ ಈ ದೇಶದ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳಿಂದ ಬಂದ ಮಕ್ಕಳ ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಕೋವಿಡ್. ಸಾಕಷ್ಟು ಸಮಸ್ಯೆಗಳನ್ನು ತಂದಿದೆ. ಮಕ್ಕಳು ಎರಡು ವರ್ಷಗಳಿಂದ ತಮ್ಮ ಶಾಲಾ ಶಿಕ್ಷಣವನ್ನು ಮನೆಯಿಂದಲೇ ಮಾಡಿದಾರೆ ಎಂದು ಅವರು ಹೇಳಿದ್ದಾರೆ. 

'One Class, One TV Channel' ಯೋಜನೆಯ ವಿಸ್ತಾರ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಮಸ್ಯೆಗಳು ಮತ್ತು ಅಗತ್ಯಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದಕ್ಕಾಗಿಯೇ ಪ್ರಧಾನ ಮಂತ್ರಿ ಇ-ವಿದ್ಯಾ ಅಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 'ಒಂದು ವರ್ಗ, ಒಂದು ಟಿವಿ ಚಾನೆಲ್' ಕಾರ್ಯಕ್ರಮವನ್ನು ವಿಸ್ತರಿಸಲು ನಾವು ಯೋಚಿಸಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಘೋಷಿಸಿದ್ದಾರೆ. ಅದರ ಅಡಿಯಲ್ಲಿ ಇದೀಗ  ಅದನ್ನು ನಾವು 200 ಟಿವಿ ಚಾನೆಲ್‌ಗಳಿಗೆ ಹೆಚ್ಚಿಸುತ್ತಿದ್ದೇವೆ ಇದರಿಂದ ನಮ್ಮ ದೇಶದ ವಿದ್ಯಾರ್ಥಿಗಳು ಸಹ ಅವರ ಪೂರಕ ಶಿಕ್ಷಣವನ್ನು ಪಡೆಯಬಹುದು ಎಂದು ಸಿತಾರಾಮನ್ ಹೇಳಿದ್ದಾರೆ. 

ಇದನ್ನೂ ಓದಿ-Budget 2022 :NPS ಚಂದಾದಾರರಿಗೆ ಸಿಹಿ ಸುದ್ದಿ, ತೆರಿಗೆ ವಿನಾಯಿತಿ ಜೊತೆ ಸಿಗಲಿದೆ ಭಾರೀ ಪ್ರಯೋಜನ

ಈ ಚಾನೆಲ್‌ಗಳಲ್ಲಿ ನಾವು ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಹೆಚ್ಚಿನ ಕಾಳಜಿ ವಹಿಸಿದ್ದೇವೆ ಎಂದು ಸೀತಾರಾಮನ್ ಹೇಳಿದ್ದಾರೆ. ನಮ್ಮ ಈ ನಿರ್ಧಾರದಿಂದ ಎಲ್ಲಾ ರಾಜ್ಯಗಳು ತಮ್ಮ ರಾಜ್ಯದ ಸ್ಥಳೀಯ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅದ್ಭುತ ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಶಿಕ್ಷಕರಿಗೂ ಉತ್ತಮ ಡಿಜಿಟಲ್ ಉಪಕರಣಗಳನ್ನು ನೀಡುತ್ತೇವೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅವರು ಇನ್ನಷ್ಟು ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಬಹುದು ಎಂದು ಸಿತಾರಾಮನ್ ಹೇಳಿದ್ದಾರೆ. 

ಇದನ್ನೂ ಓದಿ-Budget 2022: RBI ನಿಂದ ಶೀಘ್ರದಲ್ಲಿ Blockchain ಆಧಾರಿತ ಡಿಜಿಟಲ್ ಕರೆನ್ಸಿ

ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆಗಳು (Budget 2022 Key Point)
>> ವಿಶ್ವ ದರ್ಜೆಯ ಡಿಜಿಟಲ್ ಯುನಿವರ್ಸಿಟಿ ನಿರ್ಮಾಣ
>> ಶಿಕ್ಷಣದ ವಿಸ್ತಾರಕ್ಕಾಗಿ ಶಾಲೆಗಳ ಪ್ರತಿಯೊಂದು ಕ್ಲಾಸ್ ಗಳಿಗೆ ಟಿವಿ ತರಲಾಗುವುದು.
>> ಸ್ಕಿಲ್ ಇಂಡಿಯಾ ಮಿಷನ್ ಮೂಲಕ ಯುವಶಕ್ತಿಯನ್ನು ನುರಿತ ಕೆಲಸಗಾರರನ್ನಾಗಿ ಮಾಡಲು ಸರ್ಕಾರದ ಯೋಜನೆಗಳ ಅಡಿಯಲ್ಲಿ ಕೆಲಸ ಮಾಡಲಾಗುವುದು.
>> ಜೀವನೋಪಾಯವನ್ನು ಹೆಚ್ಚಿಸಲು ಸರ್ಕಾರಿ ಯೋಜನೆಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಕೂಡ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. 

ಇದನ್ನೂ ಓದಿ-Budget 2022 : ಕೃಷಿಕರಿಗೆ ಸಿಕ್ಕಿತು ಬರಪೂರ ಕೊಡುಗೆ, ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News