Income Tax ಗೆ ಸಂಬಂಧಿಸಿದ ಮಹತ್ವದ ಸುದ್ದಿ ಪ್ರಕಟ, ವೇತನ 7 ಲಕ್ಷಕ್ಕಿಂತ ಹೆಚ್ಚಿದ್ದರೂ ತೆರಿಗೆ ಪಾವತಿಸಬೇಕಾಗಿಲ್ಲ
Income Tax Latest Update: ಬಜೆಟ್ ಮಂಡನೆಯ ಬಳಿಕ 7 ಲಕ್ಷದ ವರೆಗೆ ಆದಾಯ ಹೊಂದಿದವರು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂಬುದು ಪ್ರಸ್ತುತ ಎಲ್ಲೆಡೆ ಹೆಚ್ಚಿಗೆ ಚರ್ಚೆಯಾಗುತ್ತಿರುವ ವಿಷಯ. ಆದರೆ, 7 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರೂ ಕೂಡ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಬನ್ನಿ ಲೆಕ್ಕಾಚಾರ ಹೇಗಿದೆ ತಿಳಿದುಕೊಳ್ಳೋಣ.
Income Tax Update: ಇನ್ನು ಮುಂದೆ 7 ಲಕ್ಷದವರೆಗೆ ಆದಾಯ ಇರುವವರು ತೆರಿಗೆ ಕಟ್ಟಬೇಕಾಗಿಲ್ಲ. ಬಜೆಟ್ ಮಂಡನೆಯಾದ ಬಳಿಕ ಪ್ರಸ್ತುತ ಎಲ್ಲೆಡೆ ಚರ್ಚೆಗೆ ಗ್ರಾಸವಾದ ವಿಷಯ, ಆದರೆ ಇದೀಗ ನಿಮ್ಮ ಸಂಬಳ 7 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೂ ಕೂಡ ನೀವು ಯಾವುದೇ ತೆರಿಗೆ (ತೆರಿಗೆ ಮುಕ್ತ ಆದಾಯ) ಪಾವತಿಸಬೇಕಾಗಿಲ್ಲ. ಹೌದು... ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹೇಗೆ ತಿಳಿದುಕೊಳ್ಳೋಣ ಬನ್ನಿ,
7 ಲಕ್ಷ ಆದಾಯ ಹೊರತುಪಡಿಸಿ ಕೂಡ ತೆರಿಗೆ ರಿಯಾಯಿತಿ ಇರಲಿದೆ
ಹೊಸ ತೆರಿಗೆ ಪದ್ಧತಿಯನ್ನು ನೀವೂ ಅಳವಡಿಸಿಕೊಂಡರೆ ರೂ.7 ಲಕ್ಷದ ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಅಂದರೆ ನಿಮ್ಮ ಆದಾಯ ಸಂಪೂರ್ಣ ತೆರಿಗೆ ಮುಕ್ತವಾಗಿರಲಿದೆ. ಇದಲ್ಲದೆಯೂ ಕೂಡ ವಿತ್ತ ಸಚಿವರ ವತಿಯಿಂದ ನಿಮಗೆ ಎರಡು ರೀತಿಯ ರಿಯಾಯಿತಿಗಳನ್ನು ನೀಡಲಾಗಿದೆ.
ಈ ವಿಧಧ ಮೂಲಕ ನೀವು 50,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು
ಈ ಮೊದಲು ಹೊಸ ತೆರಿಗೆ ಪದ್ಧತಿಯಲ್ಲಿ, ವೇತನದಾರರು ಮತ್ತು ಪಿಂಚಣಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಶನ್ ಲಾಭ ಸಿಗುತ್ತಿರಲಿಲ್ಲ., ಈ ಹಿಂದೆ ಈ ಪ್ರಯೋಜನವು ಕೇವಲ ಹಳೆಯ ತೆರಿಗೆ ಪದ್ಧತಿಯಲ್ಲಿ ಮಾತ್ರ ಲಭ್ಯವಿತ್ತು, ಆದರೆ 2023 ರ ಬಜೆಟ್‌ನಲ್ಲಿ, ಹೊಸ ತೆರಿಗೆ ವ್ಯವಸ್ಥೆಯಲ್ಲಿಯೂ 50,000 ರೂ.ವರೆಗೆ ಪ್ರಮಾಣಿತ ಕಡಿತವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ವಿನಾಯಿತಿಯ ಲಾಭವನ್ನು ವೇತನ ಪಡೆಯುವ ವರ್ಗದ ಜನರಿಗೆ ಸಿಗುತ್ತದೆ.
ಇದನ್ನೂ ಓದಿ-Budget 2023: ಏನಿದು 'ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ'? ಇದರಿಂದ ಮಹಿಳೆಯರಿಗೆನು ಲಾಭ?
ಶೂನ್ಯ ತೆರಿಗೆ ಪಾವತಿಸಬೇಕಾಗುತ್ತದೆ
ಈ ಪ್ರಮಾಣಿತ ಕಡಿತದ ಪ್ರಯೋಜನವು ವೇತನದಾರರಲ್ಲದ ವ್ಯಕ್ತಿಗಳಿಗೆ ಲಭ್ಯವಿಲ್ಲ, ಅಂದರೆ, ಇದರ ಪ್ರಕಾರ, ನೀವು ಸಂಪೂರ್ಣ ಆದಾಯದ ಮೇಲೆ 7,50,000 ಲಕ್ಷ ರೂ.ವರೆಗೆ ತೆರಿಗೆಯನ್ನು ಉಳಿಸಬಹುದು, ಅಂದರೆ ಇಷ್ಟು ಆದಾಯದ ಮೇಲೆ ನಿಮ್ಮ ತೆರಿಗೆ ಪಾವತಿ ಶೂನ್ಯ ಎಂದರ್ಥ
ಇದನ್ನೂ ಓದಿ-Budget 2023: ಅಗ್ನಿ ವೀರರಿಗಾಗಿ ಬಜೆಟ್ ನಲ್ಲಿ ಮಹತ್ವದ ಘೋಷಣೆ, ತೆರಿಗೆಯಲ್ಲಿ ಭಾರಿ ವಿನಾಯಿತಿ
ಈ ಮೂಲಕ ನಿಮಗೆ 25,000 ರೂಪಾಯಿ ರಿಯಾಯಿತಿ ಸಿಗಲಿದೆ
ಇದರ ಹೊರತಾಗಿ 7,50,000 ಲಕ್ಷ, ತೆರಿಗೆ ರಿಯಾಯಿತಿ ಮಿತಿಯನ್ನೂ ಸರ್ಕಾರ ಹೆಚ್ಚಿಸಿದೆ. ಆದಾಯ ತೆರಿಗೆಯ ಸೆಕ್ಷನ್ 87ಎ ಅಡಿಯಲ್ಲಿ ಈ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಮೊದಲು, ತೆರಿಗೆ ವಿನಾಯಿತಿಯ ಪ್ರಯೋಜನವು ರೂ 5 ಲಕ್ಷದವರೆಗಿನ ತೆರಿಗೆಯ ಆದಾಯದ ಮೇಲೆ ಲಭ್ಯವಿತ್ತು. ಈ ರೀತಿಯಾಗಿ ನೀವು 25,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುವಿರಿ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.