Budget 2023 For Agniveer: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2023ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ಅಗ್ನಿಪಥ್ ಸ್ಕೀಮ್ 2022 ರಲ್ಲಿ ದಾಖಲಾದ ಅಗ್ನಿವೀರ್‌ಗಳು ಅಗ್ನಿವೀರ್ ಕಾರ್ಪಸ್ ಫಂಡ್‌ನಿಂದ ಪಡೆದ ಪಾವತಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ. ಅಗ್ನಿವೀರ್ ಅವರ 'ಸೇವಾ ನಿಧಿ ಖಾತೆ'ಗೆ ಅಗ್ನಿವೀರ್ ಅಥವಾ ಕೇಂದ್ರ ಸರ್ಕಾರ ನೀಡಿದ ಕೊಡುಗೆಯನ್ನು ಅವರ ಒಟ್ಟು ಆದಾಯದ ಲೆಕ್ಕಾಚಾರದಿಂದ ಕಡಿತಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಗ್ನಿವೀರ್ ನಿಧಿಗೆ ಇಇ ಸ್ಥಾನಮಾನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-Budget 2023: ಮಾರುಕಟ್ಟೆಗೆ ಹಿಡಿಸದ ನಿರ್ಮಲಾ ಬಜೆಟ್, 1200 ಅಂಕಗಳಿಂದ ಗೋತಾ ಹೊಡೆದ ಸೆನ್ಸೆಕ್ಸ್
ಕಳೆದ ವರ್ಷ, ಸೇನೆಗೆ ಹೊಸ ಸೈನಿಕರನ್ನು ನೇಮಿಸಿಕೊಳ್ಳಲು ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಯೋಜನೆಯಡಿಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನಾಲ್ಕು ವರ್ಷಗಳ ಅವಧಿಗೆ ದೇಶದ ಎಲ್ಲಾ ಮೂರು ಸೇವೆಗಳ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಕೇಡರ್‌ನಲ್ಲಿ ಅಗ್ನಿವೀರ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. 17.5 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಇದನ್ನೂ ಓದಿ-Budget 2023: 1992 ರಲ್ಲಿ ಎಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು? 30 ವರ್ಷಗಳ ಹಿಂದಿನ ಹಳೆ ಚಿತ್ರ ವೈರಲ್
12 ಲಕ್ಷಕ್ಕೆ ತೆರಿಗೆ ಇಲ್ಲ
ಹೊಸ ಯೋಜನೆಯಡಿ, ಆರಂಭಿಕ ವೇತನವು ತಿಂಗಳಿಗೆ ರೂ 30,000 ಆಗಿರುತ್ತದೆ ಮತ್ತು ನಾಲ್ಕನೇ ವರ್ಷದ ಅಂತ್ಯದ ವೇಳೆಗೆ ರೂ 40,000 ಕ್ಕೆ ಏರುತ್ತದೆ. ಸರ್ಕಾರವು ಸಂಬಳದ 30% ಅನ್ನು ಉಳಿತಾಯವಾಗಿ ಇಟ್ಟುಕೊಳ್ಳುತ್ತದೆ ಮತ್ತು ಅದೇ ಮೊತ್ತವನ್ನು 'ಸೇವಾ ನಿಧಿ'ಗೆ ಠೇವಣಿ ಮಾಡುತ್ತದೆ. ಉಳಿದ ಶೇ.70ರಷ್ಟು ಹಣವನ್ನು ವೇತನ ಖಾತೆಗೆ ಪಾವತಿಸಲಾಗುತ್ತದೆ. ಒಬ್ಬ ಸೈನಿಕನಿಗೆ ನಾಲ್ಕು ವರ್ಷಗಳ ಸೇವೆಯ ನಂತರ 10 ರಿಂದ 12 ಲಕ್ಷ ರೂಪಾಯಿಗಳು ನಿಧಿಯಿಂದ ಸಿಗುತ್ತವೆ ಮತ್ತು ಈ ಮೊತ್ತ ತೆರಿಗೆ ಮುಕ್ತವಾಗಿರುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.