ದೇಶದ 11 ಲಕ್ಷ ಉದ್ಯೋಗಿಗಳಿಗೆ ಸಂತಸದ ಸುದ್ದಿಯಿದೆ. ಸರ್ಕಾರ ಶೀಘ್ರದಲ್ಲೇ ಲಕ್ಷಾಂತರ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಲು ಹೊರಟಿದೆ. ಮಾಧ್ಯಮಗಳ ವರದಿ ಪ್ರಕಾರ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನೌಕರರ ಬೋನಸ್ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಅಂದರೆ ಈ ಬಾರಿಯ ದೀಪಾವಳಿಯಂದು ನಿಮ್ಮ ಖಾತೆಗೆ ದೊಡ್ಡ ಹಣ ಬರಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಒಂದು ಹಣ್ಣು ತಿಂದರೆ ಸಾಕು ದಿನಬೆಳಗಾಗೋದ್ರಲ್ಲಿ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ!


ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯು ರೈಲ್ವೇ ಉದ್ಯೋಗಿಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಬೋನಸ್‌ಗೆ ಅನುಮೋದನೆ ನೀಡಬಹುದು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 11 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ.


ರೈಲ್ವೆ ಉದ್ಯೋಗಿಗಳ ಪ್ರೊಡಕ್ಷನ್ ಲಿಂಕ್ಡ್ ಬೋನಸ್‌ನಲ್ಲಿ ಅನುಮೋದನೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಸರ್ಕಾರದ ಈ ನಿರ್ಧಾರದಿಂದ ರೈಲ್ವೆಗೆ 2000 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.


ಕೇಂದ್ರ ಸರ್ಕಾರಕ್ಕೆ ರೈಲ್ವೆ ಮಂಡಳಿ ಈ ಕುರಿತು ಪ್ರಸ್ತಾವನೆ ಕಳುಹಿಸಿದ್ದು, ಶೀಘ್ರದಲ್ಲೇ ಸಂಪುಟದ ಒಪ್ಪಿಗೆ ಸಿಗಬಹುದು. ಕ್ಯಾಬಿನೆಟ್ ಸಾಮಾನ್ಯವಾಗಿ ದಸರಾದಂದು ರೈಲ್ವೆ ನೌಕರರ ಬೋನಸ್ ಅನ್ನು ಘೋಷಿಸುತ್ತದೆ.


ಅರ್ಹ ರೈಲ್ವೆ ಉದ್ಯೋಗಿಗಳಿಗೆ PLB ಪಾವತಿಗೆ ನಿಗದಿಪಡಿಸಲಾದ ಸಂಬಳದ ಲೆಕ್ಕಾಚಾರದ ಮಿತಿಯು ತಿಂಗಳಿಗೆ 7000 ರೂ. ಅಂದರೆ 78 ದಿನಗಳ ಬೋನಸ್ ಖಾತೆಗೆ ಬಂದರೆ ಗರಿಷ್ಠ 17951 ರೂ. 


ಇದನ್ನೂ ಓದಿ: Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ


2021 ರಲ್ಲಿಯೂ ರೈಲ್ವೇ ತನ್ನ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಿತ್ತು. ಒಬ್ಬ ರೈಲ್ವೇ ಉದ್ಯೋಗಿಗೆ 30 ದಿನಗಳಿಗೆ 7000 ರೂ ಬೋನಸ್ ಸಿಗುತ್ತದೆ. ಅಂದರೆ ಉದ್ಯೋಗಿಗೆ ಸುಮಾರು 18000 ರೂ ಬೋನಸ್ ಸಿಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.