Siddaramaiah: ವೇದಿಕೆ ಮೇಲೆಯೇ ಜಾರಿ ಬಿದ್ದ ಸಿದ್ದರಾಮಯ್ಯ..!

ಮುಧೋಳದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ 60ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Written by - Puttaraj K Alur | Last Updated : Sep 27, 2022, 06:32 PM IST
  • ವೇದಿಕೆ ಮೇಲೆಯೇ ಕಾಲು ಜಾರಿ ಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯ
  • ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದಿರುವ ಘಟನೆ
  • ಆರ್.ಬಿ.ತಿಮ್ಮಾಪೂರ 60ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಘಟನೆ
Siddaramaiah: ವೇದಿಕೆ ಮೇಲೆಯೇ ಜಾರಿ ಬಿದ್ದ ಸಿದ್ದರಾಮಯ್ಯ..! title=
ಜಾರಿ ಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಹುಟ್ಟುಹಬ್ಬದ ವೇದಿಕೆಯಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯನವರು ಎಡವಿ ಜಾರಿಬಿದ್ದಿರುವ ಘಟನೆ ನಡೆದಿದೆ. ಎಡವಿ ಬೀಳುತ್ತಿದ್ದ ಸಿದ್ದರಾಮಯ್ಯರನ್ನು ತಕ್ಷಣವೇ ಬೆಂಬಲಿಗರು ಹಿಡಿದು ರಕ್ಷಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ಬೀಳುತ್ತಿದ್ದ ಸಿದ್ದರಾಮಯ್ಯರ ಕೈಯನ್ನು ಮಾಜಿ ಸಚಿವ ವೀರಕುಮಾರ್ ಪಾಟೀಲ್ ಮತ್ತು ಎಂಎಲ್ಸಿ ಪ್ರಕಾಶ ಹುಕ್ಕೇರಿ ಹಿಡಿದು ರಕ್ಷಿಸಿದ್ದಾರೆ.

ಇದನ್ನೂ ಓದಿ: ಇಂದು ವಿಶ್ವ ಪ್ರವಾಸೋದ್ಯಮ ದಿನ: ಈ ವರ್ಷದ ಧ್ಯೇಯವೇನು?

ಮುಧೋಳದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ 60ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಕೈ ಮುಗಿಯುತ್ತಾ ಬಂದ ಸಿದ್ದರಾಮಯ್ಯನವರು ಕಾಲು ಜಾರಿ ಬಿದ್ದಿದ್ದಾರೆ. ಘಟನೆಯಿಂದ ಒಂದು ಕ್ಷಣ ಸಿದ್ದರಾಮಯ್ಯನವರು ಗಲಿಬಿಲಿಗೊಂಡಿದ್ದಾರೆ.

ಬಳಿಕ ಸಾವರಿಸಿಕೊಂಡು ವೇದಿಕೆಯತ್ತ ಆಗಮಿಸಿದ ಸಿದ್ದರಾಮಯ್ಯ ಜನರತ್ತ ಕೈಬೀಸಿದ್ದಾರೆ. ಜ್ಯೋತಿ ಬೆಳಗಿಸುವ ಮೂಲಕ ಆರ್.ಬಿ.ತಿಮ್ಮಾಪೂರ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

ಇದನ್ನೂ ಓದಿ: ವೈಜ್ಞಾನಿಕ ಅಭಿವೃದ್ಧಿಗೆ ಬೆಂಗಳೂರು ಪ್ರಶಸ್ತ ಸ್ಥಳ : ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News