7th Pay Commission: ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, ಏಪ್ರಿಲ್ 30 ರಂದು ಖಾತೆಗೆ ಬರಲಿವೆ 1.20 ಲಕ್ಷ ರೂ.ಗಳು!
7th Pay Commission: ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಿಸಿದೆ. ಹೀಗಾಗಿ ಇದೀಗ ಏಪ್ರಿಲ್ 30 ರಂದು ಉದ್ಯೋಗಿಗಳ ಖಾತೆಗೆ ಭಾರಿ ಪ್ರಮಾಣದಲ್ಲಿ ಹಣ ಬರಲಿದೆ. ಬನ್ನಿ ಈ ಕುರಿತಾದ ಹೊಸ ಅಪ್ಡೇಟ್ ತಿಳಿದುಕೊಳ್ಳೋಣ,
DA Hike Latest Update: ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಇದರಿಂದ ಇದೀಗ ಏಪ್ರಿಲ್ 30 ರಂದು ಉದ್ಯೋಗಿಗಳ ಖಾತೆಗೆ ಭಾರಿ ಹಣ ಬರಲಿದೆ. ನೀವೂ ಕೇಂದ್ರ ಉದ್ಯೋಗಿಯಾಗಿದ್ದರೆ ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಖಾತೆಗೆ ಪೂರ್ಣ 1 ಲಕ್ಷ 20 ಸಾವಿರ ರೂಪಾಯಿ ಬರಲಿದೆ. ಈ ತಿಂಗಳು ತುಟ್ಟಿಭತ್ಯೆಯೊಂದಿಗೆ ಹೆಚ್ಚಿಸಿದ ವೇತನವನ್ನು ಸರ್ಕಾರ ನೀಡಲಿದೆ. 1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಇದರ ನೇರ ಲಾಭ ಪಡೆಯಲಿದ್ದಾರೆ. ಇದರೊಂದಿಗೆ 3 ತಿಂಗಳ ಹಣವನ್ನು ಕೂಡ ಬಾಕಿ ರೂಪದಲ್ಲಿ ಪಡೆಯಲಿದ್ದಾರೆ.
ತುಟ್ಟಿ ಭತ್ಯೆ ಶೇ.38ರಿಂದ 42ಕ್ಕೆ ಏರಿಕೆಯಾಗಿದೆ
ಕಾರ್ಮಿಕ ಸಚಿವಾಲಯದಿಂದ ಬಂದ ಮಾಹಿತಿಯ ಪ್ರಕಾರ, ಡಿಸೆಂಬರ್ 2022 ರಲ್ಲಿ, AI CPI-IW ನ ಅಂಕಿ ಅಂಶವು ಸುಮಾರು 132.3 ತಲುಪಿದೆ, ನಂತರ ಸರ್ಕಾರವು ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿದೆ. ಮಾರ್ಚ್ 24 ರಂದು, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.38 ರಿಂದ 42 ಕ್ಕೆ ಹೆಚ್ಚಿಸಿದೆ.
ಪ್ರತಿ ತಿಂಗಳು 1200 ರೂಪಾಯಿ ಹೆಚ್ಚು ಸಿಗಲಿದೆ
ಹೆಚ್ಚಿದ ಸಂಬಳದ ಜೊತೆಗೆ ಸರ್ಕಾರಿ ನೌಕರರಿಗೆ 3 ತಿಂಗಳ ಹಣ ಬಾಕಿ ರೂಪದಲ್ಲಿ ಸಿಗಲಿದೆ ಎಂಬುದು ಇಲ್ಲಿ ಗಮನಾರ್ಹ. ಉದಾಹರಣೆಗೆ, ಯಾವುದೇ ಕೇಂದ್ರ ಉದ್ಯೋಗಿಯ ಮೂಲ ವೇತನವು 30,000 ರೂ ಆಗಿದ್ದರೆ, ಅವನ ಸಂಬಳವನ್ನು 1200 ರೂ.ಗಳಷ್ಟು ಹೆಚ್ಚಿಸಲಾಗುತ್ತದೆ ಎಂದು ಭಾವಿಸೋಣ. ಇದರೊಂದಿಗೆ ವಾರ್ಷಿಕವಾಗಿ ನೋಡಿದರೆ ಅವರ ಒಟ್ಟು ವೇತನ 14,400 ರೂ. ಹೆಚ್ಚಾಗಲಿದೆ.
1.20 ಲಕ್ಷ ಪಡೆಯುವುದು ಹೇಗೆ?
ಇದಲ್ಲದೆ, ನಾವು ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಕುರಿತು ಹೇಳುವುದಾದರೆ, ಅವರ ವೇತನವು ತಿಂಗಳಿಗೆ 10,000 ರೂ. ಹೆಚ್ಚಾಗಲಿದೆ. ಏಕೆಂದರೆ ಕ್ಯಾಬಿನೆಟ್ ಕಾರ್ಯದರ್ಶಿಯ ಮೂಲ ವೇತನವು ತಿಂಗಳಿಗೆ 2.50 ಲಕ್ಷ ರೂಪಾಯಿಗಳಾಗಿರುತ್ತದೆ. ಈ ದೃಷ್ಟಿಯಿಂದ ಲೆಕ್ಕ ಹಾಕಿದರೆ ವಾರ್ಷಿಕವಾಗಿ ಇವರ ವೇತನದಲ್ಲಿ ಸುಮಾರು 1.20 ಲಕ್ಷ ಏರಿಕೆಯಾಗಲಿದೆ.
ತುಟ್ಟಿಭತ್ಯೆ ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ
ದೇಶಾದ್ಯಂತ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ಉದ್ಯೋಗಿಗಳ ಜೀವನಮಟ್ಟವನ್ನು ಸುಧಾರಿಸುತ್ತದೆ. ಇದರೊಂದಿಗೆ ಉದ್ಯೋಗಿಗಳ ವೇತನವನ್ನು ಹೆಚ್ಚಿಸಲಾಗಿದೆ. ಸರ್ಕಾರವು ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಈ ಹಣವನ್ನು ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.