ನವದೆಹಲಿ:  Best Business Opportunity - ನೀವು ಸಹ ಹೂಡಿಕೆ ಮಾಡದೆಯೇ ಪ್ರತಿ ತಿಂಗಳು ಲಕ್ಷಾಂತರ ಹಣ ಗಳಿಕೆ ಮಾಡಲು ಬಯುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.  ನೀವು ವ್ಯಾಪಾರ ಯೋಜನೆ ಬಗ್ಗೆ ಯೋಚಿಸುತ್ತಿದ್ದರೆ, ನಾವು ನಿಮಗಾಗಿ ಉತ್ತಮ ಆಯ್ಕೆಯೊಂದನ್ನು ತಂದಿದ್ದೇವೆ. ಇದು ಹೂಡಿಕೆಯಿಲ್ಲದೆ ನಿಮಗೆ ಸಾಕಷ್ಟು ಆದಾಯ ನೀಡುವ ಉದ್ಯಮವಾಗಿದೆ 


COMMERCIAL BREAK
SCROLL TO CONTINUE READING

ಸರ್ಕಾರಿ ಕಂಪನಿಗಳ ಫ್ರ್ಯಾಂಚೈಸ್ ತೆರೆಯುವ ಮೂಲಕ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. ನೀವು ಈ ವ್ಯವಹಾರಗಳಲ್ಲಿ  ಹೂಡಿಕೆ ಮಾಡಬೇಕಾಗಿಲ್ಲ ಮತ್ತು ಲಾಭವೂ ಉತ್ತಮವಾಗಿರುತ್ತದೆ. ಅಲ್ಲದೆ, ಅದರಲ್ಲಿ ಹಾನಿಯಾಗುವ ಸಾಧ್ಯತೆಗಳು ಅತ್ಯಲ್ಪ. ಸರ್ಕಾರಿ ಫ್ರಾಂಚೈಸಿಯೊಂದಿಗೆ ಕೆಲಸ ಮಾಡುವ ಮೋಜು ವಿಭಿನ್ನವಾಗಿದೆ ಮತ್ತು ಗಳಿಕೆ ಕೂಡ ಬಂಪರ್ ಆಗಿದೆ.


ಆಧಾರ್ ಕಾರ್ಡ್ ಫ್ರಂಚೈಸಿ 
ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಇದರಿಂದಾಗಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ನೀವು ಆಧಾರ್ ಕಾರ್ಡ್ ಫ್ರ್ಯಾಂಚೈಸ್ ತೆಗೆದುಕೊಳ್ಳಬಹುದು. ಇದರೊಂದಿಗೆ ನೀವು ಉತ್ತಮ ಹಣ ಗಳಿಕೆ ಮಾಡಬಹುದು. ನೀವು ಆಧಾರ್ ಕಾರ್ಡ್  ಫ್ರಾಂಚೈಸ್ ತೆರೆಯಲು ಬಯಸಿದರೆ, ಮೊದಲು ನೀವು UIDAI ನಡೆಸುವ ಪರೀಕ್ಷೆಯನ್ನು ಪಾಸ್ ಮಾಡಬೇಕು.


ಇದಾದ ನಂತರ ಸೇವಾ ಕೇಂದ್ರ ತೆರೆಯಲು ಪರವಾನಗಿ ನೀಡಲಾಗುತ್ತದೆ. ನೀವು ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ನೀವು ಆಧಾರ್ ನೋಂದಣಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಇದರ ನಂತರ, ಸಾಮಾನ್ಯ ಸೇವಾ ಕೇಂದ್ರದಿಂದ ನೋಂದಣಿ ಮಾಡಬೇಕಾಗುತ್ತದೆ.


ಇಂತಹ  ಪರಿಸ್ಥಿತಿಯಲ್ಲಿ, ನೀವು ಆಧಾರ್ ಕಾರ್ಡ್ ಅನ್ನು ಬಹಳ ಎಚ್ಚರಿಕೆಯಿಂದ ಇರಿಸಬೇಕಾಗುತ್ತದೆ.. ಅಲ್ಲದೆ, ಸಾಮಾನ್ಯ ಸೇವಾ ಕೇಂದ್ರ ಅಥವಾ ಯುಐಡಿಎಐನ ಫ್ರಾಂಚೈಸಿಗೆ ಹೋಗಿ ಅದರಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದು. ನೀವು ಆಧಾರ್ ಕಾರ್ಡ್ ಫ್ರಾಂಚೈಸ್ ಅನ್ನು ಸಹ ತೆಗೆದುಕೊಳ್ಳಬಹುದು.


ಹೇಗೆ ಅಪ್ಲೈ ಮಾಡಬೇಕು?
1. ಆಧಾರ್ ಫ್ರಾಂಚೈಸಿ ಪರವಾನಗಿ ಪಡೆಯಲು, ನೀವು ಮೊದಲು NSEIT ನ ಅಧಿಕೃತ ವೆಬ್‌ಸೈಟ್ https://uidai.nseitexams.com/UIDAI/LoginAction_input.action ಗೆ ಭೇಟಿ ನೀಡಬೇಕು.


2. ಇಲ್ಲಿ ನೀವು 'Create New User'  ಆಯ್ಕೆಯನ್ನು ಪಡೆಯುತ್ತೀರಿ. ಕ್ಲಿಕ್ ಮಾಡಿದ ನಂತರ ಹೊಸ ಫೈಲ್ ತೆರೆಯುತ್ತದೆ.


3. ಇದರಲ್ಲಿ ನಿಮಗೆ 'Share Code enter' ಎಂದು ಕೇಳಲಾಗುತ್ತದೆ. 'Share Code' ಗಾಗಿ ನೀವು https://resident.uidai.gov.in/offline-kyc ಗೆ ಭೇಟಿ ನೀಡುವ ಮೂಲಕ ಆಫ್‌ಲೈನ್ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಬೇಕು.


4. ಡೌನ್‌ಲೋಡ್ ಮಾಡಿದ ನಂತರ, ನೀವು 'XML ಫೈಲ್' ಮತ್ತು 'ಶೇರ್ ಕೋಡ್' ಎರಡನ್ನೂ ಡೌನ್‌ಲೋಡ್ ಮಾಡಿ.


5. ಅರ್ಜಿ ಸಲ್ಲಿಸುವಾಗ, ನಿಮ್ಮ ಪರದೆಯಲ್ಲಿ ಫಾರ್ಮ್ ತೆರೆಯುತ್ತದೆ. ಅದರಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.


ಇದನ್ನೂ ಓದಿ-Viral Video - 66 ವರ್ಷಗಳ ಹಿಂದೆ ಫ್ರಿಡ್ಜ್ ಹೇಗಿತ್ತು ಗೊತ್ತಾ...? ಭಾರಿ ವೈರಲ್ ಆಗುತ್ತಿದೆ 1956ನೇ ಸಾಲಿನ ಈ ವಿಡಿಯೋ


6. ನಿಮ್ಮ ಫೋನ್ ಮತ್ತು ಇ-ಮೇಲ್ ಐಡಿಯಲ್ಲಿ 'USER ID' ಮತ್ತು 'Password' ಬರುತ್ತದೆ. ಈಗ ನೀವು ಈ ಐಡಿ ಮತ್ತು ಪಾಸ್‌ವರ್ಡ್ ಮೂಲಕ 'Aadhaar Testing and Certification'ದ ಪೋರ್ಟಲ್‌ಗೆ ಸುಲಭವಾಗಿ ಲಾಗಿನ್ ಮಾಡಬಹುದು. ಇದರ ನಂತರ, 'ಮುಂದುವರಿಯಿರಿ' ಆಯ್ಕೆಯು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.


ಇದನ್ನೂ ಓದಿ-5G Spectrum ಹರಾಜು ಪ್ರಕ್ರಿಯೆಯಲ್ಲಿ ಬಾಜಿ ಹೊಡೆದ ಜಿಯೋ, 1.5 ಲಕ್ಷ ಕೋಟಿ ರೂ.ರೇಸ್ ನಲ್ಲಿ ಹಿಂದೆ ಬಿದ್ದ ಅಡಾನಿ ನೆಟ್ವರ್ಕ್


7. ಮುಂದಿನ ಹಂತದಲ್ಲಿ, ಒಂದು ಫಾರ್ಮ್ ನಿಮ್ಮ ಮುಂದೆ ಮತ್ತೆ ತೆರೆಯುತ್ತದೆ. ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಅದರ ನಂತರ ನಿಮ್ಮ ಫೋಟೋ ಮತ್ತು ಡಿಜಿಟಲ್ ಸಹಿಯನ್ನು ಅಪ್ಲೋಡ್ ಮಾಡಿ. ಇದರ ನಂತರ, ನೀವು ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ನೀವು 'ಫಾರ್ಮ್ ಅನ್ನು ಸಲ್ಲಿಸಲು 'Proceed To Submit Form' ಆಯ್ಕೆಯನ್ನು Click ಮಾಡುವ ಮೂಲಕ ಮುಂದುವರಿಯಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.