ನವದೆಹಲಿ : ನಿಮಗೂ ಸ್ವಂತ ವ್ಯಾಪಾರ ಆರಂಭಿಸುವ ಯೋಚನೆ ಇದೆಯೇ? ಹೌದು ಎಂದಾದರೆ,  ಉತ್ತಮ ವ್ಯಾಪಾರ ಕಲ್ಪನೆಯನ್ನು ನಾವು ನೀಡಲಿದ್ದೇವೆ. ಈ ವ್ಯವಹಾರವನ್ನು ಪ್ರಾರಂಭಿಸಲು, ಸಣ್ಣ ಪ್ರಮಾಣದ ಹೂಡಿಕೆಯ (Small investment Business) ಅಗತ್ಯವಿರುತ್ತದೆ. ಹೂಡಿಕೆ ಸಣ್ಣ ಪ್ರಮಾಣದ್ದಾದರೂ, ಲಾಭ ಮಾತ್ರ ಅಧಿಕವಾಗಿರುತ್ತದೆ. ಈ ವ್ಯಾಪಾರವನ್ನು (How to start business) ಯಾರು ಬೇಕಾದರೂ ಆರಂಭಿಸಬಹುದು ಎನ್ನುವುದು ಕೂಡಾ ಇಲ್ಲಿ ಗಮನಿಸಬೇಕಾದ ಅಂಶ.  


COMMERCIAL BREAK
SCROLL TO CONTINUE READING

ಹೆಚ್ಚಿನ ಬೇಡಿಕೆಯಲ್ಲಿರುವ ವ್ಯಾಪಾರ :
ಈ ವ್ಯಾಪಾರದಿಂದ ಉತ್ತಮ ಗಳಿಕೆ ಸಾಧ್ಯ ಎನ್ನುವುದು ಲಾಕ್ ಡೌನ್ (Lock down) ಸಮಯದಲ್ಲಿ ಕೂಡಾ ಸಾಬೀತಾಗಿದೆ. ನಾವು ಇಲ್ಲಿ ಟೊಮೆಟೊ ಕೃಷಿಯ (Tomato Farming) ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ಸಣ್ಣ ಫಾರ್ಮ್ ಹೊಂದಿದ್ದರೆ ಅಥವಾ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರೆ, ಜಮೀನನ್ನು ಬಾಡಿಗೆಗೆ ಪಡೆಯುವ ಮೂಲಕ ಈ ವ್ಯಾಪಾರವನ್ನು ಆರಂಭಿಸಬಹುದು. 


ಇದನ್ನೂ ಓದಿ : World's Most Expensive Bike: ಇದುವೇ ವಿಶ್ವದ ಅತ್ಯಂತ ದುಬಾರಿ ಬೈಕ್, ಬೆಲೆ ಕೇಳಿ ನಿಮಗೂ ಶಾಕ್ ಆಗಬಹುದು


ಟೊಮೆಟೊವನ್ನು ಹೇಗೆ ಬೆಳೆಸುವುದು ?
ಟೊಮೆಟೊ ಕೃಷಿಯನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಮಾಡಲಾಗುತ್ತದೆ. ಮೊದಲ ಬೆಳೆ ಜುಲೈ-ಆಗಸ್ಟ್‌ನಿಂದ ಪ್ರಾರಂಭವಾಗುತ್ತದೆ ಫೆಬ್ರವರಿ-ಮಾರ್ಚ್‌ವರೆಗೆ ನಡೆಯುತ್ತದೆ. ಎರಡನೆಯದ್ದು ನವೆಂಬರ್-ಡಿಸೆಂಬರ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಜೂನ್-ಜುಲೈ ವರೆಗೆ ನಡೆಯುತ್ತದೆ. ಮೊದಲನೆಯದಾಗಿ, ಟೊಮೆಟೊ ಕೃಷಿಯಲ್ಲಿ (Tomato Farming) ಬೀಜಗಳಿಂದ ನರ್ಸರಿ ತಯಾರಿಸಬೇಕಾಗುತ್ತದೆ. ಸುಮಾರು ಒಂದು ತಿಂಗಳಲ್ಲಿ ನರ್ಸರಿ ಗಿಡಗಳು ಹೊಲಗಳಲ್ಲಿ ನಾಟಿ ಮಾಡಲು ಯೋಗ್ಯವಾಗುತ್ತವೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 15,000 ಗಿಡಗಳನ್ನು ನೆಡಲಾಗುತ್ತದೆ. ಹೊಲಗಳಲ್ಲಿ ಗಿಡವನ್ನು ನೆಟ್ಟ ಸುಮಾರು 2-3 ತಿಂಗಳ ನಂತರ, ಹಣ್ಣುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಟೊಮೆಟೊ (Tomato) ಬೆಳೆ 9-10 ತಿಂಗಳವರೆಗೆ ಇರುತ್ತದೆ.


ಎಷ್ಟು ವೆಚ್ಚವಾಗುತ್ತದೆ ?
ಟೊಮೆಟೊದಲ್ಲಿ ಹಲವು ಜಾತಿಗಳಿವೆ. ಇದು ಬಿದಿರು ಮತ್ತು ತಂತಿಯಿಂದ ಉತ್ತಮ ಇಳುವರಿಯನ್ನು ನೀಡುತ್ತದೆ. ಬೀಜದಿಂದ ಹಿಡಿದು ಎಲ್ಲಾ ವೆಚ್ಚಗಳು ಸೇರಿದರೂ ಕೂಡಾ 2.5 ಲಕ್ಷದಿಂದ 3 ಲಕ್ಷದವರೆಗೆ ಖರ್ಚು ತಗುಲಬಹುದು. ಬೀಜದ ಬೆಲೆ 40,000 ರಿಂದ 50,000 ರೂ., ತಂತಿ 25,000 ರಿಂದ 30,000 ರೂ., ಬಿದಿರು 40,000 ರಿಂದ 45,000 ರೂ., ಮಲ್ಚಿಂಗ್ ಪೇಪರ್ ಮತ್ತು ಕೂಲಿ ವೆಚ್ಚ ಸುಮಾರು 20,000 ರಿಂದ 25,000 ರೂ.  ವೆಚ್ಚ ಮಾಡಬೇಕಾಗುತ್ತದೆ. ಮತ್ತೊಂದೆಡೆ, ಒಂದು ಎಕರೆ  ಟೊಮೆಟೊ ಕೃಷಿಯಲ್ಲಿ, 300-500 ಕ್ವಿಂಟಲ್ ವರೆಗೆ ಇಳುವರಿ ಪಡೆಯಬಹುದು. ಅಂದರೆ, ಒಂದು ಹೆಕ್ಟೇರ್‌ನಿಂದ 800-1200 ಕ್ವಿಂಟಾಲ್ ಟೊಮೆಟೊ ಬೆಳೆಯಬಹುದು.


ಇದನ್ನೂ ಓದಿ : FD In Bank: ಬ್ಯಾಂಕ್ ಎಫ್‌ಡಿಯಲ್ಲಿಯೂ ಅಪಾಯವಿದೆ! ನಷ್ಟ ತಪ್ಪಿಸಲು ಹೂಡಿಕೆ ಮಾಡುವ ಮೊದಲು ಈ 5 ವಿಷಯಗಳನ್ನು ತಿಳಿದುಕೊಳ್ಳಿ


15 ಲಕ್ಷದವರೆಗೆ ಸಂಪಾದನೆ :
ಒಂದು ಹೆಕ್ಟೇರ್‌ನಲ್ಲಿ 800-1200 ಕ್ವಿಂಟಾಲ್ ಟೊಮೆಟೊ ಬೆಳೆಯಬಹುದು. ವಿವಿಧ ಪ್ರಭೇದಗಳಿಗೆ ಅನುಗುಣವಾಗಿ ಉತ್ಪಾದನೆಯು ಬದಲಾಗುತ್ತದೆ. ಅಂದರೆ, ಟೊಮೆಟೊವನ್ನು ಕೆಜಿಗೆ ಸರಾಸರಿ 15 ರೂ.ಯಂತೆ  ಮಾರಾಟ ಮಾಡಿ ಸರಾಸರಿ 1000 ಕ್ವಿಂಟಾಲ್ ಉತ್ಪಾದಿಸಿದರೆ, 15 ಲಕ್ಷದವರೆಗೆ ಗಳಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.