Onion, Tomoto price: ಗಗನ ಮುಖಿಯಾದ ಟೊಮೇಟೊ, ಈರುಳ್ಳಿ ಬೆಲೆ

ಗ್ರಾಹಕರ ವ್ಯವಹಾರಗಳ ಸಚಿವಾಲಯ ಸಂಗ್ರಹಿಸಿದ ದತ್ತಾಂಶದ ಪ್ರಕಾರ ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಟೊಮೇಟೊ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 30 ರಿಂದ 20 ರೂ. ಏರಿಕೆಯಾಗಿರುವುದು ಕಂಡುಬಂದಿದೆ.

Written by - Puttaraj K Alur | Last Updated : Oct 19, 2021, 12:26 PM IST
  • ದೇಶದ ಪ್ರಮುಖ ನಗರಗಳಲ್ಲಿ ಟೊಮೇಟೊ ಮತ್ತು ಈರುಳ್ಳಿ ಬೆಲೆಗಳು ಗಗನಕ್ಕೇರಿವೆ
  • ಪ್ರಮುಖ ಉತ್ಪಾದನಾ ರಾಜ್ಯಗಳಲ್ಲಿ ಪೂರೈಕೆ ಮತ್ತು ಅಕಾಲಿಕ ಮಳೆಯಿಂದ ತರಕಾರಿಗಳ ಬೆಲೆ ಏರಿಕೆ
  • ಮಹಾನಗರಗಳಲ್ಲಿ ಟೊಮೇಟೊ ಮತ್ತು ಈರುಳ್ಳಿ ಚಿಲ್ಲರೆ ಬೆಲೆಯಲ್ಲಿ ಗರಿಷ್ಠ ಏರಿಕೆ ಕಂಡುಬಂದಿದೆ
Onion, Tomoto price: ಗಗನ ಮುಖಿಯಾದ ಟೊಮೇಟೊ, ಈರುಳ್ಳಿ ಬೆಲೆ title=
ಗಗನ ಮುಖಿಯಾದ ಟೊಮೇಟೊ, ಈರುಳ್ಳಿ ಬೆಲೆಗಳು

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಟೊಮೇಟೊ ಮತ್ತು ಈರುಳ್ಳಿ(Tomato, Onion Price)ಯಂತಹ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ವರದಿಗಳ ಪ್ರಕಾರ ಮೆಟ್ರೋ ನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಪ್ರತಿ ಕೆಜಿಗೆ 72 ರೂ. ಇದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ಪ್ರಮುಖ ಉತ್ಪಾದನಾ ರಾಜ್ಯಗಳಲ್ಲಿ ಪೂರೈಕೆ ಮತ್ತು ಅಕಾಲಿಕ ಮಳೆಯಿಂದ ಇದ್ದಕ್ಕಿದ್ದಂತೆ ತರಕಾರಿಗಳ ಬೆಲೆಗಳು ಏರಿಕೆಯಾಗಿವೆ.

ಮಹಾನಗರಗಳಲ್ಲಿ ಟೊಮೇಟೊದ ಚಿಲ್ಲರೆ ಬೆಲೆ(Tomato Price)ಯಲ್ಲಿ ಗರಿಷ್ಠ ಏರಿಕೆ ಕಂಡುಬಂದಿದ್ದು, ಕೋಲ್ಕೊತ್ತಾದಲ್ಲಿ ಪ್ರಮುಖ ಅಡುಗೆ ತರಕಾರಿ ಅ.12 ರಂದು ಪ್ರತಿ ಕೆಜಿಗೆ 72 ರೂ.ನಷ್ಟಿತ್ತು.ಇಲ್ಲಿ ತಿಂಗಳ ಹಿಂದಿನ ಅವಧಿಯಲ್ಲಿ ಪ್ರತಿ ಕೆಜಿಗೆ 38 ರೂ. ಇತ್ತು. ಇದಕ್ಕೆ ಹೋಲಿಸಿದರೆ ಭಾರೀ ಬೆಲೆ ಏರಿಕೆಯಾಗಿದೆ. ದೆಹಲಿ ಮತ್ತು ಚೆನ್ನೈನಲ್ಲಿ ಗ್ರಾಹಕರ ವ್ಯವಹಾರಗಳ ಸಚಿವಾಲಯ ಸಂಗ್ರಹಿಸಿದ ದತ್ತಾಂಶದ ಪ್ರಕಾರ ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಟೊಮೇಟೊ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 30 ರಿಂದ 20 ರೂ. ಏರಿಕೆಯಾಗಿರುವುದು ಕಂಡುಬಂದಿದೆ  .  

ಇದನ್ನೂ ಓದಿ: ಮಾರುಕಟ್ಟೆಗೆ ಹೊಚ್ಚ ಹೊಸ ಹೀರೋ Xtreme 160R Stealth ಬೈಕ್ ಬಿಡುಗಡೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ಮತ್ತೊಂದೆಡೆ ಕರ್ನಾಟಕ(Karnataka) ಮತ್ತು ಮಹಾರಾಷ್ಟ್ರದಲ್ಲಿ ಬೆಳೆ ಹಾನಿಯಿಂದಾಗಿ ದೆಹಲಿಯ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿಯ ಬೆಲೆ(Onion Price)ಯಲ್ಲಿ ಭಾರೀ ಹೆಚ್ಚಳವಾಗಿದೆ. ವ್ಯಾಪಾರಿಗಳು ಹೇಳುವ ಪ್ರಕಾರ ತರಕಾರಿಗಳ ಸಗಟು ದರದಲ್ಲಿ ಪ್ರತಿ ಕೆಜಿಗೆ 10 ರಿಂದ 15 ರೂ. ಬೆಲೆ ಏರಿಕೆಯಾಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 15-20 ರೂ. ನಷ್ಟು ಏರಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಬರುವ ವಾರಗಳಲ್ಲಿ ಈ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ತರಕಾರಿ ವ್ಯಾಪಾರಿಗಳು ಸೂಚಿಸಿದ್ದಾರೆ.

ವಾಣಿಜ್ಯ ನಗರಿ ಮುಂಬೈನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ(Tomato Price)ಗಳು ಕೆಜಿಗೆ 15 ರೂ.ನಿಂದ 53 ರೂ.ಗೆ ಏರಿಕೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಸರಕುಗಳನ್ನು ಮಾರಾಟ ಮಾಡಿದ ಗುಣಮಟ್ಟ ಮತ್ತು ಸ್ಥಳವನ್ನು ಅವಲಂಬಿಸಿ ಟೊಮೇಟೊ ಚಿಲ್ಲರೆ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: Money Earning Ideas : ನಿಮ್ಮ ಬಳಿ ಈ ಹಳೆಯ 1 ರೂ. ನೋಟು ಇದ್ದರೆ, ನೀವು 1 ಲಕ್ಷ ರೂ. ಗಳಿಸಬಹುದು! ಹೇಗೆ ಇಲ್ಲಿದೆ

‘ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ(Maharashtra)ದಂತಹ ರಾಜ್ಯಗಳಲ್ಲಿ ಅಕಾಲಿಕ ಮಳೆಯು ಬೆಳೆಯನ್ನು ಹಾನಿಗೊಳಿಸಿದೆ. ಇದರಿಂದಾಗಿ ದೆಹಲಿಯಂತಹ ಮಾರುಕಟ್ಟೆಗಳಿಗೆ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ’ ಎಂದು ಅಜಾದ್‌ಪುರ ಟೊಮೇಟೊ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೌಶಿಕ್ ಪಿಟಿಐಗೆ ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಶಿಮ್ಲಾದಂತಹ ಗುಡ್ಡಗಾಡು ಪ್ರದೇಶಗಳ ಬೆಳೆ ಕೂಡ ಬಾಧಿತವಾಗಿದೆ. ಅಕಾಲಿಕ ಮಳೆ(Unseasonal Rains)ಯನ್ನು ಪಡೆದ ಉತ್ಪಾದನಾ ರಾಜ್ಯಗಳಲ್ಲಿ ಶೇ.60ರಷ್ಟು ಟೊಮೇಟೊ ಬೆಳೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ನ್ಯಾಷನಲ್ ಹಾರ್ಟಿಕಲ್ಚರಲ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಫೌಂಡೇಶನ್ ಪ್ರಕಾರ, ಚೀನಾದ ನಂತರ ವಿಶ್ವದ 2ನೇ ಅತಿದೊಡ್ಡ ಟೊಮೇಟೊ ಉತ್ಪಾದಕ ದೇಶವಾಗಿರುವ ಭಾರತವು 7.89 ಲಕ್ಷ ಹೆಕ್ಟೇರ್ ಪ್ರದೇಶದಿಂದ ಸುಮಾರು 19.75 ಮಿಲಿಯನ್ ಟನ್ ಟೊಮೇಟೊವನ್ನು ಉತ್ಪಾದಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News