ಚಾಮರಾಜನಗರ: ಕರ್ನಾಟಕ ಸರ್ಕಾರ ಸ್ವಾಮ್ಯದ ಎಂಎಸ್ಐಎಲ್ ನ ಚಿಟ್ ಫಂಡ್ಸ್ ನೂತನ ಶಾಖೆಯು ಚಾಮರಾಜನಗರದಲ್ಲಿ ಶುಕ್ರವಾರ ಆರಂಭಗೊಂಡಿತು. ಅಂದಹಾಗೆ, ಇದು ಚಿಟ್ ಫಂಡ್ಸ್ ನ 28ನೇ ಶಾಖೆಯಾಗಿದೆ. 


COMMERCIAL BREAK
SCROLL TO CONTINUE READING

ಚಾಮರಾಜನಗರ ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಸಿ‌.ಪುಟ್ಟರಂಗಶೆಟ್ಟಿ (C PuttarangaShetty) ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಚೀಟಿ ವ್ಯವಹಾರದಲ್ಲಿ ಹಣ ಹಾಕಿ ಮೋಸ ಹೋಗುತ್ತಿದ್ದಾರೆ. ಆದರೆ, ಎಂಎಸ್ಐಎಲ್ ನ ಚಿಟ್ ಫಂಡ್ಸ್ (MSIL Chit Funds) ಸರ್ಕಾರಿ ಸಂಸ್ಥೆಯಾಗಿದ್ದು ಇಲ್ಲಿ ಹಣಕ್ಕೆ ಭದ್ರತೆ ಇರಲಿದೆ. ವ್ಯವಹಾರ ಪಾರದರ್ಶಕವಾಗಿರಲಿದೆ ಎಂದರು.


ಚಾಮರಾಜನಗರ ಜನರ ಆರ್ಥಿಕ ಅಭಿವೃದ್ಧಿಗಾಗಿ ಈ ಶಾಖೆ ತೆರೆದಿದ್ದು  ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತಿದ್ದ ಜನರಿಗಾಗಿ ನಮ್ಮ ಸಂಸ್ಥೆ ಪರಿಹಾರವಾಗಿದೆ ಎಂದು ಶಾಸಕ ಸಿ‌.ಪುಟ್ಟರಂಗಶೆಟ್ಟಿ (MLA C. Puttarangshetty) ತಿಳಿಸಿದರು. 


ಇದನ್ನೂ ಓದಿ- Bank Holidays in September 2024: ಗೌರಿ-ಗಣೇಶ ಹಬ್ಬ ಸೇರಿ ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗಳಿಗೆ ರಜೆ


ಗ್ರಾಹಕರಿಗೆ ಗುಡ್ ನ್ಯೂಸ್: 
ಇನ್ನು, ಎಂಎಸ್ಐಎಲ್ ಎಂಡಿ ಮನೋಜ್ ಕುಮಾರ್ ಗ್ರಾಹಕರಿಗೆ  ಗುಡ್ ನ್ಯೂಸ್ (Good News for Customers) ಕೊಟ್ಟಿದ್ದಾರೆ. ಕೇರಳ ಮಾದರಿಯಲ್ಲಿ  ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಟಾರ್ಗೆಟ್ ಹಾಕಿಕೊಂಡಿದ್ದೇವೆ.  ಕಳೆದ ವರ್ಷ 412 ಕೋಟಿ ವ್ಯವಹಾರ ನಡೆದಿದ್ದು ಈ ವರ್ಷ 500 ಕೋಟಿ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.


ಇನ್ನು, ಚಿಟ್ ಫಂಡ್ ನ ಆ್ಯಪ್ (Chit Fund App) ಕೂಡ ಅಭಿವೃದ್ಧಿ ಮಾಡುತ್ತಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಟ್ರಯಲ್ ರನ್ ಮಾಡಿದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಗ್ರಾಹಕರು ಆ್ಯಪ್  ಮೂಲಕವೇ ವ್ಯವಹಾರ ನಡೆಸಬಹುದಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ- ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ


ಆ್ಯಪ್ ಮೂಲಕ ಸದಸ್ಯತ್ವ, ಕಂತು ಪಾವತಿ ಸೇರಿದಂತೆ ಎಲ್ಲವನ್ನೂ  ನಿರ್ವಗಿಸ ಬಹುದಾಗಿದ್ದು ಗ್ರಾಹಕ ಸ್ನೇಹಿಯತ್ತ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. 5 ವರ್ಷದಲ್ಲಿ 100 ಶಾಖೆಗಳನ್ನು ತೆರೆದು ವಾರ್ಷಿಕ 5000 ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.