ನವರಾತ್ರಿ ಆರಂಭದೊಂದಿಗೆ ಕೆಲವು ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗಲಿದೆ.
ಬೆಂಗಳೂರು : ಈ ಬಾರಿ ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಲಿದೆ. ನವರಾತ್ರಿ ಆರಂಭದೊಂದಿಗೆ ಕೆಲವು ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗಲಿದೆ. ನವರಾತ್ರಿ ಅಥವಾ ದಸರಾ ಈ ರಾಶಿಯವರ ಜೀವನಕ್ಕೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ.
ಮಿಥುನ ರಾಶಿ : ನಿಮ್ಮ ಜೀವನದ ಸಂತೋಷ ಹೆಚ್ಚಾಗುವುದು. ನವರಾತ್ರಿಯೊಂದಿಗೆ ನಿಮ್ಮ ಜೀವನದ ಒಳ್ಳೆಯ ಘಳಿಗೆ ಆರಂಭವಾಗುವುದು.ನೀವು ಏನೇ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಬೆನ್ನಿಗಿರುತ್ತದೆ. ವಿವಾಹ ನಿಶ್ಚಯವಾಗುವ ಎಲ್ಲಾ ಸಾಧ್ಯತೆ ಇದೆ.
2/8
ಕಟಕ ರಾಶಿ :
ಉದ್ಯೋಗದಲ್ಲಿ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರುವಿರಿ. ನಿಮ್ಮ ಮನಸ್ಸಿನ ಗೊಂದಲಕ್ಕೆ ಸೂಕ್ತ ಪರಿಹಾರ ಸಿಗುವುದು.ಹಣಕಾಸಿನ ತೊಂದರೆ ನಿಮ್ಮನ್ನು ಬಾಧಿಸುವುದಿಲ್ಲ. ನೀವಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುದು.
3/8
ಸಿಂಹ ರಾಶಿ
ಸಿಂಹ ರಾಶಿ : ಎಲ್ಲರ ಮೇಲೆ ಕುರುಡು ನಂಬಿಕೆ ಬೇಡ.ನಿಮ್ಮ ಜೀವನದ ಸೋಲುಗಳೆಲ್ಲಾ ಗೆಲುವಾಗಿ ಪರಿವರ್ತನೆಯಾಗುವ ಸಮಯ.ನೀವು ತೆಗೆದುಕೊಳ್ಳುವ ನಿರ್ಧಾರದ ಹಿಂದೆ ಗೆಲುವು ಇದ್ದೇ ಇರುತ್ತದೆ.
4/8
ಕನ್ಯಾರಾಶಿ :
ಕನ್ಯಾರಾಶಿ : ಹಣಕಾಸಿನ ವಿಚಾರದಲ್ಲಿ ಸದೃಢವಾಗಿ ಇರುತ್ತೀರಿ. ಆದಾಯದ ಮೂಲಗಳು ಹೆಚ್ಚುವುದು. ಹಣ ಕೈ ಸೇರುವ ನಿರೀಕ್ಷೆ ಇದ್ದರೆ ಈ ಸಮಯದಲ್ಲಿ ಆ ಹಣ ನಿಮಗೆ ಸಿಗುವುದು. ಐಶಾರಾಮಿ ಜೀವನ ಮತ್ತೆ ಒದಗಿ ಬರುವುದು.
5/8
ತುಲಾ ರಾಶಿ :
ತುಲಾ ರಾಶಿ : ಇಲ್ಲಿಯವರೆಗೆ ನೀವು ಅನುಭವಿಸಿದ ಕಷ್ಟಗಳೆಲ್ಲಾ ಕಳೆಯುವುದು. ಇನ್ನು ನೀವಿಡುವ ಹೆಜ್ಜೆ ಯಶಸಿನತ್ತ ಸಾಗುವುದು.ಮನೆ ಖರೀದಿ ಅಥವಾ ನಿರ್ಮಾಣ ಯೋಗ ಕೂಡಿ ಬರುವುದು. ಮನಸ್ಸಿನ ಪ್ರತಿಯೊಂದು ಆಸೆ ನೆರವೇರುವ ಕಾಲ.
6/8
ಧನು ರಾಶಿ :
ಧನು ರಾಶಿ :ಉದ್ಯೋಗದಲ್ಲಿ ಉನ್ನತ ಸ್ಥಾನಕೆ ಏರುವಿರಿ. ಎಲ್ಲರೂ ನಿಮ್ಮ ಮಾತಿನ ಪ್ರಕಾರವೇ ನಡೆದುಕೊಳ್ಳುವಂತಾಗುವುದು.ಸೋಲಿನಿಂದ ಕಂಗೆಟ್ಟ ನೀವು ಇನ್ನು ಮುಂದೆ ಯಶಸ್ಸಿನ ಉತ್ತುಂಗಕ್ಕೆ ಏರುವಿರಿ.
7/8
ಮೀನ ರಾಶಿ :
ಮೀನ ರಾಶಿ : ನಿಮ್ಮ ಹೊಸ ಜೀವನ ಇಲ್ಲಿಂದಲೇ ಆರಂಭ. ಮುಂದೆ ನಡೆಯುವುದೆಲ್ಲಾ ಶುಭವೇ. ನಿಮ್ಮ ಜೀವನದಲ್ಲಿ ಇನ್ನು ಮುಂದೆ ಬರೀ ಸಂತೋಷವೇ ತುಂಬಿರುವುದು
8/8
ನವರಾತ್ರಿ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.