ನವದೆಹಲಿ: Buy Now Pay Later - ದೇಶದ ಹಲವು ಕಂಪನಿಗಳು ‘ಬೈ ನೌ ಪೇ ಲೇಟರ್’ ಸೌಲಭ್ಯ ಒದಗಿಸುತ್ತಿವೆ. ಈ ಪರಿಕಲ್ಪನೆಯು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಬಡ್ಡಿ ರಹಿತ ಸಾಲ ಸೌಲಭ್ಯದ ಅಡಿಯಲ್ಲಿ, ನೀವು ಯಾವುದೇ ವಸ್ತುವನ್ನು ಖರೀದಿಸಿ ಮತ್ತು ಕೆಲವು ದಿನಗಳ ನಂತರ ಬೆಲೆಯನ್ನು ಪಾವತಿಸಿ ಅಂದರೆ ಮರುಪಾವತಿ ಮಾಡಿ. ಇನ್ನೊಂದೆಡೆ UNI Pay 1/3rd Card ಒಂದು ಅನನ್ಯವಾದ ಬೈ ನೌ ಪೇ ಲೇಟರ್ ಕಾರ್ಡ್ ಆಗಿದ್ದು, ಇದರ ಮೂಲಕ ನೀವು ಒಂದು ತಿಂಗಳಲ್ಲಿ ಮಾಡಿದ ಎಲ್ಲಾ ವೆಚ್ಚಗಳನ್ನು ಯಾವುದೇ ಬಡ್ಡಿ ಅಥವಾ ಶುಲ್ಕವಿಲ್ಲದೆ 3 ಸಮಾನ ಮಾಸಿಕ ಕಂತುಗಳಲ್ಲಿ ಪಾವತಿಸಬಹುದು.


COMMERCIAL BREAK
SCROLL TO CONTINUE READING

ಪೂರ್ಣ ಪಾವತಿ ಮಾಡಿದರೆ ಶೇ. 1ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ
ಒಂದು ವೇಳೆ ನೀವು ಸಂಪೂರ್ಣ ಹಣವನ್ನು ಪಾವತಿಯನ್ನು ಮಾಡಲು ನಿರ್ಧರಿಸಿದರೆ, ನೀವು ಒಟ್ಟು ಬಿಲ್‌ನಲ್ಲಿ 1% ರಿಯಾಯಿತಿ/ಕ್ಯಾಶ್‌ಬ್ಯಾಕ್ ಪಡೆಯುವಿರಿ. ಕಳೆದ ವರ್ಷ UNI Pay 1/3rd ಕಾರ್ಡ್ ಅನ್ನು Uniorbit ಟೆಕ್ನಾಲಜೀಸ್ (UNI) RBL ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್ ಮತ್ತು ಲಿಕ್ವಿಲೋನ್ಸ್ ಸಹಭಾಗಿತ್ವದಲ್ಲಿ ಆರಂಭಿಸಿದೆ.


ವೀಸಾ ವೇದಿಕೆಯಲ್ಲಿ ಕೆಲಸ ಮಾಡುತ್ತದೆ
UNI ಪೇ 1/3 ಕಾರ್ಡ್ ಅನ್ನು ವೀಸಾ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಲಾಗಿದೆ. ಇದರರ್ಥ ವೀಸಾ ಕಾರ್ಡ್‌ಗಳನ್ನು ಸ್ವೀಕರಿಸುವ ಎಲ್ಲಾ ಆನ್‌ಲೈನ್ ವೆಬ್‌ಸೈಟ್‌ಗಳು ಅಥವಾ ವ್ಯಾಪಾರಿ ಮಳಿಗೆಗಳಲ್ಲಿ ಕಾರ್ಡ್ ಅನ್ನು ಬಳಸಬಹುದು.


ಇದನ್ನೂ ಓದಿ-Home Loan ಮೂಲಕ ಸ್ವಂತ ಮನೆ ಖರೀದಿಸುವುದು ಉತ್ತಮವೋ ಅಥವಾ ಬಾಡಿಗೆ ಮನೆಯಲ್ಲಿರುವುದು ಉತ್ತಮವೋ?


ಯಾವುದೇ ಬಡ್ಡಿ ಅಥವಾ ಹೆಚ್ಚುವರಿ ಶುಲ್ಕವಿಲ್ಲ
ಉದಾಹರಣೆಗೆ ನಿಮ್ಮ ಮಾಸಿಕ ಬಿಲ್ 9000 ರೂ ಎಂದು ಭಾವಿಸೋಣ. ಯಾವುದೇ ಇತರ ಕ್ರೆಡಿಟ್ ಕಾರ್ಡ್‌ನಂತೆ, ನಿಮ್ಮ ಬಿಲ್ ಅನ್ನು ನೀವು ಪೂರ್ಣವಾಗಿ ಪಾವತಿಸಬಹುದು. ಆದರೆ ನಿಮ್ಮಲ್ಲಿ ನಗದು ಕೊರತೆಯಿದ್ದರೆ, ಮೊದಲ, ಎರಡನೇ ಮತ್ತು ಮೂರನೇ ತಿಂಗಳ ಕೊನೆಯಲ್ಲಿ ರೂ 3,000 ಪಾವತಿಸುವ ಮೂಲಕ ನೀವು ಬಾಕಿ ಮೊತ್ತವನ್ನು ತೀರಿಸಬಹುದು. ವಿಶೇಷವೆಂದರೆ ಇದಕ್ಕಾಗಿ ನೀವು ಯಾವುದೇ ರೀತಿಯ ಬಡ್ಡಿ ಅಥವಾ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ಇದನ್ನೂ ಓದಿ-ನೀವು SBI ನಲ್ಲಿ Salary ಅಕೌಂಟ್ ಹೊಂದಿದ್ದೀರಾ? ನಿಮಗೆ ಸಿಗಲಿದೆ 20 ಲಕ್ಷದವರೆಗೆ ಸಾಲ!


ಪ್ರಸ್ತುತ ಕಾರ್ಡ್ ಜೀವಿತಾವಧಿ ಉಚಿತ ಕೊಡುಗೆಯೊಂದಿಗೆ ಬರುತ್ತಿದೆ. ಜನವರಿ 31 ರ ನಂತರ ನಿಮಗೆ ಶುಲ್ಕ ಬೀಳಬಹುದು
ಇತ್ತೀಚೆಗಷ್ಟೇ ಈ ಕುರಿತು ಮಾಹಿತಿ ನೀಡಿರುವ UNI ಸಂಸ್ಥಾಪಕ ಮತ್ತು CEO ನಿತಿನ್ ಗುಪ್ತಾ, “ಈ ಕಾರ್ಡ್ ಪ್ರಸ್ತುತ ಜನವರಿ 31, 2022 ರವರೆಗೆ ಜೀವಿತಾವಧಿಯ ಉಚಿತ ಕೊಡುಗೆಯೊಂದಿಗೆ ಬರುತ್ತಿದೆ. ಅದರ ನಂತರ ಶುಲ್ಕವನ್ನು ಅನ್ವಯಿಸಲಾಗುತ್ತದೆ. ಆದ್ದರಿಂದ, 31ನೇ ಜನವರಿ 2022 ರವರೆಗೆ UNI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಗ್ರಾಹಕರು ಜೀವಮಾನದ ಉಚಿತಗಳನ್ನು ಹೊಂದಿರುತ್ತಾರೆ ಮತ್ತು ನಂತರ ಹೊಸ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತದೆ. ಇದರಲ್ಲಿಯೂ ಕೂಡ ಬದಲಾವಣೆ ಸಾಧ್ಯ ಮತ್ತು ನಾವು ಸಮಯವನ್ನು ವಿಸ್ತರಿಸಬಹುದು" ಎಂದು ಹೇಳಿದ್ದಾರೆ.


ಇದನ್ನೂ ಓದಿ-Income Tax Refund: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ


ಇದನ್ನೂ ಓದಿ-Post Office ಮತ್ತು LIC ನಲ್ಲಿ ಕೈಗೆಟುಕುವ ದರದಲ್ಲಿ ಮನೆ ಖರೀದಿಸಲು ಸಿಗಲಿದೆ 50 ಲಕ್ಷದವರೆಗೆ ಸಾಲ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.