Home Loan ಮೂಲಕ ಸ್ವಂತ ಮನೆ ಖರೀದಿಸುವುದು ಉತ್ತಮವೋ ಅಥವಾ ಬಾಡಿಗೆ ಮನೆಯಲ್ಲಿರುವುದು ಉತ್ತಮವೋ?

EMI vs Rent : ಸ್ವಂತ ಮನೆ ಕಟ್ಟಿಕೊಳ್ಳಲು ಜನರು ಹಗಲಿರುಳು ದುಡಿಯುತ್ತಾರೆ. ಆದರೆ, ಇದೆ ಸಮಯದಲ್ಲಿ, ಹಣದುಬ್ಬರದಿಂದಾಗಿ, ಕೆಲವರು ಬಾಡಿಗೆ ಮನೆಗಳಲ್ಲಿ ವಾಸಿಸಲು ಬಯಸುತ್ತಾರೆ. ಹೀಗಿರುವಾಗ, ಸ್ವಂತ ಮನೆ ಖರೀದಿಸುವುದು ಸರಿಯೇ? ಅಥವಾ ಬಾಡಿಗೆ ಮನೆಯಲ್ಲಿರುವುದು  ಸರಿಯೇ ? ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 13, 2022, 05:00 PM IST
  • ಕನಸಿನ ಮನೆ ಕಟ್ಟಿಕೊಳ್ಳಲು ಜನ ಸಾಲ ತೆಗೆದುಕೊಳ್ಳುತ್ತಾರೆ.
  • ಹಲವರು ಹಣದುಬ್ಬರದ ಹಿನ್ನೆಲೆ ಮನೆ ಖರೀದಿಸಲು ಹಿಂದೇಟು ಹಾಕುತ್ತಾರೆ.
  • ಮನೆ ಖರೀದಿಸುವುದರ ಹಲವು ಲಾಭಗಳಿವೆ.
Home Loan ಮೂಲಕ ಸ್ವಂತ ಮನೆ ಖರೀದಿಸುವುದು ಉತ್ತಮವೋ ಅಥವಾ ಬಾಡಿಗೆ ಮನೆಯಲ್ಲಿರುವುದು ಉತ್ತಮವೋ? title=
Rent Vs Home Loan (FIle Photo)

ನವದೆಹಲಿ: EMI vs Rent - ಸ್ವಂತ ಮನೆ ಇದು ಯಾರ ಕನಸಾಗಿರುವುದಿಲ್ಲ ನೀವೇ ಹೇಳಿ ಮತ್ತ್ತು ಅದನ್ನು ಈಡೇರಿಸಿಕೊಳ್ಳಲು ಹಗಲಿರುಳು ಶ್ರಮಿಸಿ ಹಣ ಕೂಡಿ ಹಾಕುತ್ತಾರೆ. ಕೆಲವರು ಮನೆ ಕಟ್ಟಲು ಬ್ಯಾಂಕ್‌ನಿಂದ ಸಾಲವನ್ನೂ (Taking A Home Loan) ಪಡೆದುಕೊಳ್ಳುತ್ತಾರೆ. ಆದರೆ ಕೆಲವರು ಬಾಡಿಗೆ ಮನೆಯಲ್ಲಿ ವಾಸಿಸಲು ಇಷ್ಟಪಡುತ್ತಾರೆ. ಕರೋನಾದಿಂದಾಗಿ, ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ಬಾಡಿಗೆ ಇಳಿಕೆಯ ವರದಿಗಳೂ ಕೂಡ ಬಂದಿವೆ. ಮತ್ತೊಂದೆಡೆ, ನೀವು ಮನೆ ಖರೀದಿಸಿದಾಗ EMI ಹೊರೆ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮನೆ ಖರೀದಿಸುವುದು ವಾಸಿಯೇ ಅಥವಾ ಬಾಡಿಗೆಯಲ್ಲಿ ವಾಸಿಸುವುದು ಉತ್ತಮ ಆಯ್ಕೆಯಾಗಿದೆಯೇ ಎಂಬುದು ಪ್ರಶ್ನೆ ಹಲವರ ಮುಂದೆ ಎದುರಾಗುತ್ತದೆ.

EMI ಮತ್ತು ಬಾಡಿಗೆ ಗಣಿತವನ್ನು ಅರ್ಥಮಾಡಿಕೊಳ್ಳಿ (Business News In Kannada)
ನೀವು ಸಾಲದ ಮೇಲೆ ಮನೆಯನ್ನು ಖರೀದಿಸಿದಾಗ, ಅದನ್ನು ಮರುಪಾವತಿಸಲು ಸಹ ನೀವು ಜವಾಬ್ದಾರರಾಗಿರುತ್ತೀರಿ. ಬೆಂಗಳೂರಿನ ರಿಯಲ್ ಎಸ್ಟೇಟ್ ಆಸ್ತಿಯ ಮೂಲಕ ಅದನ್ನು ತಿಳಿದುಕೊಳ್ಳೋಣ ಬನ್ನಿ. ಪ್ರಸ್ತುತ ಆಸ್ತಿಯ ಮಾರುಕಟ್ಟೆ ಮೌಲ್ಯ 50 ಲಕ್ಷ ರೂ. ಈ ಆಸ್ತಿಯನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಒಬ್ಬರು ಹೇಗೆ ನಿರ್ಧರಿಸುತ್ತಾರೆ? (Rent Vs Home Loan) ಎಂಬುದನ್ನು ತಿಳಿದುಕೊಳ್ಳೋಣ.

ಬಾಡಿಗೆಯ ದೃಷ್ಟಿಕೋನದಿಂದ ಮೊದಲು ಅರ್ಥಮಾಡಿಕೊಳ್ಳೋಣ. ಯಾರಾದರೂ ಈ ಆಸ್ತಿಯನ್ನು ಬಾಡಿಗೆಗೆ ಪಡೆಯಲು ಬಯಸಿದರೆ ಅವರು ತಿಂಗಳಿಗೆ 12 ರಿಂದ 14 ಸಾವಿರ ರೂ. ಪಾವತಿಸಬೇಕು. ಈ ವೆಚ್ಚವು 11 ತಿಂಗಳ ನಂತರ ಹೆಚ್ಚಾಗುತ್ತದೆ. ಹೀಗಾಗಿ ಬಾಡಿಗೆಯನ್ನು ನಿರ್ವಹಿಸಲು ಅಥವಾ ಪ್ರತಿ ವರ್ಷ ಸುಮಾರು 5-10 ಪ್ರತಿಶತದಷ್ಟು ಹೆಚ್ಚಳವನ್ನು ತಪ್ಪಿಸಲು ವ್ಯಕ್ತಿ ಪ್ರತಿ ವರ್ಷ ಬೇರೆ ಬೇರೆ ಸ್ಥಳಕ್ಕೆ ಮನೆ ಬದಲಾಯಿಸಬೇಕಾಗಬಹುದು. ವ್ಯಕ್ತಿಯ ಸಂಬಳವೂ ಹೆಚ್ಚಾಗುತ್ತದೆ. ಆದರೆ, ಹಣದುಬ್ಬರವು ಪ್ರತಿ ವರ್ಷ ಬಾಡಿಗೆ ಮನೆಯನ್ನು ಬದಲಾಯಿಸುವಂತೆ ಒತ್ತಡ ತರುತ್ತದೆ.

ಮನೆ ಖರೀದಿಯ ದೃಷ್ಟಿಯಿಂದ ನೋಡಿದರೆ, ಗೃಹ ಸಾಲದಲ್ಲಿ (ಶೇ. 20 ಡೌನ್ ಪೇಮೆಂಟ್ - ಶೇ. 80 ಸಾಲ) ಮನೆ ಖರೀದಿಸಿದಾಗ, ಇದರಲ್ಲಿ ನೀವು 20 ವರ್ಷಗಳ ವರೆಗೆ ಶೇ.7.25ರಷ್ಟು ಬಡ್ಡಿದರದಂತೆ ತಿಂಗಳಿಗೆ ರೂ.32,000 EMI ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಶೇ. 50ರಷ್ಟು ಡೌನ್ ಪೇಮೆಂಟ್ ಮಾಡಿದರೆ, ಇದರಲ್ಲಿ ನೀವು ಮಾಸಿಕವಾಗಿ 20,000 EMI (Home Loan EM) ಪಾವತಿಸಬೇಕು.

ಇದನ್ನೂ ಓದಿ-ಸ್ವಂತ ಮನೆಯ ಕನಸಿಗೆ ಹೊಡೆತ, ಗೃಹಸಾಲ ಬಡ್ಡಿದರದಲ್ಲಿ ಹೆಚ್ಚಳ , ಹೊಸ ದರ ಎಷ್ಟಿರಲಿದೆ ತಿಳಿಯಿರಿ

ಮನೆಯ ನಿರ್ವಹಣೆಯ ವೆಚ್ಚವೂ ಇರುತ್ತದೆ
ಈಗ 50 ಲಕ್ಷಕ್ಕೆ ಸಿಗುತ್ತಿರುವ ಮನೆ 20 ವರ್ಷಗಳ ನಂತರ ಸುಮಾರು 1.15 ಕೋಟಿ ರೂ.ಗೆ ಲಭ್ಯವಾಗಲಿದೆ. ಇದಲ್ಲದೇ ಇಂದು ಮನೆ ಖರೀದಿಸಿದರೆ ಅದರಲ್ಲಿ 20 ವರ್ಷಗಳವರೆಗೆ ಹಲವು ರೀತಿಯ ನಿರ್ವಹಣಾ ವೆಚ್ಚಗಳಿರುತ್ತವೆ. ಇದರೊಂದಿಗೆ ಹಳೆಯ ಮನೆಯ ಬೆಲೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ-SBI Loan Rate- ಎಸ್‌ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ

20 ವರ್ಷಗಳ ನಂತರ ನೀವು 2-3 ಮನೆಗಳನ್ನು ತೆಗೆದುಕೊಳ್ಳಬಹುದು
ಒಂದು ವೇಳೆ ನೀವು ಗೃಹ ನಿರ್ಮಾಣ ಮಾಡಲು ಸಾಲವನ್ನು ತೆಗೆದುಕೊಳ್ಳದೆ ಯಾವುದೋ ಒಂದು ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ, ನಂತರ 20 ವರ್ಷಗಳ ನಂತರ ನೀವು ಸುಮಾರು 4 ಕೋಟಿ ರೂಪಾಯಿಗಳ ಕಾರ್ಪಸ್ ಅನ್ನು ಹೊಂದಬಹುದು. ಉದಾಹರಣೆಗೆ 15% ಆದಾಯದ ಪ್ರಕಾರ. ನೀವು ಶೇಕಡಾ 12 ರಷ್ಟು ಆದಾಯವನ್ನು ಪಡೆದರೂ ಸಹ, 20 ವರ್ಷಗಳ ನಂತರ ನೀವು ಸುಮಾರು 2.5 ಕೋಟಿ ರೂಪಾಯಿಗಳ ಭಾರೀ ಕಾರ್ಪಸ್ ಹೊಂದಬಹುದು. ಈ ರೀತಿಯಾಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವಾಗ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಹೊಸ ಮನೆಯನ್ನು ಖರೀದಿಸುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. 20 ವರ್ಷಗಳ ನಂತರ, ನೀವು ಅದೇ ಮನೆಯನ್ನು ಖರೀದಿಸುವ ಮೂಲಕ ಲಾಭದಲ್ಲಿ ಉಳಿಯಬಹುದು. ಇಷ್ಟು ಮಾತ್ರವಲ್ಲದೆ, ಈ ವಿಧಾನವನ್ನು ಅಳವಡಿಸಿಕೊಂಡರೆ, 20 ವರ್ಷಗಳ ನಂತರ ನೀವು ನಿಖರವಾಗಿ 2-3 ಮನೆಗಳನ್ನು (Buy Home) ಖರೀದಿಸಬಹುದು.

ಇದನ್ನೂ ಓದಿ-Post Office ಮತ್ತು LIC ನಲ್ಲಿ ಕೈಗೆಟುಕುವ ದರದಲ್ಲಿ ಮನೆ ಖರೀದಿಸಲು ಸಿಗಲಿದೆ 50 ಲಕ್ಷದವರೆಗೆ ಸಾಲ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News