ನವದೆಹಲಿ : ಗ್ಯಾಸ್ ಸಿಲಿಂಡರ್ ಬುಕ್  (LPG Gas Cylinder) ಮಾಡುವ ವಿಧಾನ ಈಗ ಇನ್ನಷ್ಟು ಸುಲಭವಾಗಿದೆ. ಗ್ಯಾಸ್ ಸಿಲಿಂಡರ್ ಅನ್ನು ಕೇವಲ ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಸಂದೇಶದ ಮೂಲಕವೂ ಬುಕ್ ಮಾಡಬಹುದು. ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಾದ ಭಾರತ್ ಗ್ಯಾಸ್ (Bharat Gas), ಇಂಡೇನ್ ಗ್ಯಾಸ್ (Indane Gas)  ಮತ್ತು ಎಚ್‌ಪಿ ಗ್ಯಾಸ್ (HP Gas) ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೇವೆಯನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಮಿಸ್ಡ್ ಕಾಲ್ ನೀಡುವ ಮೂಲಕ  ಸಿಲಿಂಡರ್ ಬುಕ್ :
ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ನಿಮ್ಮ ಫೋನ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ಮಿಸ್ಡ್ ಕಾಲ್ ನೀಡುವ ಮೂಲಕ ಕೂಡಾ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಇದಕ್ಕಾಗಿ ಇಂಡೇನ್ ಎಲ್‌ಪಿಜಿ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555, ಬಿಪಿಸಿಎಲ್ (BPCL)ಗ್ರಾಹಕರು 7710955555 ಮತ್ತು ಎಚ್‌ಪಿ (HP) ಗ್ರಾಹಕರು 9493602222 ಗೆ ಮಿಸ್ಡ್ ಕಾಲ್ ನೀಡಬಹುದು. ಮಿಸ್ಡ್ ಕಾಲ್ (Missed call) ನೀಡಿದ ಕೂಡಲೇ ನಿಮ್ಮ ಸಿಲಿಂಡರ್ ಸೆಕೆಂಡುಗಳಲ್ಲಿ ಬುಕ್ ಆಗುತ್ತದೆ. ಅಲ್ಲದೆ ಸಿಲಿಂಡರ್ ಬುಕ್ ಆಗಿರುವ ಸಂದೇಶ ಕೂಡಾ ಬರುತ್ತದೆ. 


ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದ್ದರೆ ಸಿಗಲಿದೆ ಈ ಲಾಭ


ವಾಟ್ಸಾಪ್ ಮೂಲಕ ಈ ರೀತಿ ಸಿಲಿಂಡರ್ ಬುಕ್ ಮಾಡಿ :
ಇಂಡೇನ್ ಗ್ಯಾಸ್ (Indane Gas) ಗ್ರಾಹಕರು 7588888824 ಸಂಖ್ಯೆಯ ಮೂಲಕ ಗ್ಯಾಸ್ ಬುಕ್ ಮಾಡಬಹುದು. ಗ್ರಾಹಕರು  7588888824 ನಂಬರ್ ಅನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು. ನಂತರ ವಾಟ್ಸಾಪ್ (Whatsapp) ತೆರೆಯಿರಿ. ಈಗ ಸೇವ್ ಮಾಡಿರುವ ನಂಬರ್ ಅನ್ನು ಓಪನ್ ಮಾಡಿ.  ನೋಂದಾಯಿತ ಸಂಖ್ಯೆಯಿಂದ BOOK ಅಥವಾ REFILL # ಎಂದು ಟೈಪ್ ಮಾಡುವ ಮೂಲಕ ಮೆಸೇಜ್ ಕಳುಹಿಸಿ. ಈ ಮೆಸೇಜ್ ಕಳುಹಿಸಿದ ತಕ್ಷಣ ಸಿಲಿಂಡರ್ ಬುಕ್ ಆಗಿರುವ ಮೆಸೇಜ್ ಬರುತ್ತದೆ. ಇದರಲ್ಲಿ ಸಿಲಿಂಡರ್ ಯಾವಾಗ ಡೆಲಿವೆರಿ ಆಗಲಿದೆ ಎನ್ನುವ ಮಾಹಿತಿ ಕೂಡಾ ಇರುತ್ತದೆ. 


ಇದನ್ನೂ ಓದಿ : LIC New Jeevan Shanti Policy: ಎಲ್ ಐಸಿಯ ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪಿಂಚಣಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ