SSLC ಪಾಸಾದವರು ಕೂಡ LPG ಗ್ಯಾಸ್ ಏಜೆನ್ಸಿ ಆರಂಭಿಸಬಹುದು... ಹೀಗೆ Applay ಮಾಡಿ

Business Opportunity: ನಿಮ್ಮ ಬಳಿ ನಿಯಮಿತ ಆದಾಯ ಬರುವ ಬಿಸಿನೆಸ್ ಆರಂಭಿಸುವ ಒಂದು ಉತ್ತಮ ಅವಕಾಶವಿದೆ. ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಓಡಿಷಾ ಹಾಗೂ ಮಹಾರಾಷ್ಟ್ರರಾಜ್ಯಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ರಾಜ್ಯಗಳಲ್ಲಿ ಕಂಪನಿ ಸಂಭವನೀಯತೆಗಳ ಹುಡುಕಾಟದಲ್ಲಿದೆ.

Last Updated : Nov 17, 2020, 10:26 AM IST
  • ಪ್ರತಿಯೊಬ್ಬರೂ LPG ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಅವಕಾಶದ ಹುಡುಕಾಟದಲ್ಲಿರುತ್ತಾರೆ.
  • ನೀವೂ ಕೂಡ ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಬಯಸಿದರೆ, ನೀವು ಎಲ್ಲಾ ನಿಯಮಗಳನ್ನು ತಿಳಿದಿರಬೇಕು.
  • SSLC ಪಾಸಾದ ಹಾಗೂ 60 ವರ್ಷ ಒಳಗಿನ ಯಾವುದೇ ವ್ಯಕ್ತಿ ಗ್ಯಾಸ್ ಏಜೆನ್ಸಿಗಾಗಿ ಅರ್ಜಿ ಸಲ್ಲಿಸಬಹುದು.
SSLC ಪಾಸಾದವರು ಕೂಡ LPG ಗ್ಯಾಸ್ ಏಜೆನ್ಸಿ ಆರಂಭಿಸಬಹುದು... ಹೀಗೆ Applay ಮಾಡಿ title=

ನವದೆಹಲಿ: ಪ್ರತಿಯೊಬ್ಬರೂ LPG ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಅವಕಾಶದ ಹುಡುಕಾಟದಲ್ಲಿರುತ್ತಾರೆ. ಈ ಲಾಭದಾಯಕ ವ್ಯವಹಾರವನ್ನು (Business Opportunity) ಸುಲಭವಾಗಿ ಪ್ರಾರಂಭಿಸಲು ಸಾಧ್ಯವಿಲ್ಲ, ಆದರೆ ಮೊದಲ ದಿನದಿಂದ ಅದು ಗಳಿಕೆಯ ಮಾರ್ಗವನ್ನು ತೆರೆಯುತ್ತದೆ. ನೀವೂ ಕೂಡ ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಬಯಸಿದರೆ, ನೀವು ಎಲ್ಲಾ ನಿಯಮಗಳನ್ನು ತಿಳಿದಿರಬೇಕು. ಅನಿಲ ಕಂಪನಿಗಳು ಕಾಲಕಾಲಕ್ಕೆ ಎಲ್‌ಪಿಜಿ ಮಾರಾಟಗಾರರ ಕಾರ್ಯಕ್ರಮಗಳನ್ನು ನಡೆಸುತ್ತವೆ. ವಿತರಣಾ ಜಾಲವನ್ನು ಹೆಚ್ಚಿಸಲು, ಅವರಿಗೆ ನಗರದಲ್ಲಿ ವಿತರಕರು ಬೇಕು. ಮಾರ್ಚ್ 2021 ರ ಹೊತ್ತಿಗೆ, ಅನಿಲ ಕಂಪನಿಗಳು ಹೊಸ ವಿತರಕರನ್ನು ನೇಮಕ ಮಾಡಬೇಕಾಗಿದೆ. ಈ ಕುರಿತು ಶೀಘ್ರದಲ್ಲಿಯೇ ಜಾಹೀರಾತುಗಳು ಬಿಡುಗಡೆಯಾಗಲಿವೆ.

ಇದನ್ನು ಓದಿ- ಡಿಮಾಂಡ್ ಹಾಗೂ ಲಾಭ ನೀಡುವ ಈ Business ಆರಂಭಿಸಿ, ಮೊದಲ ದಿನದಿಂದಲೇ ಗಳಿಕೆ ಆರಂಭಿಸಿ

ನಿಮ್ಮ ಬಳಿಯೂ ಕೂಡ ಒಂದು ನಿಯಮಿತ ಆದಾಯ ಬರುವ ಬಿಸಿನೆಸ್ ಆರಂಭಿಸುವ ಒಂದು ಉತ್ತಮ ಅವಕಾಶವಿದೆ. ಲೈಸನ್ಸ್ ಪಡೆದ ನಂತರವೂ ಕೂಡ ಗ್ಯಾಸ್ ಏಜೆನ್ಸಿ ಸೆಟ್ ಅಪ್ ಮಾಡಲು ಸುಮಾರು 1 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಹಲವು ಕಡೆಗಳಿಂದ ನೀವು ಇದಕ್ಕಾಗಿ ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ. ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಓಡಿಷಾ ಹಾಗೂ ಮಹಾರಾಷ್ಟ್ರರಾಜ್ಯಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ರಾಜ್ಯಗಳಲ್ಲಿ ಕಂಪನಿ ಸಂಭವನೀಯತೆಗಳ ಹುಡುಕಾಟದಲ್ಲಿದೆ.

ಇದನ್ನು ಓದಿ- ಸರ್ಕಾರದ ಮೆಗಾ ಯೋಜನೆ: ಮಹಿಳೆಯರಿಗೆ ಬಿಸಿನೆಸ್ ಪ್ರಾರಂಭಿಸಲು ಸುವರ್ಣಾವಕಾಶ

ಹೇಗೆ ಸಿಗಲಿದೆ ಗ್ಯಾಸ್ ಏಜೆನ್ಸಿ?
ದೇಶದ ಮೂರು ಸರ್ಕಾರಿ ಅನಿಲ ಕಂಪನಿಗಳು ಇಂಡೇನ್, ಭಾರತ್ ಗ್ಯಾಸ್ ಮತ್ತು ಭಾರತ್ ಗ್ಯಾಸ್. ಈ ಮೂರು ಕಂಪನಿಗಳು ದೇಶಾದ್ಯಂತ ವಿತರಕರ ಹುಡುಕಾಟದಲ್ಲಿರುತ್ತವೆ.  ಇದಕ್ಕಾಗಿ, ಕಾಲಕಾಲಕ್ಕೆ ಜಾಹೀರಾತುಗಳು ಮತ್ತು ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಕಂಪನಿಗಳು ಜಾಹೀರಾತುಗಳ ಮೂಲಕ ಅರ್ಜಿಗಳನ್ನು ಹುಡುಕುತ್ತವೆ. ಪತ್ರಿಕೆಗಳು ಮತ್ತು ಕಂಪನಿಗಳ ವೆಬ್‌ಸೈಟ್‌ನಲ್ಲಿ ಜಾಹೀರಾತುಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ನಿರ್ದಿಷ್ಟ ಸ್ವರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆಯ ನಂತರ, ಲಾಟರಿ ವ್ಯವಸ್ಥೆಯಿಂದ ವಿತರಕರನ್ನು ಆಯ್ಕೆ ಮಾಡಲಾಗುತ್ತದೆ. ಲಾಟರಿಯಲ್ಲಿ, ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಜನರ ಹೆಸರನ್ನು ಮುಂದಿನ ಪ್ರಕ್ರಿಯೆಗೆ ಕರೆಯಲಾಗುತ್ತದೆ.

ಇದನ್ನು ಓದಿ-ಕೇವಲ ರೂ.5000 ಹೂಡಿಕೆ ಮಾಡಿ ತಿಂಗಳಿಗೆ 50 ಸಾವಿರ ಸಂಪಾದನೆ ಮಾಡಲು ಇಲ್ಲಿದೆ ಒಂದು ಐಡಿಯಾ

ಗ್ಯಾಸ್ ಏಜೆನ್ಸಿ ಯಾರು ಆರಂಭಿಸಬಹುದು?
ಗ್ಯಾಸ್ ಏಜೆನ್ಸಿ ತೆರೆಯಲು ಶೈಕ್ಷಣಿಕ ಅರ್ಹತೆಯನ್ನು ಈ  ಮೊದಲು ಪದವಿಗೆ ನಿಗದಿಪಡಿಸಲಾಗಿತ್ತು. ಆದರೆ, ಇದೀಗ ಅದನ್ನು ತಗ್ಗಿಸಿ 10ನೆ ತರಗತಿಗೆ ನಿಗದಿಪಡಿಸಲಾಗಿದೆ. ಜನರಲ್ ಕೆಟಗರಿಯವರು ಈಗ ಕನಿಷ್ಠ 10 ನೆ ತರಗತಿ ಪಾಸಾಗಿರಬೇಕು. ಆಯಲ್ ಮಾರ್ಕೆಟಿಂಗ್ ಕಂಪನಿಗಳವತಿಯಿಂದ ಜಾರಿಗೊಳಿಸಲಾಗಿರುವ ನೂತನ ಮಾರ್ಗ ಸೂಚಿಗಳ ಪ್ರಕಾರ 60 ವರ್ಷ ವಯಸ್ಸಿಯವರೆಗೆ ಯಾವುದೇ ವ್ಯಕ್ತಿ ಗ್ಯಾಸ್ ಏಜೆನ್ಸಿಗೆ ಅರ್ಜಿ ಸಲ್ಲಿಸಬಹುದು. ಈ ಮೊದಲು ಇದು 21 ರಿಂದ 45 ವರ್ಷದವರೆಗೆ ಇತ್ತು.

ಇದನ್ನು ಓದಿ-Modi ಸರ್ಕಾರದ ನೆರವಿನಿಂದ ಆರಂಭಿಸಿ ಭಾರಿ ಲಾಭ ನೀಡುವ ಈ ಬಿಸಿನೆಸ್, ತಿಂಗಳಿಗೆ 70 ಸಾವಿರ ರೂ. ಗಳಿಕೆ !

ಫ್ಯಾಮಿಲಿ ಯುನಿಟ್ ಡೆಫಿನೇಶನ್ ಕೂಡ ಬದಲಾಗಿದೆ
ಕಂಪನಿಗಳು 'ಫ್ಯಾಮಿಲಿ ಯುನಿಟ್' ವ್ಯಾಖ್ಯೆಯಲ್ಲಿಯೂ ಕೂಡ ಬದಲಾವಣೆ ಮಾಡಿವೆ. ಅರ್ಜಿದಾರರನ್ನು ಹೊರತುಪಡಿಸಿ ಪತಿ ಅಥವಾ ಪತ್ನಿ, ಪೋಷಕರು, ಅಣ್ಣ, ಸಹೋದರ ಸೇರಿದಂತೆ ಮಲಸಹೊದರ-ಸಹೋದರಿ, ದತ್ತು ಪಡೆದ ಮಗು, ಅಳಿಯ, ಅತ್ತಿಗೆ, ಅತ್ತೆ-ಮಾವ, ಅಜ್ಜ-ಅಜ್ಜಿ ಈ ಪಟ್ಟಿಯಲ್ಲಿ ಶಾಮೀಲುಗೊಳಿಸಲಾಗಿದೆ. ಅವಿವಾಹಿತ ಅರ್ಜಿದಾರರ ವಿಷಯದಲ್ಲಿ ಪೋಷಕರು, ಅವಿವಾಹಿತರ ಸಹೋದರ-ಸಹೋದರಿ ಬರುತ್ತಾರೆ. ವಿಚ್ಛೇದನೆ ಪಡೆದವರು/ ವಿಧವಾಗಳ ವಿಷಯದಲ್ಲಿ  ಕೇವಲ ವೈಯಕ್ತಿಕ ಹಾಗೂ ಅವಿವಾಹಿತ ಮಕ್ಕಳು ಮಾತ್ರ ಬರುತ್ತಾರೆ.

Trending News