ಬೆಂಗಳೂರು : ಪೆಟ್ರೋಲ್ ಬೆಲೆ ಸಾಕಷ್ಟು ಏರಿಕೆಯಾಗಿದೆ (Petrol Price). ಬಹುತೇಕ ಕಡೆ ಪೆಟ್ರೋಲ್ 100 ರೂಪಾಯಿ ದಾಟಿದೆ. ಪ್ರತಿದಿನ ಪೆಟ್ರೋಲ್ ಬೆಲೆ ಏರುತ್ತಲೇ ಇರುತ್ತದೆ. ಆದರೆ ಈ ವಿಧಾನವನ್ನು ಅನುಸರಿಸಿದರೆ ಕಡಿಮೆ ಬೆಲೆಗೆ ಪೆಟ್ರೋಲ್ ಖರೀದಿ ಸಾಧ್ಯವಾಗುತ್ತದೆ. ಹೀಗೆ ಮಾಡಿದರೆ ಪೆಟ್ರೋಲ್ ತುಂಬಿಸುವಲ್ಲಿ ಕ್ಯಾಶ್‌ಬ್ಯಾಕ್ (Cash Back)ಪಡೆಯಬಹುದು. ಇಂದಿನ ದಿನಗಳಲ್ಲಿ ಪ್ರತಿ ಪೆಟ್ರೋಲ್ ಪಂಪ್‌ಗಳು Paytm ಮೂಲಕ ಪಾವತಿಸುವ ಆಯ್ಕೆಯನ್ನು ಒದಗಿಸುತ್ತದೆ. ಪೆಟ್ರೋಲ್ ತುಂಬಲು ಕಾರ್ಡ್ ಅಥವಾ ನಗದು ಬಳಸಿದರೆ, ಕ್ಯಾಶ್‌ಬ್ಯಾಕ್‌ನ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಕ್ಯಾಶ್‌ಬ್ಯಾಕ್ ಪಡೆಯಬೇಕಾದರೆ Paytm ಅನ್ನು ಬಳಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

IOCL ಪೆಟ್ರೋಲ್ ಪಂಪ್‌ಗಳಲ್ಲಿ PayTM :
Paytmನಲ್ಲಿ 25 ರೂ.ವರೆಗೆ ಕ ಪಡೆಯಿರಿ ಕ್ಯಾಶ್ ಬ್ಯಾಕ್ : 
ಪೆಟ್ರೋಲ್ ತುಂಬಿಸುವಲ್ಲಿ ಕ್ಯಾಶ್‌ಬ್ಯಾಕ್ ಪಡೆಯಬೇಕಾದರೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನ ಪೆಟ್ರೋಲ್ ಪಂಪ್‌ನಿಂದ Paytm ಮೂಲಕ ಪೆಟ್ರೋಲ್ ತುಂಬಬೇಕು. ಆಯ್ದ IOCL ಪೆಟ್ರೋಲ್ ಪಂಪ್‌ಗಳಲ್ಲಿ Paytm ಬಳಸಿಕೊಂಡು ಪಾವತಿ ಮಾಡಿದರೆ, ಗ್ರಾಹಕರು 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಕನಿಷ್ಠ 100 ರೂಪಾಯಿಗಳ ವಹಿವಾಟುಗಳಿಗೆ ಈ ಕೊಡುಗೆ ಮಾನ್ಯವಾಗುತ್ತದೆ ಎನ್ನಲಾಗಿದೆ. ಪ್ರತಿ ಬಳಕೆದಾರರು ತಿಂಗಳಿಗೆ 4 ಬಾರಿ ಮಾತ್ರ ಕ್ಯಾಶ್‌ಬ್ಯಾಕ್ (Cash back)ಪಡೆಯಬಹುದು.  


ಇದನ್ನೂ ಓದಿ :  HDFC Bank Merger: HDFC LTD- HDFC ಬ್ಯಾಂಕ್‌ಗಳ ವಿಲೀನಕ್ಕೆ ಏನು ಕಾರಣ- ಅದರ ಪ್ರಯೋಜನವೇನು


IOCL ಪೆಟ್ರೋಲ್ ಪಂಪ್‌ಗಳಲ್ಲಿ ಮಾತ್ರ ಕ್ಯಾಶ್‌ಬ್ಯಾಕ್ ಸೌಲಭ್ಯ : 
ಈ ಕೊಡುಗೆಯಲ್ಲಿ ಗರಿಷ್ಠ ಕ್ಯಾಶ್‌ಬ್ಯಾಕ್ ಪ್ರತಿ ವಹಿವಾಟಿಗೆ ರೂ.25 ಆಗಿದರುತ್ತದೆ.  cashback ಅನ್ನು 48  ವರ್ಕಿಂಗ್ ಅವರ್ ನಲ್ಲಿ ಕ್ರೆಡಿಟ್ (Credit) ಮಾಡಲಾಗುತ್ತದೆ. ಈ ಅಭಿಯಾನವು ಆಯ್ದ IOCL ಪೆಟ್ರೋಲ್ ಪಂಪ್‌ಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಇದು 3 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಯಾವುದೇ ಪೂರ್ವ ಸೂಚನೆ ಇಲ್ಲದೆಯೇ ಈ ಆಫರ್ ಅನ್ನು ಬದಲಾಯಿಸುವ/ಮಾರ್ಪಡಿಸುವ ಅಥವಾ ನಿಲ್ಲಿಸುವ ಹಕ್ಕನ್ನು Paytm ಸಂಪೂರ್ಣವಾಗಿ ಕಾಯ್ದಿರಿಸಿಕೊಂಡಿದೆ.


QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮಾತ್ರ ಕ್ಯಾಶ್‌ಬ್ಯಾಕ್ ಪಡೆಯಬಹುದು : 
QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಯನ್ನು ಮಾಡಿದರೆ ಆಫರ್ ಮಾನ್ಯವಾಗಿರುತ್ತದೆ. ಹೆಚ್ಚುವರಿ ರಿವಾರ್ಡ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಗ್ರಾಹಕರು ಹೆಚ್ಚುವರಿ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು.  ನಿಯಮಗಳು ಮತ್ತು ಷರತ್ತುಗಳ ಪ್ರಕಾರ 0.75 ಶೇಕಡಾ ಡಿಜಿಟಲ್ ಇನ್ಸೆನ್ ಟಿವ್ ಪ ಡೆಯಬಹುದು. 


ಇದನ್ನೂ ಓದಿ : 2022 MG ZS EV: ಒಂದೇ ಚಾರ್ಜ್‌ನಲ್ಲಿ 461 KM ವರೆಗೆ ಚಲಿಸುತ್ತಂತೆ ಈ SUV


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.