ಸ್ಮಾರ್ಟ್ ಫೋನ್ ಡಿಸ್ಪ್ಲೇ ಹೋದರೆ ಉಚಿತವಾಗಿ ಬದಲಿಸಲಿದೆ ಕಂಪನಿ, ಜೊತೆಗೆ ಸಿಗಲಿದೆ 10 ಸಾವಿರ ರೂ.ಗಳ ಲಾಭ

ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು  Vivo X60, Vivo V21 ಮತ್ತು Vivo Yಸರಣಿಯಲ್ಲಿ ಈ ಆಫರ್  ನೀಡುತ್ತಿದೆ. ಈ ಆಫರ್ ಆಗಸ್ಟ್ 11 ರಿಂದ ಆರಂಭವಾಗಿದ್ದು, ಆಗಸ್ಟ್ 23 ರವರೆಗೆ ಮುಂದುವರಿಯಲಿದೆ. 

Written by - Ranjitha R K | Last Updated : Aug 13, 2021, 07:18 PM IST
  • ವಿವೋ ನೀಡುತ್ತಿದೆ ವಿಶೇಷ ಕೊಡುಗೆ
  • ಡಿಸ್‌ಪ್ಲೇ ಮುರಿದರೆ ಉಚಿತವಾಗಿ ಬದಲಾಯಿಸಲಿದೆ ಕಂಪನಿ
  • ಸಿಗಲಿದೆ 10 ಸಾವಿರದವರೆಗೆ ಲಾಭ
ಸ್ಮಾರ್ಟ್ ಫೋನ್ ಡಿಸ್ಪ್ಲೇ ಹೋದರೆ ಉಚಿತವಾಗಿ ಬದಲಿಸಲಿದೆ ಕಂಪನಿ, ಜೊತೆಗೆ ಸಿಗಲಿದೆ 10 ಸಾವಿರ ರೂ.ಗಳ ಲಾಭ  title=
ವಿವೋ ನೀಡುತ್ತಿದೆ ವಿಶೇಷ ಕೊಡುಗೆ (file photo)

ನವದೆಹಲಿ : ಸ್ಮಾರ್ಟ್ಫೋನ್ ತಯಾರಕ ವಿವೋ (Vivo) ಗ್ರಾಹಕರನ್ನು ಓಲೈಸಲು ವಿಶೇಷ ಕೊಡುಗೆಯನ್ನು ನೀಡಿದೆ. ಇದರ ಅಡಿಯಲ್ಲಿ, ಸ್ಮಾರ್ಟ್ ಫೋನ್  ಡಿಸ್ ಪ್ಲೇ (Smartphone display) ಮುರಿದರೆ, ಕಂಪನಿಯು ಅದನ್ನು ಉಚಿತವಾಗಿ ಬದಲಾಯಿಸುತ್ತದೆ. ಇದಷ್ಟೇ ಅಲ್ಲ, 10 ಸಾವಿರ ರೂಪಾಯಿವರೆಗಿನ ಲಾಭವನ್ನು ಗ್ರಾಹಕರಿಗೆ ನೀಡಲಾಗುವುದು.

ಡಿಸ್ ಪ್ಲೇಯನ್ನು ಉಚಿತವಾಗಿ ಬದಲಾಯಿಸಲಾಗುವುದು : 
ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು  Vivo X60, Vivo V21 ಮತ್ತು Vivo Yಸರಣಿಯಲ್ಲಿ ಈ ಆಫರ್  ನೀಡುತ್ತಿದೆ. ಈ ಆಫರ್ ಆಗಸ್ಟ್ 11 ರಿಂದ ಆರಂಭವಾಗಿದ್ದು, ಆಗಸ್ಟ್ 23 ರವರೆಗೆ ಮುಂದುವರಿಯಲಿದೆ. ಈ ಸಮಯದಲ್ಲಿ, ಬಳಕೆದಾರರು ಅಮೆಜಾನ್-ಫ್ಲಿಪ್‌ಕಾರ್ಟ್‌ನಂತಹ (Amazon) ಇ-ಕಾಮರ್ಸ್ ಸೈಟ್‌ಗಳಿಂದ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕಾಗುತ್ತದೆ. ಇದರ ಮೇಲೆ ಅವರು ಕಾರ್ಡ್ ಆಫರ್‌ಗಳು, ಇಎಂಐ ಆಫರ್‌ಗಳು (EMI Offer) , ಒನ್ ಟೈಮ್ ಸ್ಕ್ರೀನ್ ರಿಪ್ಲೇಸ್‌ಮೆಂಟ್, ಉಚಿತ ಲ್ಯಾಪ್‌ಟಾಪ್ ಬ್ಯಾಕ್‌ಪ್ಯಾಕ್, ಎಕ್ಸ್ ಟೆಂಡೆಡ್ ವಾರಂಟಿಯಂತಹ ಆಫರ್ ಗಳನ್ನು ಪಡೆಯುತ್ತಾರೆ. 

ಇದನ್ನೂ ಓದಿ : ಈಗ ಇನ್ನೂ ಹೆಚ್ಚು ಜನ ವೀಕ್ಷಿಸಬಹುದು ನಿಮ್ಮ whatsaap ಸ್ಟೇಟಸ್, ಬಂದಿದೆ ಹೊಸ ಫೀಚರ್

ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ:
Vivo X60, Vivo V21  ಮತ್ತು Vivo Y ಸರಣಿಯ ಮೇಲೆ  HDFC, ICICI ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ (Debit card)  ಮೂಲಕ 10 ಶೇಕಡಾ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಬಜಾಜ್ ಫಿನ್‌ಸರ್ವ್ ಟ್ರಿಪಲ್ zero ಇಎಂಐ ಯೋಜನೆಯಡಿ 10 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ (Cashback) ನೀಡಲಾಗುವುದು. ಅಲ್ಲದೆ, ವಿವೋ ಎಕ್ಸ್ 60, ವಿವೋ ವಿ 21 ಮತ್ತು ವಿವೋ ವೈ ಸರಣಿಯಲ್ಲಿ 6 ತಿಂಗಳ ಒಳಗೆ ಒಮ್ಮೆ ಸ್ಕ್ರೀನ್ ರಿಪ್ಲೇಸ್ಮೆಂಟ್ ಮಾಡಲಾಗುವುದು. ಫೋನ್‌ಗಳನ್ನು ನೋ ಕಾಸ್ಟ್ ಇಎಂಐ ಅಡಿಯಲ್ಲಿ ಖರೀದಿಸಬಹುದು. 

6 ತಿಂಗಳ ಎಕ್ಸ್ ಟೆಂಡೆಡ್ ವಾರಂಟಿ :
ಕಂಪನಿಯ ಪ್ರಕಾರ, ಈ ಕೊಡುಗೆಯನ್ನು ಓಣಂ ದೃಷ್ಟಿಯಿಂದ ನೀಡಲಾಗಿದೆ. ಆದ್ದರಿಂದ, ಹೊಸ ವಿವೋ ಫೋನ್‌ಗಳ (Vivo phone) ಖರೀದಿಯಲ್ಲಿ, ಬಳಕೆದಾರರಿಗೆ ಖಚಿತವಾದ ಉಡುಗೊರೆಗಳನ್ನು ನೀಡಲಾಗುತ್ತಿದೆ. ಈ ಫೋನ್‌ಗಳೊಂದಿಗೆ ಫ್ರೀ ಬ್ಯಾಕಪ್ ಕೂಡಾ ನೀಡಲಾಗುವುದು. ಇದಕ್ಕಾಗಿ, 15,000 ರೂ. ಗಿಂತ ಹೆಚ್ಚು ಮೌಲ್ಯದ ಖರೀದಿಯನ್ನು ಮಾಡಬೇಕಾಗುತ್ತದೆ. ಅಲ್ಲದೆ, 15,000 ರೂ.ಗಿಂತ ಕಡಿಮೆ ಉತ್ಪನ್ನಗಳ ಖರೀದಿಗೆ 6 ತಿಂಗಳ ಎಕ್ಸ್ ಟೆಂಡೆಡ್ ವಾರಂಟಿಯನ್ನು ನೀಡಲಾಗುತ್ತಿದೆ. ಎಕ್ಸ್ ಟೆಂಡೆಡ್ ವಾರಂಟಿ ಆಫರ್ ಆಗಸ್ಟ್ 25 ರವರೆಗೆ ಮಾನ್ಯವಾಗಿರುತ್ತದೆ. 

ಇದನ್ನೂ ಓದಿ : Xiaomi: ನೀವೂ ಈ MI ಫೋನ್ ಖರೀದಿಸಿದ್ದರೆ, ನಿಮ್ಮ ಫುಲ್ ಹಣ ವಾಪಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News