Voter ID Latest News : ಕಳೆದ ತಿಂಗಳು ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ ಈ ಬಾರಿ ಲೋಕಸಭೆ ಚುನಾವಣೆ ದೇಶಾದ್ಯಂತ 7 ಹಂತಗಳಲ್ಲಿ ನಡೆಯಲಿದೆ. ದೇಶಾದ್ಯಂತ 26 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.ಲೋಕಸಭೆ ಚುನಾವಣೆ ಜತೆಗೆ ಈ 26 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ದೇಶಾದ್ಯಂತ ಚುನಾವಣಾ ನೀತಿ ನಿಯಮಗಳು ಜಾರಿಗೆ ಬಂದಿವೆ.ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಡ್ಡಾಯವಾಗಿ ಸೇರಿಸಿರಲೇಬೇಕು. ಆ ಮೂಲಕ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತದಾರರ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಬಹುದು. 


ಇದನ್ನೂ ಓದಿ : Gold And Silver Price: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಚಿನ್ನ ಹಾಗೂ ಬೆಳ್ಳಿಯ ದರ: ಇಂದಿನ ಬೆಲೆಯೆಷ್ಟು ಗೊತ್ತೇ?


ಯಾವ ರಾಜ್ಯಗಳಲ್ಲಿ ಲೋಕಸಭೆಯ ಮೊದಲ ಹಂತದ ಚುನಾವಣೆ :  
ಅಸ್ಸಾಂ,ಬಿಹಾರ,ಮಧ್ಯಪ್ರದೇಶ,ಮಹಾರಾಷ್ಟ್ರ,ರಾಜಸ್ಥಾನ,ತಮಿಳುನಾಡು ಮತ್ತು ಉತ್ತರಾಖಂಡದಲ್ಲಿ ನಾಳೆ ಲೋಕಸಭೆ ಚುನಾವಣೆ ನಡೆಯಲಿದೆ. 


ದೇಶದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ. 


ಮತದಾರರ ಗುರುತಿನ ಚೀಟಿ ಇಲ್ಲದೆ ಮತ ಚಲಾಯಿಸಬಹುದೇ? : 
ಮತದಾರರ ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದರೆ ಅಥವಾ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಕೂಡಾ ಚುನಾವಣೆಯಲ್ಲಿ ನೀವು ಮತ ಚಲಾಯಿಸಬಹುದು.ಆದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು  ಕಡ್ಡಾಯವಾಗಿ ಇರಬೇಕು.


ಇದನ್ನೂ ಓದಿ : ಜಮೀನಿನಲ್ಲಿ ಜಪಾನ್ ಕರೆನ್ಸಿ ಬೆಳೆಯುತ್ತಿದ್ದಾರೆ ರೈತರು !ಕಂತೆ ಕಂತೆ ಹರಿದು ಬರುತ್ತಿದೆ ಹಣ


ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ವೋಟರ್ ಐಡಿ ಇಲ್ಲದೆಯೂ ನೀವು ಮತ ​​ಚಲಾಯಿಸಬಹುದು. ಅಲ್ಲದೆ, ಚುನಾವಣೆಯಲ್ಲಿ ಮತ ಚಲಾಯಿಸಲು ಬೇರೆ ಯಾವುದೇ ಗುರುತಿನ ಪುರಾವೆಗಳನ್ನು ಬಳಸಬಹುದು.ಆಧಾರ್ ಕಾರ್ಡ್,ವಿಮೆ ಸ್ಮಾರ್ಟ್ ಕಾರ್ಡ್, ಪ್ಯಾನ್ ಕಾರ್ಡ್, MNREGA ಜಾಬ್ ಕಾರ್ಡ್,ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್‌ಪೋರ್ಟ್ ಇತ್ಯಾದಿಗಳನ್ನು ತೋರಿಸಿ ಚುನಾವಣೆಯಲ್ಲಿ ಮತ ಚಲಾಯಿಸಬಹುದು.


ಯಾರು ಮತ ಚಲಾಯಿಸುವಂತಿಲ್ಲ :
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಿದ್ದರೆ ನೀವು ಮತ ​​ಚಲಾಯಿಸಬಹುದು. ಆದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ನೀವು ಮತ ​​ಚಲಾಯಿಸುವಂತಿಲ್ಲ.


ಈ ಮಧ್ಯೆ ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ನಿಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದು.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://hindi.eci.gov.in/ ನಿಂದ ಅರ್ಜಿ ಸಲ್ಲಿಸಿ .ಇದಲ್ಲದೆ, ನೀವು ಆಫ್‌ಲೈನ್ ಮೋಡ್‌ನಲ್ಲಿಯೂ ನಿಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದು.ಇದಕ್ಕಾಗಿ ಸಮೀಪದ ಮತಗಟ್ಟೆ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.