Gold Price : ಕಳೆದ ಕೆಲವು ವರ್ಷಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ.ಭಾರತದಲ್ಲಿ ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.ಇದರೊಂದಿಗೆ ಬೆಳ್ಳಿ ಬೆಲೆಯೂ ಏರಿಕೆಯಾಗುತ್ತಿದೆ.ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳು ಚಿನ್ನದ ಬೆಲೆಗಳಲ್ಲಿ ಇನ್ನಷ್ಟು ಏರಿಕೆಯಾಗಲು ಕಾರಣವಾಗಿದೆ.
ತಜ್ಞರ ಅಭಿಪ್ರಾಯ :
ವಿಶ್ವದಾದ್ಯಂತ ಬೆಳೆಯುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬರುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ವೇಗವಾಗಿ ಏರಿಕೆ ಕಂಡು ಬರುತ್ತಿದೆ. ಈ ವರ್ಷ ಇಲ್ಲಿಯವರೆಗೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ.ಅದೇ ರೀತಿ ಈ ವರ್ಷ ಬೆಳ್ಳಿಯಲ್ಲಿ ಕೆಜಿಗೆ 10 ಸಾವಿರ ಏರಿಕೆ ಕಂಡು ಬಂದಿದೆ.
ಇದನ್ನೂ ಓದಿ : Gold And Silver Price: ರಾಮನವಮಿಯಂದು ಗಗನಕ್ಕೇರಿದ ಚಿನ್ನ ಹಾಗೂ ಬೆಳ್ಳಿಯ ದರ: ಇಂದಿನ ಬೆಲೆಯನ್ನು ಪರಿಶೀಲಿಸಿ!
2024 ರ ಆರಂಭದಲ್ಲಿ, ಜನವರಿ 1 ರಂದು ಚಿನ್ನದ ಬೆಲೆ 63302 ರೂಪಾಯಿಗಳಷ್ಟಿತ್ತು.ಆದರೆ ಇದೀಗ 73,514 ರೂಪಾಯಿಗಳ ಮಟ್ಟ ತಲುಪಿದೆ. ಹಾಗೆ ನೋಡಿದರೆ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಅಂದರೆ ಸುಮಾರು 100 ದಿನಗಳಲ್ಲಿ ಚಿನ್ನದ ಬೆಲೆ 10,212 ರೂಪಾಯಿ ಏರಿಕೆಯಾಗಿದೆ. ಜನವರಿ 1 ರಂದು ಬೆಳ್ಳಿಯ ಬೆಲೆ ಕೆಜಿಗೆ 73,395 ರೂಪಾಯಿಗಳಾಗಿದ್ದರೆ, ಇದೀಗ 83,632 ರೂಪಾಯಿಗಳ ಮಟ್ಟಕ್ಕೆ ತಲುಪಿದೆ. ಅಂದರೆ ಬೆಳ್ಳಿಯ ಬೆಲೆಯೂ 10 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣಗಳು!
1. ಇಸ್ರೇಲ್-ಇರಾನ್, ಇಸ್ರೇಲ್-ಹಮಾಸ್, ರಷ್ಯಾ-ಉಕ್ರೇನ್‌ನಂತಹ ರಾಜಕೀಯ ಉದ್ವಿಗ್ನತೆಗಳು
2. ಜಾಗತಿಕ ಆರ್ಥಿಕ ಹಿಂಜರಿತ
3. ಕೇಂದ್ರೀಯ ಬ್ಯಾಂಕುಗಳಿಂದ ಚಿನ್ನದ ಖರೀದಿ ಮುಂದುವರಿಕೆ ಮತ್ತು ಮೀಸಲು ಹೆಚ್ಚಳ
4. ಹಣದುಬ್ಬರ
5. ಫೆಡರಲ್ ರಿಸರ್ವ್ ದರ ಕಡಿತದ ಭಯ
6. ಭೌತಿಕ ಚಿನ್ನ ಖರೀದಿಸುವಲ್ಲಿ ಉತ್ಸಾಹ
7. ದೊಡ್ಡ ಇಟಿಎಫ್‌ಗಳಿಂದ ಭಾರೀ ಬೇಡಿಕೆ
8. 2016 ರಿಂದ ಚಿನ್ನದ ಉತ್ಪಾದನೆಯಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ.
ಇದನ್ನೂ ಓದಿ : ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.