Indian Railways: ಚಾರ್ಟ್ ಸಿದ್ಧಪಡಿಸಿದ ನಂತರವೂ ಕ್ಯಾನ್ಸಲ್ ಮಾಡಿದ ಟಿಕೆಟ್ಗಳಿಗೆ ಆಗಲಿದೆ ರೀ ಫಂಡ್
Indian Railways: ಯಾವುದೇ ತುರ್ತು ಕಾರಣದಿಂದ ಚಾರ್ಟ್ ಸಿದ್ದಪಡಿಸಿದ ನಂತರ ರೈಲು ಟಿಕೆಟ್ ಅನ್ನು ರದ್ದುಗೊಳಿಸಬೇಕಾದರೆ, ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು.
ನವದೆಹಲಿ : Indian Railways: ಭಾರತದಲ್ಲಿ ಪ್ರತಿದಿನ ಕೋಟಿಗಟ್ಟಲೆ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದ್ದರಿಂದ ರೈಲ್ವೇಗೆ ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯವಾಗಿದೆ (Indian Railway rules). ಕೆಲವೊಮ್ಮೆ ರೈಲು ಚಾರ್ಟ್ ಸಿದ್ಧಪಡಿಸಿದ ನಂತರವೂ, ಟಿಕೆಟ್ ಕ್ಯಾನ್ಸಲ್ ಮಾಡುವ ಪರಿಸ್ಥಿತಿ ಎದುರಾಗುತ್ತದೆ (Ticket cancellation rules). ಈಗ ಕೊನೆ ಘಳಿಗೆಯಲ್ಲಿ ರೈಲು ಟಿಕೆಟ್ ರದ್ದು ಮಾಡಿದರೂ ರೀ ಫಂಡ್ ಆಗಲಿದೆ (Railway refund rules). ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ರೈಲ್ವೆ, ಚಾರ್ಟ್ ಸಿದ್ಧಪಡಿಸಿದ ನಂತರ ಕಾರಣಗಳಿಂದ ರೈಲು ಟಿಕೆಟ್ ಅನ್ನು ರದ್ದುಪಡಿಸಿದರೆ, ಮರುಪಾವತಿಯನ್ನು ಕ್ಲೈಮ್ ಮಾಡಬಹುದು ಎಂದು ಹೇಳಿದೆ.
IRCTC ನೀಡಿದೆ ಮಾಹಿತಿ :
IRCTC ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದೆ. ಪ್ರಯಾಣಿಸದೇ ಇದ್ದ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಮರುಪಾವತಿಯನ್ನು ನೀಡುವುದಾಗಿ, ಭಾರತೀಯ ರೈಲ್ವೇಯು ಹೇಳಿದೆ (Indian Railway). ಇದಕ್ಕಾಗಿ, ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ಡಿಪೋಸಿಟ್ ರಸೀದಿಯನ್ನು (TDR)ಸಲ್ಲಿಸಬೇಕು.
ಗ್ರಾಹಕರಿಗೆ ಮುನ್ನೆಚ್ಚರಿಕೆ ನೀಡಿದ SBI; 4 ದಿನಗಳವರೆಗೆ ಬ್ಯಾಂಕ್ ವ್ಯವಹಾರ ಇರುವುದಿಲ್ಲ
ಆನ್‌ಲೈನ್‌ನಲ್ಲಿ TDR ಅನ್ನು ಹೇಗೆ ಸಲ್ಲಿಸುವುದು ?
1.ಇದಕ್ಕಾಗಿ, ನೀವು ಮೊದಲು IRCTC ಯ ಅಧಿಕೃತ ವೆಬ್‌ಸೈಟ್ www.irctc.co.in ಗೆ ಹೋಗಿ .
-2.ಈಗ ಮುಖಪುಟಕ್ಕೆ ಹೋಗಿ ಮತ್ತುMy Account ಮೇಲೆ ಕ್ಲಿಕ್ ಮಾಡಿ
3. ಈಗ ಡ್ರಾಪ್ ಡೌನ್ ಮೆನುಗೆ ಹೋಗಿ, My transaction ಮೇಲೆ ಕ್ಲಿಕ್ ಮಾಡಿ.
4.ಇಲ್ಲಿ ನೀವು ಫೈಲ್ TDR ಆಯ್ಕೆಯಲ್ಲಿನ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುವ ಮೂಲಕ TDR ಫೈಲ್ ಮಾಡಿ .
5.ಈಗ ಯಾರ ಹೆಸರಿನಲ್ಲಿ ಟಿಕೆಟ್ ಬುಕ್ ಆಗಿದೆ ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.
6.ಈಗ ಇಲ್ಲಿ ನೀವು ನಿಮ್ಮ PNR ಸಂಖ್ಯೆ, ರೈಲು ಸಂಖ್ಯೆ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ರದ್ದತಿ ನಿಯಮಗಳ ಬಾಕ್ಸ್ ಅನ್ನು ಟಿಕ್ ಮಾಡಿ.
7.ಈಗ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದರ ನಂತರ ಬುಕಿಂಗ್ ಸಮಯದಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
8. ಇಲ್ಲಿ OTP ನಮೂದಿಸಿದ ನಂತರ, ಸಬ್ಮಿಟ್ ಮಾಡಿ.
9. PNR ವಿವರಗಳನ್ನು ಪರಿಶೀಲಿಸಿ ಮತ್ತು ಟಿಕೆಟ್ ಕ್ಯಾನ್ಸಲ್ ಆಯ್ಕೆಯನ್ನು ಕ್ಲಿಕ್ ಮಾಡಿ.
10. ನಂತರ ಪುಟದಲ್ಲಿ ಮರುಪಾವತಿ ಮೊತ್ತಕಾಣಿಸುತ್ತದೆ.
ಬುಕಿಂಗ್ ಫಾರ್ಮ್‌ನಲ್ಲಿ ನೀಡಲಾದ ಸಂಖ್ಯೆಗೆ PNR ಮತ್ತು ಮರುಪಾವತಿಯ ವಿವರಗಳನ್ನು ಒಳಗೊಂಡಿರುವ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.
ಇದನ್ನೂ ಓದಿ : Petrol, Diesel Latest Price: ಬೆಲೆಯೇರಿಕೆ ಶಾಕ್- ಪೆಟ್ರೋಲ್- ಡೀಸೇಲ್ ಬೆಲೆ ಎರಡನೇ ದಿನವೂ ಏರಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.