ಮುಖಾಮುಖಿಯಾಗಲಿದೆ 160 KM ವೇಗದಲ್ಲಿ ಚಲಿಸುತ್ತಿರುವ ಎರಡು ರೈಲುಗಳು, ಒಂದರಲ್ಲಿ ಪ್ರಯಾಣಿಸುತ್ತಿದ್ದಾರೆ ರೈಲ್ವೆ ಸಚಿವರು

ಭಾರತೀಯ ರೈಲ್ವೆಗೆ ಇಂದು ಐತಿಹಾಸಿಕ ದಿನವಾಗಲಿದೆ. ಇಂದು ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಲಿದೆ. 

Written by - Ranjitha R K | Last Updated : Mar 4, 2022, 12:02 PM IST
  • ರೈಲ್ವೆ ರಕ್ಷಣಾ ತಂತ್ರಜ್ಞಾನ ರಕ್ಷಾಕವಚದ ಪರೀಕ್ಷೆ
  • ಪೂರ್ಣ ವೇಗದಲ್ಲಿ ಚಲಿಸಲಿರುವ ಎರಡು ರೈಲುಗಳು
  • ಒಂದು ರೈಲಿನಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಯಾಣ
ಮುಖಾಮುಖಿಯಾಗಲಿದೆ 160 KM ವೇಗದಲ್ಲಿ ಚಲಿಸುತ್ತಿರುವ ಎರಡು ರೈಲುಗಳು,  ಒಂದರಲ್ಲಿ ಪ್ರಯಾಣಿಸುತ್ತಿದ್ದಾರೆ ರೈಲ್ವೆ ಸಚಿವರು    title=
ರೈಲ್ವೆ ರಕ್ಷಣಾ ತಂತ್ರಜ್ಞಾನ ರಕ್ಷಾಕವಚದ ಪರೀಕ್ಷೆ (file photo)

ನವದೆಹಲಿ : ಭಾರತೀಯ ರೈಲ್ವೇ ತನ್ನ ಸೇವೆಗಳು ಮತ್ತು ತಂತ್ರಜ್ಞಾನವನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿದೆ (Indian Railway). ಇಂದು ಭಾರತೀಯ ರೈಲ್ವೆ ಪಾಲಿಗೆ ಐತಿಹಾಸಿಕ ದಿನವಾಗಲಿದೆ. ಇಂದು ಎರಡು ರೈಲುಗಳು ಪೂರ್ಣ ವೇಗದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಿಂದ ಸಂಚರಿಸಲಿದೆ. ಈ ಸಂದರ್ಭದಲ್ಲಿ ಒಂದು ರೈಲಿನಲ್ಲಿ ಸ್ವತಃ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav)ಮತ್ತು ಇನ್ನೊಂದು ರೈಲಿನಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಪ್ರಯಾಣಿಸಲಿದ್ದಾರೆ.

ನಡೆಯಲಿದೆ ಸ್ವದೇಶಿ ತಂತ್ರಜ್ಞಾನದ ರಕ್ಷಾಕವಚದ ಪರೀಕ್ಷೆ : 
ರೈಲ್ವೇ (Indian Railway) ಇಂದು ಸ್ಥಳೀಯ ರೈಲು ಡಿಕ್ಕಿ ರಕ್ಷಣೆ ತಂತ್ರಜ್ಞಾನ 'ಕವಚ್' ಅನ್ನು ಪರೀಕ್ಷಿಸಲಿದೆ. ಈ ಪರೀಕ್ಷೆಯು ಸಿಕಂದರಾಬಾದ್‌ನಲ್ಲಿ ನಡೆಯಲಿದೆ.  ಈ ಪರೀಕ್ಷಾರ್ಥವಾಗಿ ಎರಡು ರೈಲುಗಳು ಪೂರ್ಣ ಪ್ರಮಾಣದ ವೇಗದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಿಂದ ಚಲಿಸಲಿವೆ. ಆದರೆ 'ರಕ್ಷಾಕವಚ'ದ (Raksha Kavach)ಪರಿಣಾಮವಾಗಿ ಈ ಎರಡು ರೈಲುಗಳು ಡಿಕ್ಕಿಯಾಗುವುದಿಲ್ಲ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ :  Aadhaar Card: ಮಿಸ್ ಆಗಿ ಕೂಡ ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಹಲವು ವರ್ಷಗಳ ಸಂಶೋಧನೆಯ ನಂತರ ತಂತ್ರಜ್ಞಾನ ಅಭಿವೃದ್ಧಿ :
ಹಲವು ವರ್ಷಗಳ ಸಂಶೋಧನೆಯ ನಂತರ ರೈಲ್ವೇ ಸಚಿವಾಲಯ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ (Indian Railway system). ಭಾರತೀಯ ರೈಲ್ವೇ ಅಭಿವೃದ್ಧಿಪಡಿಸಿದ ಈ ಕವಚ್ ತಂತ್ರಜ್ಞಾನವು ವಿಶ್ವದ ಅತ್ಯಂತ ಅಗ್ಗದ ಸ್ವಯಂಚಾಲಿತ ರೈಲು ಡಿಕ್ಕಿ ರಕ್ಷಣೆ ವ್ಯವಸ್ಥೆಯಾಗಿದೆ ಎನ್ನಲಾಗಿದೆ. ಈ ತಂತ್ರಜ್ಞಾನವು ಝೀರೋ ಆಕ್ಸಿಡೆಂಟ್ (Zero Accident) ಗುರಿಯನ್ನು ಹೊಂದಿದೆ. ಈ ವ್ಯವಸ್ಥೆಯ ಪ್ರಕಾರ ರೆಡ್ ಸಿಗ್ನಲ್ ದಾಟಿದ ತಕ್ಷಣ  ಸ್ವಯಂಚಾಲಿತವಾಗಿ ರೈಲಿಗೆ ಬ್ರೇಕ್ ಹಾಕುವುದು ಸಾಧ್ಯವಾಗುತ್ತದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು. ಹೀಗಾದಾಗ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ರೈಲುಗಳು ನಿಲ್ಲುತ್ತವೆ. ಇದಲ್ಲದೆ, ರಕ್ಷಾಕವಚವು ಹಿಂದಿನಿಂದ ಬರುವ ರೈಲನ್ನು ಸಹ ರಕ್ಷಿಸುತ್ತದೆ.

ವ್ಯವಸ್ಥೆಯು ಈ ರೀತಿ ಕಾರ್ಯನಿರ್ವಹಿಸುತ್ತದೆ :
ಅಧಿಕಾರಿಗಳ ಪ್ರಕಾರ, ಚಾಲಕನಿಂದ ಯಾವುದೇ  ಲೋಪ ಉಂಟಾದರೆ ಕವಚ್ ಆಡಿಯೊ-ವಿಡಿಯೋ ಮೂಲಕ ಮೊದಲು ಎಚ್ಚರಿಸುತ್ತದೆ. ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ರೈಲಿನಲ್ಲಿ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಇದರೊಂದಿಗೆ, ಈ ವ್ಯವಸ್ಥೆಯು ರೈಲು ನಿಗದಿತ ವಿಭಾಗದ ವೇಗಕ್ಕಿಂತ ವೇಗವಾಗಿ ಓಡಲು ಅನುಮತಿಸುವುದಿಲ್ಲ. ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ ಒಳಗೆ ಅಳವಡಿಸಲಾಗುವುದು. ಜಿಪಿಎಸ್, ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ :  American Stock: ಇನ್ಮುಂದೆ ಭಾರತೀಯ ಹೂಡಿಕೆದಾರರು ಕೂಡ ಅಮೇರಿಕ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News