ನಿಮ್ಮ ಬಳಿ 2000 ರೂಪಾಯಿಯ ಹರಿದ ನೋಟ್ ಇದ್ದರೆ ಎಕ್ಸ್ಚೇಂಜ್ ವೇಳೆ ಬ್ಯಾಂಕ್ ನಿಮಗೆ ಕೊಡುವ ಹಣ ಎಷ್ಟು ?
2000 ರೂಪಾಯಿ ನೋಟನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಬಹುದು ಅಥವಾ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೆ, 2000 ರೂಪಾಯಿ ನೋಟು ಬದಲಾವಣೆ ಮಾಡಬೇಕೆನ್ನುವ ವೇಳೆ ಹಲವು ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ.
ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2000 ರೂಪಾಯಿ ನೋಟನ್ನು ಚಲಾವಣೆಯನ್ನು ನಿಲ್ಲಿಸಿದೆ. ಇದೀಗ 2000 ರೂಪಾಯಿ ನೋಟನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ. ಆದರೆ ನಿಮ್ಮ ಬಳಿ 2000 ರೂಪಾಯಿಯ ಹರಿದ ನೋಟು ಇದ್ದರೆ ಆ ನೋಟನ್ನು ಬ್ಯಾಂಕ್ ನಲ್ಲಿ ಬದಲಾಯಿಸುವುದು ಸಾಧ್ಯವೇ? ಒಂದು ವೇಳೆ ಹರುದ 2000 ರೂಪಾಯಿ ನೋಟನ್ನು ನೀಡಿದರೆ ಬ್ಯಾಂಕ್ ನಿಮಗೆ ಎಷ್ಟು ಹಣ ವಾಪಸ್ ನೀಡುತ್ತದೆ ತಿಳಿದಿದೆಯೇ? ಈ ಬಗ್ಗೆ ಮಾಹಿತಿ ಇಲ್ಲಿದೆ.
ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು :
RBI, ನೀಡಿದ ಮಾಹಿತಿ ಪ್ರಕಾರ, ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ 2000 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳುವ ಅವಕಾಶವಿದೆ. ಈ ಅವಧಿಯಲ್ಲಿ ಒಂದೋ 2000 ರೂಪಾಯಿ ನೋಟನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಬಹುದು ಅಥವಾ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೆ, 2000 ರೂಪಾಯಿ ನೋಟು ಬದಲಾವಣೆ ಮಾಡಬೇಕೆನ್ನುವ ವೇಳೆ ಹಲವು ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ.
ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ..!
ಹರಿದ ನೋಟುಗಳನ್ನು ಬದಲಾಯಿಸಿಕೊಂಡರೆ ಕಡಿಮೆ ಹಣ ಸಿಗುತ್ತದೆ :
ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಹರಿದ ನೋಟುಗಳನ್ನು ಸಹ ಬದಲಾಯಿಸಬಹುದು. ಆದರೆ ಅನುಪಯುಕ್ತ ನೋಟುಗಳ ವಿನಿಮಯದ ನಿಯಮಗಳು ದೇಶದಲ್ಲಿ ಸ್ವಲ್ಪ ವಿಭಿನ್ನವಾಗಿವೆ. ಹರಿದ ನೋಟುಗಳನ್ನು ಬದಲಾಯಿಸಿದರೆ ಷರತ್ತಿನ ಪ್ರಕಾರ ಅದಕ್ಕೆ ಪಾವತಿ ಮಾಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ನಿಮ್ಮ ಬಳಿಯೂ 2000 ರೂಪಾಯಿಯ ಹರಿದ ನೋಟು ಇದ್ದರೆ ಸ್ವಲ್ಪವೂ ಆತಂಕ ಪಡುವ ಅಗತ್ಯವಿಲ್ಲ.
ನೋಟಿನ ಉದ್ದ ಮತ್ತು ಅಗಲ ಹೇಗಿರಬೇಕು ಎಂದು ಆರ್‌ಬಿಐ ಹೇಳಿದೆ. ಹರಿದ ನೋಟುಗಳ ವಿನಿಮಯವು ಅವುಗಳ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ. RBIನ ವೆಬ್‌ಸೈಟ್ ಪ್ರಕಾರ, 2000 ರೂ ನೋಟಿನ ಉದ್ದ 16.6, ಅಗಲ - 6.6 ಮತ್ತು ವಿಸ್ತೀರ್ಣ 109.56. ಇರಬೇಕು. ಅಂತಹ ಪರಿಸ್ಥಿತಿಯಲ್ಲಿ, ನೋಟು 88 ಸೆಂ ಆಗಿದ್ದರೆ, ನಿಮಗೆ ಪೂರ್ಣ ಹಣ ಸಿಗುತ್ತದೆ. ಆದರೆ 44 ಸೆಂ ಇದ್ದರೆ ಅರ್ಧದಷ್ಟು ಹಣ ಮಾತ್ರ ಸಿಗುತ್ತದೆ.
ಇದನ್ನೂ ಓದಿ : ಬ್ಯಾಂಕ್ ಎಫ್ ಡಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಅದ್ಭುತ ಉಳಿತಾಯ ಯೋಜನೆಗಳು
ನೋಟುಗಳನ್ನು ಆರ್‌ಬಿಐ ಕಚೇರಿಯಲ್ಲಿ ಠೇವಣಿ ಮಾಡಬಹುದು :
ವಿರೂಪಗೊಳಿಸಿದ ನೋಟುಗಳನ್ನು ಬದಲಿಸಲು ಬ್ಯಾಂಕ್, ಗ್ರಾಹಕರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ಕ್ಲಿಷ್ಟಕರ ಸಂದರ್ಭಗಳಲ್ಲಿ ನೋಟುಗಳನ್ನು ಬದಲಿಸಲು ನಿರಾಕರಿಸಬಹುದು. ಹೀಗಾದಾಗ ನೋಟುಗಳನ್ನು ಆರ್‌ಬಿಐ ಕಚೇರಿಯಲ್ಲಿ ಠೇವಣಿ ಇಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.