ದುಬಾರಿ ಸಾಲಗಳಿಂದ ಸಿಗುವುದೇ ಮುಕ್ತಿ ? ಹೆಚ್ಚಾಗುವುದೇ ಬಡ್ಡಿದರ ? ಎಂಪಿಸಿ ಸಭೆಯಲ್ಲಿ ಆರ್‌ಬಿಐ ಮಹತ್ವದ ನಿರ್ಧಾರ
Reserve Bank of India Repo Rate:ಡಿಸೆಂಬರ್ 8 ರಂದು ಬೆಳಗ್ಗೆ ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಆರ್ ಬಿಐ ಗವರ್ನರ್ ಮಾಹಿತಿ ನೀಡಲಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಮತ್ತು ರೆಪೊ ದರವನ್ನು ನಿರ್ಧರಿಸುವುದು MPC ಯ ಮೊದಲ ಜವಾಬ್ದಾರಿಯಾಗಿದೆ.
Reserve Bank of India Repo Rate : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂರು ದಿನಗಳ ಹಣಕಾಸು ನೀತಿ ಪರಾಮರ್ಶೆ (ಆರ್‌ಬಿಐ ಎಂಪಿಸಿ ಸಭೆ) ಸಭೆಯು ಇಂದಿನಿಂದ ಆರಂಭವಾಗಿದೆ. ಮೂರು ದಿನಗಳ ಈ ಸಭೆ ಡಿಸೆಂಬರ್ 8ರವರೆಗೆ ನಡೆಯಲಿದೆ. ಡಿಸೆಂಬರ್ 8 ರಂದು ಬೆಳಗ್ಗೆ ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಆರ್ ಬಿಐ ಗವರ್ನರ್ ಮಾಹಿತಿ ನೀಡಲಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಮತ್ತು ರೆಪೊ ದರವನ್ನು ನಿರ್ಧರಿಸುವುದು MPC ಯ ಮೊದಲ ಜವಾಬ್ದಾರಿಯಾಗಿದೆ.
ಈ ಬಾರಿಯೂ MPC ಸಮಯದಲ್ಲಿ ರೆಪೊ ದರವನ್ನು 6.5 ಪ್ರತಿಶತದಲ್ಲಿ ನಿರ್ವಹಿಸುವ ಸಾಧ್ಯತೆಯಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಮತ್ತು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಪ್ರತಿ ತ್ರೈಮಾಸಿಕದಲ್ಲಿ 10,250 ರೂ. ! ಸರ್ಕಾರದ ಯೋಜನೆಯ ವಿವರ ಇಲ್ಲಿದೆ
ಶೇಕಡಾ 6.5 ರಷ್ಟಿದೆ ರೆಪೋ ದರ :
ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕೇರ್ ರೇಟಿಂಗ್ಸ್ ಪ್ರಕಾರ, ಆರ್‌ಬಿಐ ರೆಪೊ ದರವನ್ನು ಶೇಕಡಾ 6.ರಂತೆಯೇ ಮುಂದುವರಿಸುತ್ತದೆ. ರೆಪೋ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವ ದರವಾಗಿದೆ. 'ಮೊದಲಾರ್ಧದಲ್ಲಿ ಆರ್ಥಿಕ ಉತ್ಪಾದನೆಯಲ್ಲಿ ಬಲವಾದ ವಿಸ್ತರಣೆಯೊಂದಿಗೆ ಆರ್ಥಿಕತೆಯಲ್ಲಿ ಗಮನಾರ್ಹವಾಗಿ ಸುಧಾರನೇ ಕಂಡು ಬಂದಿದೆ. ಇದು ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿನ ಆಶ್ಚರ್ಯಕರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೇರ್ ರೇಟಿಂಗ್ಸ್, ಹೇಳಿದೆ.
ಕೃಷಿ ಅಭಿವೃದ್ದಿ ದರದಲ್ಲಿ ಕುಸಿತ :
RBI 2024 ರ ಹಣಕಾಸು ವರ್ಷದಲ್ಲಿ ತನ್ನ ಹಿಂದಿನ ಅಭಿವೃದ್ದಿಯ ಅಂದಾಜುಗಳನ್ನು ಸುಮಾರು 20-30 bps ಮೂಲಕ ಬದಲಾಯಿಸಬಹುದು. ಕೆಲವು ಕ್ಷೇತ್ರಗಳಲ್ಲಿ ನಿರ್ದಿಷ್ಟ ಸವಾಲುಗಳು ಹಾಗೆಯೇ ಉಳಿದಿವೆ. ಕೇರ್ ರೇಟಿಂಗ್ಸ್ ಪ್ರಕಾರ, ನಿರೀಕ್ಷಿತ ಖಾರಿಫ್ ಉತ್ಪಾದನೆ ಮತ್ತು ರಬಿ ಬಿತ್ತನೆಯಿಂದಾಗಿ ಕೃಷಿ ಬೆಳವಣಿಗೆ ನಿಧಾನವಾಗಿರುತ್ತದೆ. ಹಣದುಬ್ಬರದ ಒತ್ತಡ ಕಡಿಮೆಯಾಗಿದೆ. ಆದರೆ ಆಹಾರದ ಬೆಲೆಗಳು ಕಳವಳಕ್ಕೆ ಕಾರಣವಾಗಿದೆ. ಕೃಷಿ ಉತ್ಪಾದನೆಯಲ್ಲಿನ ಕುಸಿತವು ಹಣದುಬ್ಬರ ಅಂಕಿಅಂಶಗಳಲ್ಲಿ ಹೆಚ್ಚುವರಿ ಹೆಚ್ಚಳದ ಅಪಾಯವನ್ನು ಉಂಟುಮಾಡಬಹುದು.
ಇದನ್ನೂ ಓದಿ : ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಪ್ರಕಟ, ಶೀಘ್ರದಲ್ಲೇ ಘೋಷಣೆ ಸಾಧ್ಯತೆ!
'ಆರ್‌ಬಿಐ ತನ್ನ ನೀತಿ ದರಗಳು ಮತ್ತು ನಿಲುವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎನ್ನುವುದು ಕೇರ್ ರೇಟಿಂಗ್ಸ್ ಅಭಿಪ್ರಾಯ. ಈ ಹಣಕಾಸು ವರ್ಷದಲ್ಲಿ ಆರ್‌ಬಿಐ ದರಗಳಲ್ಲಿ ಹೆಚ್ಚಳವನ್ನು ನಾವು ನಿರೀಕ್ಷಿಸುವುದಿಲ್ಲ ಎಂದು ಅದು ಹೇಳಿದೆ.
ಆರ್‌ಬಿಐ ಎಂಪಿಸಿ ಸಭೆಯ ನಿರ್ಧಾರ ಡಿಸೆಂಬರ್ 8 ರಂದು ಪ್ರಕಟವಾಗಲಿದೆ. ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಡಿಸೆಂಬರ್ 8 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಂಪಿಸಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಡಿಸೆಂಬರ್ 8 ರಂದು ಮಧ್ಯಾಹ್ನ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ : ನಕಲಿ ಕರೆಕೇಂದ್ರದ ಇಬ್ಬರ ವಂಚಿತರನ್ನು ಬಂಧಿಸಿದ ನೋಯ್ಡಾ ಪೋಲೀಸರು: ಸಾಲ ಸಹಾಯ ಹಗರಣಗಳ ಬಗ್ಗೆ ಎಚ್ಚರ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.