ಹಿರಿಯ ನಾಗರಿಕರಿಗೆ ಪ್ರತಿ ತ್ರೈಮಾಸಿಕದಲ್ಲಿ 10,250 ರೂ. ! ಸರ್ಕಾರದ ಯೋಜನೆಯ ವಿವರ ಇಲ್ಲಿದೆ

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ  ಹಿರಿಯ ನಾಗರಿಕರು ಪ್ರತಿ ತ್ರೈಮಾಸಿಕದಲ್ಲಿ 10250 ರೂ. ಗಳಿಸುವುದು ಸಾಧ್ಯವಾಗುತ್ತದೆ.

Written by - Ranjitha R K | Last Updated : Dec 6, 2023, 08:56 AM IST
  • ಈ ಉಳಿತಾಯ ಯೋಜನೆಯನ್ನು ಭಾರತ ಸರ್ಕಾರ ನಡೆಸುತ್ತಿದೆ.
  • ಹೂಡಿಕೆಗೆ ಇದು ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿದೆ.
  • ಸೆಕ್ಷನ್ 80C ಅಡಿಯಲ್ಲಿ,ತೆರಿಗೆ ವಿನಾಯಿತಿ ಪ್ರಯೋಜನ ನೀಡುತ್ತವೆ
ಹಿರಿಯ ನಾಗರಿಕರಿಗೆ ಪ್ರತಿ ತ್ರೈಮಾಸಿಕದಲ್ಲಿ 10,250 ರೂ. ! ಸರ್ಕಾರದ ಯೋಜನೆಯ ವಿವರ ಇಲ್ಲಿದೆ  title=

ಬೆಂಗಳೂರು : ಉಳಿತಾಯ ಯೋಜನೆಗಳಲ್ಲಿ ಹಣವನ್ನು ಉಳಿಸಲು ಆದ್ಯತೆ ನೀಡುವ ಜನರು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಖಾತರಿಯ ಆದಾಯವನ್ನು ಗಳಿಸುವುದು ಸಾಧ್ಯವಾಗುತ್ತದೆ. ಅಂತಹ ಸುರಕ್ಷಿತ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಯೋಚನೆ ನಿಮಗೂ ಇದ್ದರೆ, ಈ ಲೇಖನ ನಿಮಗೆ ಸಹಕಾರಿಯಾಗಲಿದೆ. 

 ನಾವು ಇಲ್ಲಿ ಹೇಳ ಹೊರಟಿರುವುದು ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಯ ಬಗ್ಗೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹಿರಿಯ ನಾಗರಿಕರು ಪ್ರತಿ ತ್ರೈಮಾಸಿಕದಲ್ಲಿ 10250 ರೂ. ಗಳಿಸುವುದು ಸಾಧ್ಯವಾಗುತ್ತದೆ. ಅಂಚೆ ಕಚೇರಿಯ ಈ ಯೋಜನೆಯ ಸಂಪೂರ್ಣ ವಿವರ  ಇಲ್ಲಿದೆ. 

ಇದನ್ನೂ ಓದಿ :  ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಪ್ರಕಟ, ಶೀಘ್ರದಲ್ಲೇ ಘೋಷಣೆ ಸಾಧ್ಯತೆ!

ಅಂಚೆ  ಕಚೇರಿ SCSS: 
ವೃದ್ಧಾಪ್ಯದಲ್ಲಿ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗದೇ ಇದ್ದರೆ ನಿವೃತ್ತಿಯ ನಂತರದ ಜೀವನ ಉತ್ತಮವಾಗಿರುತ್ತದೆ. ಇದಕ್ಕಾಗಿ ನಾವು ಕಷ್ಟಪಟ್ಟು ದುಡಿದ ಹಣವನ್ನು ಚಿಕ್ಕ ವಯಸ್ಸಿನಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡುವುದು ಮುಖ್ಯ. ಇದಕ್ಕೆ  ಪೂರಕವಾಗಿ ಅಂಚೆ ಇಲಾಖೆ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಚೆ ಇಲಾಖೆಯ ಈ ಯೋಜನೆಯಲ್ಲಿ ಮಾಡುವ ಹೂಡಿಕೆ ಮೇಲೆ ಸುರಕ್ಷಿತ ಮತ್ತು ಖಾತರಿಯ ಆದಾಯವನ್ನು ಪಡೆಯಬಹುದು. 

ಈ ಯೋಜನೆಯ ಹೆಸರು ಹಿರಿಯ ನಾಗರಿಕ ಉಳಿತಾಯ ಯೋಜನೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ನಡೆಸಲ್ಪಡುತ್ತದೆ. ಇದರಲ್ಲಿ, ಹೂಡಿಕೆದಾರರು ಒಟ್ಟಾಗಿ ಹಣವನ್ನು ಠೇವಣಿ ಮಾಡುವ ಮೂಲಕ ದೊಡ್ಡ ಮಟ್ಟದ ಆದಾಯವನ್ನು ಪಡೆಯುತ್ತಾರೆ. ಇದರ ಆದಾಯ ಬ್ಯಾಂಕ್ ಎಫ್‌ಡಿ ಗಿಂತ ಹೆಚ್ಚಾಗಿರುತ್ತದೆ. ಈ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ 8.2 ಶೇಕಡಾ ಬಡ್ಡಿ ಸಿಗುತ್ತದೆ. ಇದು ಪ್ರತಿ ತ್ರೈಮಾಸಿಕದಲ್ಲಿ ಬದಲಾಗುತ್ತದೆ.

ಇದನ್ನೂ ಓದಿ : ನಕಲಿ ಕರೆಕೇಂದ್ರದ ಇಬ್ಬರ ವಂಚಿತರನ್ನು ಬಂಧಿಸಿದ ನೋಯ್ಡಾ ಪೋಲೀಸರು: ಸಾಲ ಸಹಾಯ ಹಗರಣಗಳ ಬಗ್ಗೆ ಎಚ್ಚರ!

ಹಿರಿಯ ನಾಗರಿಕರಿಗಾಗಿ ವಿಶೇಷ ಕಾರ್ಯಕ್ರಮ : 
ಪೋಸ್ಟ್ ಆಫೀಸ್ SCSS ಯೋಜನೆಯು ನಿರ್ದಿಷ್ಟವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗಾಗಿ ಮಾಡಲಾಗಿದೆ. ಈ ಯೋಜನೆಯು VRS ತೆಗೆದುಕೊಳ್ಳುವವರಿಗೂ ಅನ್ವಯಿಸುತ್ತದೆ. ಪ್ರಸ್ತುತ, ಯೋಜನೆಯು 8.2 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಹಿರಿಯ ನಾಗರಿಕರು ಒಂದೇ ಬಾರಿಗೆ  5 ಲಕ್ಷ ರೂ ಠೇವಣಿ ಮಾಡಬಹುದು. ಈ ಮೂಲಕ ಪ್ರತಿ ತ್ರೈಮಾಸಿಕದಲ್ಲಿ  10,250 ರೂ. ಅ ಆದಾಯ ಗಳಿಸಬಹುದು. ಕೇವಲ ಬಡ್ಡಿಯಿಂದಲೇ 5 ವರ್ಷಗಳಲ್ಲಿ 2 ಲಕ್ಷಗಳವರೆಗೆ ಆದಾಯ ಗಳಿಸುವುದು ಸಾಧ್ಯವಾಗುತ್ತದೆ. 

ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ:
ಒಟ್ಟಿಗೆ ಠೇವಣಿ ಮಾಡಿದ ಮೊತ್ತ: ರೂ. 5 ಲಕ್ಷ
ಠೇವಣಿ ಅವಧಿ: 5 ವರ್ಷಗಳು
ಬಡ್ಡಿ ದರ: 8.2%
ಮೆಚ್ಯೂರಿಟಿ ಮೊತ್ತ: 7,05,000 ರೂ. 
ಬಡ್ಡಿ ಆದಾಯ: 2,05,000 ರೂ
ತ್ರೈಮಾಸಿಕ ಆದಾಯ: 10,250 ರೂ

ಪೋಸ್ಟ್ ಆಫೀಸ್ SCSS ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ : 
- ಈ ಉಳಿತಾಯ ಯೋಜನೆಯನ್ನು ಭಾರತ ಸರ್ಕಾರ ನಡೆಸುತ್ತದೆ. 
- ಇದು ಹೂಡಿಕೆಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿದೆ.
- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ಹೂಡಿಕೆದಾರರು ಪ್ರತಿ ವರ್ಷ  1.5 ಲಕ್ಷಗಳು ತೆರಿಗೆ ವಿನಾಯಿತಿ ಪ್ರಯೋಜನವನ್ನು ನೀಡುತ್ತವೆ. 
- ಈ ಪೋಸ್ಟ್ ಆಫೀಸ್ ಸ್ಕೀಮ್ ಖಾತೆಯನ್ನು ದೇಶದ ಯಾವುದೇ ಕೇಂದ್ರಕ್ಕೆ ವರ್ಗಾಯಿಸಬಹುದು. 
- ಈ ಯೋಜನೆಯಡಿಯಲ್ಲಿ 3 ತಿಂಗಳಿಗೊಮ್ಮೆ ಬಡ್ಡಿಯನ್ನು ಪಾವತಿಸಲಾಗುತ್ತದೆ.

ಇದನ್ನೂ ಓದಿ : ಇನ್ನು ಮುಂದೆ ವೈಟಿಂಗ್ ಟಿಕೆಟ್ ಮೂಲಕ ರೈಲಿನಲ್ಲಿ ಪ್ರಯಾಣಿಸುವುದು ಸಾಧ್ಯವಿಲ್ಲ ! ಬಂದಿದೆ ಹೊಸ ನಿಯಮ

SCSS ಖಾತೆಯನ್ನು ತೆರೆಯುವುದು ಹೇಗೆ? :
ಈ ಖಾತೆಯನ್ನು ತೆರೆಯಲು, ಯಾವುದೇ ಪೋಸ್ಟ್ ಆಫೀಸ್ ಅಥವಾ ಸರ್ಕಾರಿ/ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಬೇಕು. 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಗುರುತಿನ ಪ್ರಮಾಣಪತ್ರ ಮತ್ತು ಇತರ KYC ದಾಖಲೆಗಳ ಪ್ರತಿಗಳನ್ನು ಫಾರ್ಮ್‌ನೊಂದಿಗೆ ಸಲ್ಲಿಸಬೇಕು. ಬ್ಯಾಂಕ್ ಖಾತೆ ತೆರೆಯುವ ಪ್ರಯೋಜನವೆಂದರೆ ಠೇವಣಿ ಮಾಡಿದ ಮೊತ್ತದ ಮೇಲೆ ಗಳಿಸಿದ ಬಡ್ಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News