Car sales in February: SUVಗಳಿಗೆ ಹೆಚ್ಚಿದ ಬೇಡಿಕೆ, ಬಿಸಿದೋಸೆಯಂತೆ ಮಾರಾಟವಾಗುತ್ತಿರುವ ಕಾರುಗಳು!
Car sales in February 2024: ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ (SUV) ಬಲವಾದ ಬೇಡಿಕೆಯಿಂದ ಫೆಬ್ರವರಿ ತಿಂಗಳಿನಲ್ಲಿ ವಾಹನ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನ ಮಾರಾಟವು ಫೆಬ್ರವರಿಯಲ್ಲಿ ಹೆಚ್ಚಾಗಿದೆ.
Maruti Suzuki sales: ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ (SUV) ಹೆಚ್ಚಿನ ಬೇಡಿಕೆಯಿಂದ ಫೆಬ್ರವರಿಯಲ್ಲಿ ವಾಹನ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನ ಮಾರಾಟವು ಫೆಬ್ರವರಿಯಲ್ಲಿ ಹೆಚ್ಚಾಗಿದೆ. ಫೆಬ್ರವರಿಯು ಉದ್ಯಮಕ್ಕೆ ಇದುವರೆಗಿನ ಮಾರಾಟದ 3ನೇ ಅತ್ಯುತ್ತಮ ತಿಂಗಳಾಗಿದೆ. ಈ ವರ್ಷದ ಜನವರಿಯಲ್ಲಿ 3,94,500 ಪ್ರಯಾಣಿಕ ವಾಹನಗಳ ಅತಿಹೆಚ್ಚು ಸಗಟು ಮಾರಾಟ ನಡೆದಿದೆ. 2023ರ ಅಕ್ಟೋಬರ್ ತಿಂಗಳಿನಲ್ಲಿ 3,91,811 ಯುನಿಟ್‌ಗಳ ಸಗಟು ಮಾರಾಟದೊಂದಿಗೆ 2ನೇ ಸ್ಥಾನದಲ್ಲಿದೆ. ಇದೀಗ ಫೆಬ್ರವರಿ ಅತಿಹೆಚ್ಚು ಮಾರಾಟದ ವಿಷಯದಲ್ಲಿ 3ನೇ ಸ್ಥಾನಕ್ಕೆ ಬಂದಿದೆ.
ಮಾರುತಿ ಸುಜುಕಿ ಇಂಡಿಯಾ (MSI) ಫೆಬ್ರವರಿ ತಿಂಗಳಲ್ಲಿ ಒಟ್ಟು 1,97,471 ಯುನಿಟ್‌ಗಳನ್ನು ಸಗಟು ಮಾರಾಟ ಮಾಡಿದೆ. ಇದು ವಾರ್ಷಿಕ ಆಧಾರದ ಮೇಲೆ ಶೇ.15ರಷ್ಟು ಹೆಚ್ಚು. ಫೆಬ್ರವರಿ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಕಂಪನಿಯು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 1,72,321 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿಕೊಂಡಿದೆ. ಮಾರುತಿಯ ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಫೆಬ್ರವರಿಯಲ್ಲಿ 1,60,271 ಯುನಿಟ್‌ಗಳಿಗೆ 9 ಪ್ರತಿಶತದಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Post Office: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗುತ್ತದೆ..!
ಬ್ರೆಝಾ, ಎರ್ಟಿಗಾ ಮತ್ತು ಗ್ರ್ಯಾಂಡ್ ವಿಟಾರಾದಂತಹ ಯುಟಿಲಿಟಿ ವಾಹನಗಳ ವಿಭಾಗವು ಕಳೆದ ತಿಂಗಳು 82 ಪ್ರತಿಶತದಷ್ಟು ಬಲವಾದ ಬೆಳವಣಿಗೆಯನ್ನು ಸಾಧಿಸಿದೆ. ಫೆಬ್ರವರಿಯಲ್ಲಿ ಮಾರುತಿ 61,234 ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಿದ್ದರೆ, ಒಂದು ವರ್ಷದ ಹಿಂದೆ ಈ ಸಂಖ್ಯೆ 33,550 ಆಗಿತ್ತು. ಮಾರುತಿ ಸುಜುಕಿ ದೇಶದಲ್ಲಿ ಅತಿಹೆಚ್ಚು ಕಾರು ಮಾರಾಟ ಮಾಡುವ ಕಂಪನಿಯಾಗಿದೆ ಎಂಬುದು ಫೆಬ್ರವರಿ ತಿಂಗಳಲ್ಲಿ ಸಾಬೀತಾಗಿದೆ. ಇದು ಫೆಬ್ರವರಿ 2024ರಲ್ಲಿ ಗರಿಷ್ಠ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದೆ.
ಟಾಟಾ ಮತ್ತು ಹುಂಡೈ ಮಾರಾಟ
ಟಾಟಾ ಮೋಟಾರ್ಸ್‌ನ ಒಟ್ಟು ಸಗಟು ಮಾರಾಟವು ಫೆಬ್ರವರಿಯಲ್ಲಿ 86,406 ಯುನಿಟ್‌ಗಳಿಗೆ 8 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಕಳೆದ ವರ್ಷ ಇದೇ ತಿಂಗಳಲ್ಲಿ 79,705 ಯುನಿಟ್‌ಗಳಷ್ಟಿತ್ತು. ಅದರ ಒಟ್ಟು ದೇಶೀಯ ಮಾರಾಟವು 84,834 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ವರ್ಷ ಇದೇ ತಿಂಗಳಿನಲ್ಲಿ 78,006 ಯುನಿಟ್‌ಗಳಿಗೆ ಹೋಲಿಸಿದರೆ ಶೇ.9ರಷ್ಟು ಹೆಚ್ಚಾಗಿದೆ. ಆದರೆ ಕಂಪನಿಯು ಒಟ್ಟು 51,321 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ: EPF Claim ಪದೇ ಪದೇ ತಿರಸ್ಕೃತವಾಗುತ್ತಿದೆಯೇ? ಹಾಗಿದ್ದರೆ ಈ ವಿಧಾನ ಅನುಸರಿಸಿ
ಅದೇ ರೀತಿ ಹ್ಯುಂಡೈ ಮೋಟಾರ್ ಇಂಡಿಯಾದ ಒಟ್ಟು ಮಾರಾಟವು ಫೆಬ್ರವರಿಯಲ್ಲಿ ವಾರ್ಷಿಕ ಆಧಾರದ ಮೇಲೆ ಶೇ.4.5ರಷ್ಟು ಏರಿಕೆಯಾಗಿದ್ದು, 60,501 ಯುನಿಟ್‌ಗಳ ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 57,851 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ವಾಹನಗಳ ದೇಶೀಯ ಸಗಟು ಮಾರಾಟವು ಕಳೆದ ತಿಂಗಳು 50,201 ಯುನಿಟ್‌ಗಳಾಗಿದ್ದು, ಶೇ.೭ರಷ್ಟು ಏರಿಕೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.