ಹೀಗೆ ಮಾಡಿದರೆ ಕಡಿಮೆ ಬೆಲೆಗೆ LPG ಸಿಲಿಂಡರ್ ಸಿಗಬಹುದು..!
ನೀವು IOCಯ LPG ಸಿಲಿಂಡರ್ ಇಂಡೇನ್ ಅನ್ನು ಬುಕ್ ಮಾಡುವುದಾದರೆ, ಬುಕ್ಕಿಂಗ್ ಮೇಲೆ 50 ರೂಪಾಯಿಗಳ ರಿಯಾಯಿತಿ ಪಡೆಯಬಹುದು.
ನವದೆಹಲಿ: ಎಲ್‌ಪಿಜಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಒಂದು ಸಮಾಧಾನಕರ ಸುದ್ದಿಯಿದೆ. ಫೆಬ್ರವರಿ ಮತ್ತು ಮಾರ್ಚ್ ಸೇರಿದಂತೆ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇದುವರೆಗೆ ಪ್ರತಿ ಸಿಲಿಂಡರ್‌ಗೆ 125 ರೂ. ಹೆಚ್ಚಳವಾಗಿದೆ. ಆದರೂ ಸ್ವಲ್ಪ ಬುದ್ದಿವಂತಿಕೆಯಿಂದ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿದರೆ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಸಿಗಬಹುದು. ಬೆಲೆ ಏರಿಕೆಗೆ ಸ್ವಲ್ಪ ಮಟ್ಟಿನ ಪರಿಹಾರವೂ ಸಿಗಬಹುದು.
ಎಲ್‌ಪಿಜಿ ಸಿಲಿಂಡರ್ ಮೇಲೆ 50 ರೂ. ಗಳ ಕ್ಯಾಶ್ ಬ್ಯಾಕ್ :
ನೀವು IOCಯ LPG ಸಿಲಿಂಡರ್ ಇಂಡೇನ್ ಅನ್ನು ಬುಕ್ ಮಾಡುವುದಾದರೆ, ಬುಕ್ಕಿಂಗ್ ಮೇಲೆ 50 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಇದಕ್ಕಾಗಿ, ಹೆಚ್ಚು ಕಷ್ಟಪಡಬೇಕಾಗಿಲ್ಲ. amazon pay ಮೂಲಕ ಎಲ್ ಪಿಜಿ ಬುಕ್ಕಿಂಗ್ ಮತ್ತು ಪೇಮೆಂಟ್ ಮಾಡಬೇಕು. ಹೀಗೆ ಮಾಡಿದರೆ ಬುಕ್ಕಿಂಗ್ ಮೇಲೆ 50 ರೂ ಗಳ ಕ್ಯಾಶ್ ಬ್ಯಾಕ್ ಪಡೆಯುತ್ತೀರಿ. ಅಂದರೆ ಸಿಲಿಂಡರ್ ಗೆ 50 ರೂಪಾಯಿ ಕಡಿಮೆಯಾದಂತೆ ಆಯಿತು. ಇಂಡಿಯನ್ ಆಯಿಲ್ ಕಾರ್ಪ್ ಲಿಮಿಟೆಡ್ ತನ್ನ twitter ಹ್ಯಾಂಡಲ್‌ನಿಂದ ಈ ಮಾಹಿತಿಯನ್ನು ನೀಡಿದೆ.
LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ
ಬುಕಿಂಗ್ ಮತ್ತು ಹಣ ಪಾವತಿ ಹೇಗೆ ?
amazon pay ಯಿಂದ ಕ್ಯಾಶ್‌ಬ್ಯಾಕ್ ಪಡೆಯಲು , ಮಾರ್ಚ್ ಒಂದರಿಂದ ಏಪ್ರಿಲ್ ಒಂದರವರೆಗೆ LPG ಬುಕ್ ಮಾಡಬೇಕು. ಮೊದಲ ಬಾರಿ ಮಾಡುವ ಬುಕ್ಕಿಂಗ್ ಮೇಲೆ ಮಾತ್ರ ಆಫರ್ ಇರಲಿದೆ. amazon pay UPI ಆಯ್ಕೆಯನ್ನು ಆರಿಸಿ ಪಾವತಿ ಮಾಡಿದಾಗ ಮಾತ್ರ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದ. ಮ್ಯಾನ್ಯುವೆಲ್ ಭರ್ತಿ ಮಾಡಿ ಸಿಲಿಂಡರ್ ಬುಕ್ಕಿಂಗ್ ಮಾಡಿದರೆ ಈ ಕ್ಯಾಶ್ ಬ್ಯಾಕ್ ಸಿಗುವುದಿಲ್ಲ. amazon pay ಮೂಲಕ LPG ಬುಕ್ಕಿಂಗ್ ಮತ್ತು ಪೇಮೆಂಟ್ ಮಾಡಿದ ಮೂರು ದಿನಗಳಲ್ಲಿ ಈ Cashback ಅಮೆಜಾನ್ ವಾಲೆಟ್ ಗೆ ಬರುತ್ತದೆ.
ಮಾರ್ಚ್ 1 ರಂದು ಅಡುಗೆ ಅನಿಲದ ಪ್ರತಿ ಸಿಲಿಂಡರ್‌ಗೆ 25 ರೂಪಾಯಿ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಅಂದರೆ ಫೆಬ್ರವರಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 3 ಬಾರಿ ಹೆಚ್ಚಿಸಲಾಗಿತ್ತು. ಫೆಬ್ರವರಿ ಒಂದೇ ತಿಂಗಳಲ್ಲಿ ಎಲ್ ಪಿಜಿ ಬೆಲೆ 100 ರೂ.ಗಳಷ್ಟು ದುಬಾರಿಯಾಗಿದೆ. ಮಾರ್ಚ್ 1 ರ ಹೆಚ್ಚಳವೂ ಸೇರಿದಂತೆ, ಎಲ್‌ಪಿಜಿ ಇದುವರೆಗೆ 125 ರೂ.ಗಳಷ್ಟು ದುಬಾರಿಯಾಗಿದೆ.
ಇದನ್ನೂ ಓದಿ : ದೇಶದ ಈ ಭಾಗದಲ್ಲಿ ಅಗ್ಗವಾಗಲಿದೆ Electricity Bill, ನಿಮಗೂ ಸಿಗಲಿದೆಯೇ ಈ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.