LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ

LPG Cylinder Update - ಎಲ್‌ಪಿಜಿ ಸಿಲಿಂಡರ್‌ಗೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರ ಜನಸಾಮಾನ್ಯರಿಗೆ ಭಾರಿ ಪರಿಹಾರವೊಂದನ್ನು ಒದಗಿಸಲಿದೆ. ಎಲ್‌ಪಿಜಿ ಸಿಲಿಂಡರ್‌ (LPG CYLINDER ) ಗಳಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ಬದಲಾಯಿಸುತ್ತಿದೆ. ಹೊಸ ನಿಯಮದ ಪ್ರಕಾರ, ಗ್ರಾಹಕರು ಇದೀಗ ಒಂದೇ ವಿತರಕನ ಬದಲು ಮೂರು ವಿತರಕರಿಂದ ಏಕಕಾಲದಲ್ಲಿ ಅನಿಲವನ್ನು ಕಾಯ್ದಿರಿಸಲು ಸಾಧ್ಯವಾಗಲಿದೆ.

Written by - Nitin Tabib | Last Updated : Mar 5, 2021, 01:03 PM IST
  • ಶೀಘ್ರದಲ್ಲಿಯೇ LPG ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ.
  • ಏಕಕಾಲಕ್ಕೆ ಮೂರು ವಿತರಕರ ಬಳಿ ಸಿಲಿಂಡರ್ ಬುಕ್ ಮಾಡಬಹುದು.
  • ನೂತನ ಸಂಪರ್ಕಕ್ಕಾಗಿ ಅಡ್ರೆಸ್ ಪ್ರೂಫ್ ಕೂಡ ನೀಡುವ ಅವಶ್ಯಕತೆ ಇಲ್ಲ
LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ title=
LPG Cylinder Update

ನವದೆಹಲಿ: LPG Cylinder Update - ಎಲ್‌ಪಿಜಿ ಸಿಲಿಂಡರ್‌ಗೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರ (MODI GOVERNMENT) ಜನಸಾಮಾನ್ಯರಿಗೆ ಭಾರಿ ಪರಿಹಾರವೊಂದನ್ನು ಒದಗಿಸಲಿದೆ. ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು (LPG RULES) ಸರ್ಕಾರ ಬದಲಾಯಿಸುತ್ತಿದೆ. ಹೊಸ ನಿಯಮದ ಪ್ರಕಾರ, ಗ್ರಾಹಕರು ಇದೀಗ ಒಂದೇ ವಿತರಕನ ಬದಲು ಮೂರು ವಿತರಕರಿಂದ ಏಕಕಾಲದಲ್ಲಿ ಅನಿಲವನ್ನು ಕಾಯ್ದಿರಿಸಲು ಸಾಧ್ಯವಾಗಲಿದೆ. ಅಂದರೆ, ಇನ್ಮುಂದೆ ತಮ್ಮ ಮನೆ ಹತ್ತಿರವಿರುವ ಯಾವುದೇ ಡೀಲರ್ ನಿಂದ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಸಾಧ್ಯವಾಗಲಿದೆ. ಒಂದೇ ಡೀಲರ್ (LPG DEALER) ಇರುವ ಕಾರಣ LPG ಸಮಸ್ಯೆ ರುವುದನ್ನು ಇತ್ತೀಚಿಗೆ ಗಮನಿಸಲಾಗಿದೆ. ಗ್ರಾಹಕರು ನಂಬರ್ ನೋಂದಣಿ ಮಾಡಿದರೂ ಕೂಡ ಸಮಯಕ್ಕೆ ಸಿಲಿಂಡರ್ ಸಿಗುವುದಿಲ್ಲ. ಹೀಗಾಗಿ ಎಲ್ಲಿ ಬೇಗ ಸಿಲಿಂಡರ್ ಸಿಗಲಿದೆಯೂ ಆ ಡೀಲರ್ ಬಳಿಯಿಂದ ಗ್ರಾಹಕರು LPG ಸಿಲಿಂಡರ್ ಪಡೆಯಬಹುದಾಗಿದೆ.

ಕಡಿಮೆ ದಾಖಲೆಗಳನ್ನು ಪಡೆದು LPG ಕನೆಕ್ಷನ್ ನೀಡಲು ಸಿದ್ಧತೆ
ಈ ಕುರಿತು ಹೇಳಿಕೆ ನೀಡಿರುವ ತೈಲ ಕಾರ್ಯದರ್ಶಿ ತರುಣ್ ಕಪೂರ್, ಸರ್ಕಾರ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಹೊಸ ಕಾನೂನನ್ನು ಸಿದ್ಧಪಡಿಸುತ್ತಿದೆ. ಇದರಿಂದ ಗ್ರಾಹಕರು ಅತ್ಯಂತ ಕಡಿಮೆ ದಾಖಲೆಗಳನ್ನು ಒದಗಿಸಿ ಹೊಸ ಅಡುಗೆ ಅನಿಲ ಸಂಪರ್ಕ ಪಡೆಯಬಹುದಾಗಿದೆ. ಇದಲ್ಲದೆ ಹೊಸ ನಿಯಮಗಳ ಪ್ರಕಾರ ಯಾವುದೇ ರೀತಿಯ ಅಡ್ರೆಸ್ ಪ್ರೂಫ್ ಪಡೆಯದೇಯೂ ಕೂಡ ಸಂಪರ್ಕ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ LPG ಕನೆಕ್ಷನ್ (LPG CONNECTION) ಪಡೆಯಲು ನಿವಾಸ ಪ್ರಮಾಣಪತ್ರ ನೀಡುವುದು ಅನಿವಾರ್ಯವಾಗಿದೆ. ಇದು ಇಲ್ಲದೆ ಹೋದಲ್ಲಿ ಸಿಲಿಂಡರ್ ಸಿಗುವುದು ಕಷ್ಟಕರವಾಗಿತ್ತು. ಆದರೆ, ಎಲ್ಲರ ಬಳಿಯೂ ಕೂಡ ಈ ದಾಖಲೆ ಇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಸಾದರುಪಡಿಸುವುದು ಇನ್ನಷ್ಟು ಕ್ಲಿಷ್ಟಕರವಾಗಿದೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ತರುಣ್, ಮುಂದಿನ ಎರಡು ವರ್ಷಗಳಲ್ಲಿಒಂದು ಕೋಟಿಗಿಂತ ಹೆಚ್ಚು ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಹಾಗೂ ಜನರಿಗೆ ಎಲ್‌ಪಿಜಿಗೆ ಸುಲಭವಾಗಿ ಪ್ರವೇಶ ಕಲ್ಪಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ 8 ಕೋಟಿ ಎಲ್‌ಪಿಜಿ ಸಿಲಿಂಡರ್ ಸಂಪರ್ಕಗಳನ್ನು ನೀಡಲಾಗಿದೆ. ಈ ವರ್ಷದ ಮಂಡಿಸಲಾದ ಬಜೆಟ್‌ನಲ್ಲಿ ಪ್ರಧಾನಿ ಉಜ್ವಲಾ ಯೋಜನೆಯಡಿ ದೇಶದಲ್ಲಿ 1 ಕೋಟಿ ಅನಿಲ ಸಂಪರ್ಕವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಸಂಖ್ಯೆಯನ್ನು 2 ಕೋಟಿಗೆ ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆ. ಆದರೆ ಇದಕ್ಕಾಗಿ ಬಜೆಟ್ ನಲ್ಲಿ ಸರ್ಕಾರ ಪ್ರತ್ಯೇಕ ಅನುದಾನ ಪ್ರಕಟಿಸಿಲ್ಲ.  ಸದ್ಯ ನೀಡಲಾಗುತ್ತಿರುವ ಸಬ್ಸಿಡಿಯಿಂದ ಸಂಪರ್ಕ ಕಲ್ಪಿಸುವ ಕೆಲಸ ಮುಗಿಯಲಿದೆ. ಪ್ರಸ್ತುತ ಎಷ್ಟು ಜನರ ಬಳಿ ಅಡುಗೆ ಅನಿಲ ಸಂಪರ್ಕ ಇಲ್ಲ ಎಂಬುದರ ಕುರಿತು ಸರ್ಕಾರ ಅಂದಾಜು ಹಾಕಿದ್ದು, ಈ ಸಂಖ್ಯೆ ಸುಮಾರು 1 ಕೋಟಿಯಷ್ಟಿದೆ. ಉಜ್ವಲಾ ಯೋಜನೆಯ ಅಡಿ ಇದುವರೆಗೆ ಸುಮಾರು 29 ಕೋಟಿ ಜನರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ತರುಣ್ ಹೇಳಿದ್ದಾರೆ.

ಇದನ್ನೂ ಓದಿ- Gold-Silver Rate: ಚಿನ್ನದ ದರದಲ್ಲಿ ಮತ್ತೆ ಭಾರೀ ಕುಸಿತ, ಬೆಳ್ಳಿ ಬೆಲೆ ಸ್ಥಿರ!

ದೇಶದ ಶೇ.100ರಷ್ಟು ಜನರಿಗೆ ಸ್ವಚ್ಛ ಅಡುಗೆ ಅನಿಲ ತಲುಪಿಸುವ ಗುರಿ
ದೇಶದ ಶೇ. 100ರಷ್ಟು ಜನರಿಗೆ ಶುದ್ಧ ಅಡುಗೆ ಇಂಧನವನ್ನು ತಲುಪಿಸುವ ಗುರಿಯನ್ನು ಸಾಧಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಕೇವಲ ನಾಲ್ಕೇ ವರ್ಷಗಳಲ್ಲಿ ಬಡ ಮಹಿಳೆಯರ ಮನೆಗೆ ದಾಖಲೆಯ 8 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ತರುಣ್ ಕಪೂರ್ ಹೇಳಿದ್ದಾರೆ. ಇದರಿಂದ ದೇಶಾದ್ಯಂತ ಉಚಿತ LPG ಸಂಪರ್ಕ ಹೊಂದಿದವರ ಮನೆಗಳ ಸಂಖ್ಯೆ ಸುಮಾರು 29 ಕೋಟಿಗೆ ತಲುಪಿದೆ. ಆದರೆ, ಈಗಾಗಲೇ ಉಚಿತ ಸಂಪರ್ಕ ನೀಡಲು ಉದ್ದೇಶಿಸಲಾಗಿರುವ 1 ಕೋಟಿ ಸಂಖ್ಯೆಯಲ್ಲಿ ಮುಂಬರುವ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬುದನ್ನು ತರುಣ್ ಒಪ್ಪಿಕೊಂಡಿದ್ದಾರೆ. ಏಕೆಂದರೆ ಸಮಯಕ್ಕೆ ತಕ್ಕಂತೆ ಹಲವರು ಕೆಲಸದ ನಿಮಿತ್ತ ತಮ್ಮ ನಗರವನ್ನು ತೋರೆದು ಇತರೆ ನಗರಗಳಿಗೆ ವಲಸೆ ಹೋಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Driving License Online: ಇನ್ಮುಂದೆ DL,RC ಗಾಗಿ RTO ಹೋಗಬೇಕಾಗಿಲ್ಲ, ಮನೆಯಿಂದಲೇ ಮಾಡಿ ಈ 18ಕೆಲಸ

ಈ ಮೊಬೈಲ್ ಸಂಖ್ಯೆ ಬಳಸಿ ಸಿಲಿಂಡರ್ ಬುಕ್ ಮಾಡಿ
ಈ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಈ ಮೊದಲು ದೇಶದ ವಿವಿಧ ಸರ್ಕಲ್ ಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಲು ವಿವಿಧ ನಂಬರ್ ಗಳಿರುತ್ತಿದ್ದವು. ಆದರೆ, ಪ್ರಸ್ತುತ ದೇಶದ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿ ಎಲ್ಲಾ ಸರ್ಕಲ್ ಗಳಿಗೆ ಒಂದೇ ಮೊಬೈಲ್ ಸಂಖ್ಯೆಯನ್ನು ಜಾರಿಗೊಳಿಸಿದೆ. ಇದರರ್ಥ ಇದೀಗ ಇಂಡೆನ್ ಗ್ಯಾಸ್ (INDANE GAS) ನ ದೇಶಾದ್ಯಂತ ಇರುವ ಗ್ರಾಹಕರು LPG ಸಿಲಿಂಡರ್ ಬುಕ್ ಮಾಡಲು 7718955555 ಗೆ ಕರೆ ಅಥವಾ SMS ಮಾಡಬಹುದು.

ಇದನ್ನೂ ಓದಿ-7th pay commission : ಸದ್ಯದಲ್ಲೇ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ .! ಹೊರಬೀಳಲಿದೆ ಬಹುನಿರೀಕ್ಷಿತ ಡಿಎ ಆದೇಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News