ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವ ಬಗ್ಗೆ ಹುಷಾರ್! IT Raid ಆಗಬಹುದು!!
Cash Limit At Home: ಮನೆಯಲ್ಲಿ ಅಪಾರ ಪ್ರಮಾಣದ ಹಣವನ್ನುವ ಇಡುವುದು ಖಂಡಿತಾ ಒಳ್ಳೆಯದಲ್ಲ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ನಗದು ವ್ಯವಹಾರ ಮಾಡುವುದೂ ಒಳ್ಳೆಯದಲ್ಲ. ಒಂದೊಮ್ಮೆ ಸಿಕ್ಕಿಬಿದ್ದರೆ ನೀವಿಟ್ಟಿರುವ ಹಣದ 137% ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ.
Cash Limit At Home: ಜನಸಾಮಾನ್ಯರು ಮತ್ತು ಸರ್ಕಾರಗಳು ಕೂಡ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೂ ಕೆಲವೊಂದು ಕಾರಣಕ್ಕೆ ನಗದು ವ್ಯವಹಾರವನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಹಣವನ್ನು ಇಡುವುದು ತಪ್ಪುತ್ತಿಲ್ಲ. ಇದರ ನಡುವೆ ಆದಾಯ ತೆರಿಗೆಯ ಕಟ್ಟುನಿಟ್ಟಿನ ಕಾನೂನುಗಳ ಕಾರಣಕ್ಕೆ ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು. ನಗದು ರೂಪದಲ್ಲಿ ಮಾಡುವ ವ್ಯವಹಾರಗಳಿಗೆ ಇರುವ ಮಿತಿ ಏನು ಎಂದು ತಿಳಿದುಕೊಳ್ಳಲೇಬೇಕು.
ಕರೋನಾ ನಂತರ ಡಿಜಿಟಲ್ ವ್ಯವಹಾರಗಳು ಜಾಸ್ತಿಯಾಗುತ್ತಿವೆ. ಹೆಚ್ಚಿನ ಜನ ಆನ್‌ಲೈನ್ ಮೂಲಕ ವ್ಯವಹಾರ ಮಾಡಲು ಇಷ್ಟಪಡುತ್ತಾರೆ. ಆದರೂ ಮನೆಯಲ್ಲಿ ಹಣ ಇಟ್ಟುಕೊಳ್ಳುವುದು ಮತ್ತು ನಗದು ವ್ಯವಹಾರ ಮಾಡುವುದು ನಿಂತಿಲ್ಲ. ಹೆಚ್ಚಿನ ಪ್ರಮಾಣದ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಹೆಚ್ಚಿನ ಮೌಲ್ಯದ ನಗದು ವ್ಯವಹಾರ ಮಾಡುವುದು ಆದಾಯ ತೆರಿಗೆ ವಂಚನೆ ವ್ಯಾಪ್ತಿಗೆ ಬರುತ್ತದೆ. ದಾಖಲೆ ಇಲ್ಲದ ಅಧಿಕ ಪ್ರಮಾಣದ ಹಣವನ್ನು 'ಕಪ್ಪುಹಣ' ಎಂದು ಪರಿಗಣಿಸುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ- ಎಟಿಎಂ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ನು ಈ ರೀತಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ!
ಮನೆಯಲ್ಲಿ ಇಟ್ಟುಕೊಳ್ಳುವ ಭಾರೀ ಮೊತ್ತದ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಗೊತ್ತಾದರೆ ಖಂಡಿತವಾಗಿಯೂ ಅದು ಸಮಸ್ಯೆಗೆ ಕಾರಣವಾಗುತ್ತದೆ. ನಾವು ಹಣ ತಂದಿದ್ದು, ನಗದು ವ್ಯವಹಾರ ಮಾಡುತ್ತಿರುವುದು ಯಾರಿಗೂ ತಿಳಿದಿಲ್ಲ ಎಂದುಕೊಳ್ಳಬೇಡಿ. ನಗದು ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆ ಹದ್ದಿನಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ನಗದು ವ್ಯವಹಾರಕ್ಕಿರುವ ಮಿತಿಯನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಹಣ ಇಡುವ ಬಗ್ಗೆ ನಿಜಕ್ಕೂ ಇಂತಿಷ್ಟೇ ಹಣವನ್ನು ಇಡಬೇಕು ಎಂಬ ನಿಯಮ ಇಲ್ಲ. ಹಾಗಂತ ಅಪಾರ ಪ್ರಮಾಣದ ಹಣವನ್ನು ಮನೆಯಲ್ಲಿ ಇಡುವುದು ಖಂಡಿತಾ ಒಳ್ಳೆಯದಲ್ಲ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ನಗದು ವ್ಯವಹಾರ ಮಾಡುವುದೂ ಒಳ್ಳೆಯದಲ್ಲ. ಒಂದೊಮ್ಮೆ ಆದಾಯ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿಬಿದ್ದರೆ ಮನೆಯಲ್ಲಿ ನೀವಿಟ್ಟಿರುವ ಹಣದ 137% ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ.
ಇದನ್ನೂ ಓದಿ- ತೆರಿಗೆ ಪಾವತಿಯಲ್ಲಿ 16.6% ಸೇವ್ ಮಾಡಬಹುದು..! ಹೇಗ್ ಗೊತ್ತಾ..!
ಹಣ ವರ್ಗಾವಣೆ ಬಗ್ಗೆ ಆದಾಯ ತೆರಿಗೆ ನಿಯಮಗಳೇನು?
* ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಪ್ರಕಾರ, ಬ್ಯಾಂಕಿನಿಂದ 50,000 ರೂಪಾಯಿಗಿಂತ ಹೆಚ್ಚು ಹಣದ ವರ್ಗಾವಣೆ ಮಾಡಲು ಪಾನ್ ಕಾರ್ಡ್ ಬಳಸಲೇಬೇಕು.
* ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಪ್ರಕಾರ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದರೆ TDS ಕಟ್ಟುವುದು ಕಡ್ಡಾಯ. ಅದೂ 3 ವರ್ಷ ಐಟಿ ರಿಟರ್ನ್ಸ್ ಮಾಡಿದ್ದರೆ ಮಾತ್ರ.
* ಐಟಿಆರ್ ಸಲ್ಲಿಸಿದವರು TDS ಇಲ್ಲದೆ 1 ಕೋಟಿ ರೂಪಾಯಿವರೆಗೆ ವ್ಯವಹಾರ ಮಾಡಬಹುದು. 1 ಕೋಟಿಗಿಂತ ಹೆಚ್ಚು ವ್ಯವಹಾರ ಮಾಡಿದರೆ 2% TDS ಕಟ್ಟಬೇಕಾಗುತ್ತದೆ.
* 3 ವರ್ಷಗಳಿಂದ ಐಟಿಆರ್ ಫೈಲ್ ಮಾಡಿಲ್ಲದಿದ್ದರೆ 20 ಲಕ್ಷದಿಂದ 1 ಕೋಟಿವರೆಗೆ 2% TDS ಕಟ್ಟಬೇಕು. 1 ಕೋಟಿಗಿಂತ ಹೆಚ್ಚು ವ್ಯವಹಾರ ಮಾಡಿದರೆ 5% TDS ಕಟ್ಟಬೇಕು.
* ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಸಿ ಒಂದು ಸಲಕ್ಕೆ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ವಹಿವಾಟು ಮಾಡಿದರೆ ತನಿಖೆಯಾಗುವ ಸಾಧ್ಯತೆ ಇರುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.