Income Tax: ಆದಾಯ ತೆರಿಗೆ ವಿಷಯದಲ್ಲಿ ನಿಜಕ್ಕೂ ಇದು ದೊಡ್ಡ ಸುದ್ದಿ. 2021ರ ಜೂನ್ 7ರಿಂದ ಪ್ರಾರಂಭವಾಗಿರುವ ಆದಾಯ ತೆರಿಗೆ ಪೋರ್ಟಲ್ ತೆರಿಗೆದಾರರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ. ಇದರ ಮುಖ್ಯ ಉದ್ದೇಶ ಸುಲಭವಾಗಿ ತೆರಿಗೆ ಪಾವತಿಸುವಂತೆ ತೆರಿಗೆದಾರರನ್ನು ಪ್ರೋತ್ಸಾಹಿಸುವುದು. ಈಗ ಆದಾಯ ತೆರಿಗೆ ಪಾವತಿಸಿ ಹೆಚ್ಚು ದುಡ್ಡು ಉಳಿತಾಯ ಮಾಡುವುದು ಹೇಗೆ ಎಂದು ತಿಳಿಯಿರಿ.
ದೇಶದಲ್ಲಿ ಆಯ್ದ ಕ್ರೆಡಿಟ್ ಕಾರ್ಡುಗಳು ಮಾತ್ರ ಬಳಕೆದಾರರಿಗೆ ರಿವಾರ್ಡುಗಳನ್ನು ನೀಡುತ್ತಿವೆ. ಅಥವಾ ಆದಾಯ ತೆರಿಗೆ ಪಾವತಿ ಮತ್ತು ಜಿಎಸ್ ಟಿ ಪಾವತಿಯ ಮೇಲೆ ಕ್ಯಾಶ್ ಬ್ಯಾಕ್ ನೀಡುತ್ತಿವೆ. ನೀವು ಇನ್ನು ಮುಂದೆ HDFC Biz ಬ್ಲಾಕ್ ಕಾರ್ಡ್ ಮೂಲಕ ತೆರಿಗೆ ಪಾವತಿ ಮಾಡಿದರೆ ಆದಾಯ ತೆರಿಗೆ ಪಾವತಿಯಲ್ಲಿ ಒಂದಲ್ಲ, ಎರಡಲ್ಲ, ಶೇಕಡಾ 16.6ರಷ್ಟು ಹಣ ಉಳಿಸಬಹುದಾಗಿದೆ.
ಇದನ್ನೂ ಓದಿ- ಲಕ್ಷಾಂತರ ತೆರಿಗೆದಾರರಿಗೆ ಗುಡ್ ನ್ಯೂಸ್: ಶೀಘ್ರವೇ ಹೊಸ ತೆರಿಗೆ ಪದ್ಧತಿ ಘೋಷಣೆ: ತೆರಿಗೆ ವಿನಾಯಿತಿ ಸಾಧ್ಯತೆ!
ಆದಾಯ ತೆರಿಗೆ ಪೋರ್ಟಲ್ ನಲ್ಲಿ ಕ್ರೆಡಿಟ್ ಕಾರ್ಡುಗಳನ್ನು ಬಳಸಿಕೊಂಡು ತೆರಿಗೆ ಪಾವತಿಸಿದರೆ ಬಹಳ ಅನುಕೂಲಗಳಿವೆ. ಮೊದಲನೆಯದಾಗಿ ಬಹಳ ಬೇಗ ಸುಲಭದಲ್ಲಿ ತೆರಿಗೆ ಪಾವತಿಸಬಹುದಾಗಿದೆ. ಅಲ್ಲದೆ ಕ್ರೆಡಿಟ್ ಕಾರ್ಡುಗಳನ್ನು ಬಳಸಿ ತೆರಿಗೆ ಪಾವತಿಸಬಹುದಾಗಿದೆ. ಜೊತೆಗೆ ಬೇಗನೆ ನಿಮಗೆ ದೃಢಿಕರಣವೂ ಸಿಗುತ್ತದೆ. ಚೆಕ್ ಅಥವಾ ಬ್ಯಾಂಕ್ ಮೂಲಕ ತೆರಿಗೆ ಪಾವತಿಸಿದರೆ ದೃಢೀಕರಣಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
HDFC Biz ಬ್ಲಾಕ್ ಕಾರ್ಡ್ ಶುಲ್ಕಗಳು ಹೇಗಿರಲಿವೆ?
* ಹೊಸ ಕಾರ್ಡುಗಳ ಖರೀದಿ/ನವೀಕರಣ ಶುಲ್ಕ 10,000 ರೂಪಾಯಿ
ಒಂದು ವರ್ಷದಲ್ಲಿ 7.75 ಲಕ್ಷ ರೂಪಾಯಿ ಖರ್ಚು ಮಾಡಿದರೆ ನವೀಕರಣ ಶುಲ್ಕ ಮನ್ನಾ ಆಗುತ್ತದೆ.
* ಕಾರ್ಡ್ ಪಡೆದ 90 ದಿನಗಳಲ್ಲಿ 1.5 ಲಕ್ಷ ರೂಪಾಯಿ ಖರ್ಚು ಮಾಡಿದರೆ ಆಗಲೂ ಸಹ ಖರೀದಿ ಶುಲ್ಕ ಮನ್ನಾ ಆಗಲಿದೆ.
ಇದನ್ನೂ ಓದಿ- ಸೇವಿಂಗ್ಸ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ TAX ಬೀಳೋದು ಗ್ಯಾರಂಟಿ..!
2024ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಜನಸಂಖ್ಯೆಯ 8,09,03,315 ಜನ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ. 2023 ರ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ 7.40 ಕೋಟಿ ಜನ ಮಾತ್ರ ಆದಾಯ ತೆರಿಗೆ ಪಾವತಿಸಿದ್ದರು ಎಂದು ಸಂಸತ್ತಿಗೆ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ಮತ್ತು ರಿಟರ್ನ್ಸ್ ಅನ್ನು ಇನ್ನಷ್ಟು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಕ್ರೆಡಿಟ್ ಕಾರ್ಡುಗಳಲ್ಲಿ ತೆರಿಗೆ ಪಾವತಿಸುವ ವಿಧಾನ ಕೂಡ ಒಂದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.