ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೊಂದು ಸಂತಸದ ಸುದ್ದಿ ಇದೆ. ಈಗ ಪ್ರತಿ ಸಣ್ಣ ಕೆಲಸಕ್ಕೂ ಗ್ರಾಹಕರು ಎಟಿಎಂ (ATM) ಅಥವಾ ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲ, ಬ್ಯಾಂಕ್ ಸ್ವತಃ ನಿಮ್ಮ ಬಳಿಗೆ ಬರುತ್ತದೆ. ಎಸ್‌ಬಿಐ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಮೊದಲು ನೋಂದಾಯಿಸಿಕೊಳ್ಳಬೇಕು:
ಎಸ್‌ಬಿಐನ (SBI) ಅಧಿಕೃತ ವೆಬ್‌ಸೈಟ್ ಪ್ರಕಾರ, ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯಕ್ಕಾಗಿ, ಮೊದಲು ಹೋಂ ಬ್ರಾಂಚ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದು ಕೆಲವೇ ಕ್ಷಣಗಳಲ್ಲಿ ಮುಗಿದು ಹೋಗುವ ಪ್ರಕ್ರಿಯೆ. ಇದನ್ನು ಒಮ್ಮೆ ಮಾಡಿದರೆ ಸಾಕು.  ನೋಂದಾಯಿಸಿದ ನಂತರ, ಪ್ರತಿಯೊಂದು ಸಣ್ಣ ಕೆಲಸಕ್ಕೂ ಬ್ಯಾಂಕಿಗೆ ಅಲೆಯುವ ಅಗತ್ಯವಿರುವುದಿಲ್ಲ. ಮನೆಯಲ್ಲಿ ಕುಳಿತು ನಿಮ್ಮ ಖಾತೆಯಲ್ಲಿ 20,000 ರೂ.ಗಳವರೆಗೆ ಠೇವಣಿ ಇಡುವ ಅಥವಾ ತೆಗೆಯುವ ಕೆಲಸವನ್ನು ಮಾಡಬಹುದು. ಅಂದರೆ, ಕೇವಲ ಒಂದು ಕರೆಯ ಮೇಲೆ, ಬ್ಯಾಂಕ್ ಸ್ವತಃ ನಿಮ್ಮ ಮನೆಬಾಗಿಲಿಗೆ ಬರುತ್ತದೆ. ಇದು ಮಾತ್ರವಲ್ಲ, ಡೋರ್ ಸ್ಟೆಪ್ ಬ್ಯಾಂಕಿಂಗ್‌ನಲ್ಲಿ (Door Step banking), ಗ್ರಾಹಕರು ಚೆಕ್‌ಬುಕ್, ಲೈಫ್ ಸರ್ಟಿಫಿಕೇಟ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಠೇವಣಿಯಂತಹ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.


ಇದನ್ನೂ ಓದಿ : DA Increase: ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ , 3 ಪ್ರತಿಶತ ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ


ಈ ಮೂರು ಷರತ್ತುಗಳನ್ನು ಪೂರೈಸಬೇಕು:
1. ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯದ ಲಾಭ ಪಡೆಯಲು, ನಿಮ್ಮ ಮೊಬೈಲ್ ಸಂಖ್ಯೆಯು ಖಾತೆಯಲ್ಲಿ ನೋಂದಣಿಯಾಗಿರುವುದು ಅಗತ್ಯ. (ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಈ ಸೌಲಭ್ಯದ ಲಾಭವನ್ನು ಪಡೆಯಬಹುದು. ಮಾತ್ರವಲ್ಲ, ಜಂಟಿ ಖಾತೆಯನ್ನು ಹೊಂದಿದ್ದರೆ, ಕೂಡಾ ಡೋರ್ ಸ್ಟೆಪ್ ಬ್ಯಾಂಕಿಂಗ್ ಲಾಭವನ್ನು ಪಡೆಯಬಹುದು. 


2. ಎಸ್‌ಬಿಐನ (State bank of India) ಈ ಸೌಲಭ್ಯ ದೃಷ್ಟಿಹೀನ ವ್ಯಕ್ತಿಗಳಿಗೆ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಲಭ್ಯವಿರುತ್ತದೆ. ಆದಾಗ್ಯೂ, ಈ ಜನರು ಕೂಡ ಮೊದಲು ತಮ್ಮ ಖಾತೆಯ ಕೆವೈಸಿ (KYC) ಮಾಡಬೇಕಾಗುತ್ತದೆ, ಆಗ ಮಾತ್ರ ಅವರು ಅದಕ್ಕೆ ಅರ್ಹರಾಗಲು ಸಾಧ್ಯವಾಗುತ್ತದೆ. 


3. ಹೋಂ ಬ್ರಾಂಚ್ ನಿಂದ 5 ಕಿಮೀ ವ್ಯಾಪ್ತಿಯಲ್ಲಿ ನೋಂದಾಯಿತ ವಿಳಾಸದಲ್ಲಿ ವಾಸಿಸುವ ಗ್ರಾಹಕರು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.


ಇದನ್ನೂ ಓದಿ :  ನಿಮ್ಮ Aadhar card ಗೆ ಎಷ್ಟು ಮೊಬೈಲ್ ನಂಬರ್ ಲಿಂಕ್ ಮಾಡಲಾಗಿದೆ : ಅದನ್ನ ಈ ರೀತಿ ಪರಿಶೀಲಿಸಿ


ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ :
ಎಸ್‌ಬಿಐನ ಈ ಸೌಲಭ್ಯಕ್ಕಾಗಿ, ಟೋಲ್ ಫ್ರೀ ಸಂಖ್ಯೆ 1800-1037-188 ಮತ್ತು 1800-1213-721 ಅನ್ನು ಸಂಪರ್ಕಿಸಬಹುದು.  https://bank.sbi/dsb 
ಲಿಂಕ್ ಮೂಲಕ ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ