ನವದೆಹಲಿ : ದೀಪಾವಳಿಗೆ ಮುನ್ನ ಸರ್ಕಾರಿ ನೌಕರರಿಗೆ (Central government employee) ಕೇಂದ್ರ ಸರ್ಕಾರ ಸಿಹಿ ಸುಡ್ಡಿ ನೀಡಿದೆ. ದೀಪಾವಳಿ ಉಡುಗೊರೆಯಾಗಿ (Diwali gift) ಅವರ ತುಟ್ಟಿ ಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅಂದರೆ ಕೇಂದ್ರ ಉದ್ಯೋಗಿಗಳು ಈಗ ಶೇಕಡಾ 31 ರಷ್ಟು ಭತ್ಯೆಯನ್ನು ಪಡೆಯಲಿದ್ದಾರೆ. ಒಂದು ಕೋಟಿಗೂ ಹೆಚ್ಚು ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಇದರ ಪ್ರಯೋಜನವನ್ನು ಪಡೆಯುತ್ತಾರೆ.
ಜುಲೈ 1 ರಿಂದಲೇ ಅನ್ವಯ :
ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಹೊಸ ಭತ್ಯೆಯ ಹೆಚ್ಚಳವನ್ನು ಈ ವರ್ಷದ ಜುಲೈ 1 ರಿಂದಲೇ ಅನ್ವಯಿಸಲಾಗುವುದು. ಈ ಹಿಂದೆ ಜುಲೈನಲ್ಲಿ ಸರ್ಕಾರವು ತುಟ್ಟಿ ಭತ್ಯೆಯನ್ನು (DA) ಶೇ. 11 ರಿಂದ 28 ಕ್ಕೆ ಹೆಚ್ಚಿಸಿತ್ತು. ಅದರ ನಂತರ, ಈಗ ಮತ್ತೆ 3 ಪ್ರತಿಶತದಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 31 ಶೇಕಡಾ ಡಿಎ (Dearness allowance) ಪಡೆಯುವಂತಾಗುತ್ತದೆ.
ಇದನ್ನೂ ಓದಿ : Mobile Phone Fells in Train: ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಬಿದ್ದರೆ, ಅದನ್ನು ಈ ರೀತಿ ಹಿಂಪಡೆಯಬಹುದು
ಸುಮಾರು ಒಂದು ಕೋಟಿ ಜನರಿಗೆ ಪ್ರಯೋಜನ :
ಸರ್ಕಾರದ ಈ ಘೋಷಣೆಯಿಂದ 47.14 ಲಕ್ಷ ಕೇಂದ್ರ ಉದ್ಯೋಗಿಗಳಿಗೆ ಮತ್ತು 68.62 ಲಕ್ಷ ಪಿಂಚಣಿದಾರರಿಗೆ (Pensioners) ಲಾಭವಾಗಲಿದೆ. ದೀಪಾವಳಿಯ ಸಂದರ್ಭದಲ್ಲಿ ಮಾಡಿದ ಈ ಘೋಷಣೆಯಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ 9,488 ಕೋಟಿ ರೂ ಅಧಿಕ ಹೊರೆಯಾಗಲಿದೆ.
ಸರ್ಕಾರದ ಘೋಷಣೆ ಹಿಂದಿನ ಕಾರಣ ?
ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಡೇಟಾವನ್ನು ಜೂನ್, ಜುಲೈ ಮತ್ತು ಆಗಸ್ಟ್‌ಗಾಗಿ ಬಿಡುಗಡೆ ಮಾಡಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾದ ಎಐಸಿಪಿಐ ಸೂಚ್ಯಂಕವು 123 ಅಂಕಗಳನ್ನು ತಲುಪಿದೆ ಎಂದು ತೋರಿಸಿದೆ. ಈ ಸೂಚ್ಯಂಕವು ಎಷ್ಟು ಹೆಚ್ಚಾಗಿರುತ್ತದೆಯೋ, ಹಣದುಬ್ಬರದ ಮಟ್ಟವು ಅಷ್ಟೇ ಹೆಚ್ಚಾಗಿದೆ ಎನ್ನುವುದನ್ನು ತೋರಿಸುತ್ತದೆ. ಇದರ ಆಧಾರದ ಮೇಲೆ, ಕೇಂದ್ರ ಸರ್ಕಾರವು ನೌಕರರ ಡಿಯರ್ನೆಸ್ ಭತ್ಯೆಯನ್ನು (DA) ಘೋಷಿಸುತ್ತದೆ.
ಇದನ್ನೂ ಓದಿ : Electric Scooter: ಯಾವ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಉತ್ತಮ? ಇಲ್ಲಿದೆ ಬೆಲೆ-ವೈಶಿಷ್ಟ್ಯಗಳ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ