Amazon ನಂತಹ ಕಂಪನಿಗಳ ಮೇಲೆ ಶೀಘ್ರವೇ ನಿಷೇಧ ಸಾಧ್ಯತೆ! ವ್ಯಾಪಾರಿ ಸಂಘಟನೆಗಳ ಬೇಡಿಕೆ ಇದು
ವ್ಯಾಪಾರಿಗಳ ಸಂಘಟನೆಯಾಗಿರುವConfederation of All India Traders (CAT) ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ (Ministry of Consumer Affairs) ವಿಧಿಸಿರುವ ದಂಡ ಅಪರಿಪೂರ್ಣ ಎಂದು ಹೇಳಿದೆ.
ನವದೆಹಲಿ: ವ್ಯಾಪಾರಿಗಳ ಸಂಘಟನೆಯಾಗಿರುವConfederation of All India Traders (CAT) ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ (Ministry of Consumer Affairs) ವಿಧಿಸಿರುವ ದಂಡ ಅಪರಿಪೂರ್ಣ ಎಂದು ಹೇಳಿದೆ. ತನ್ನ ವೇದಿಕೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಉತ್ಪನ್ನಗಳ ಮೇಲೆ ಉತ್ಪನ್ನಗಳು ನಿರ್ಮಾಣಗೊಂಡ ದೇಶದ ಹೆಸರು ನಮೂದಿಸದೆ ಇದ್ದ ಕಾರಣಕ್ಕೆ ಸಚಿವಾಲಯ ಅಮೆಜಾನ್ ಗೆ 25 ಸಾವಿರ ರೂ. ದಂಡ ವಿಧಿಸಿತ್ತು ಈ ಕುರಿತು ಹೇಳಿಕೆ ನೀಡಿರುವ CAT, ಯಾವುದೇ ಒಂದು ಕಂಪನಿ ಈ ರೀತಿಯ ಅಪರಾದ ಮತ್ತೆ ಪುನರಾವರ್ತಿಸಬಾರದು ಎಂಬುದು ದಂಡ ವಸೂಲಾತಿಯ ಮೂಲ ಉದ್ದೇಶವಾಗಿದೆ ಎಂದಿದೆ.
ಇದನ್ನು ಓದಿ- ಲಾಕ್‌ಡೌನ್ ನಂತರ ಉತ್ತಮ ಗಳಿಕೆಗಾಗಿ ಇಲ್ಲಿದೆ 5 ಬೆಸ್ಟ್ ಕೆರಿಯರ್ ಆಯ್ಕೆ
ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು
ಇಂತಹ ಕಂಪನಿಗಳ ಮೇಲೆ ಸರ್ಕಾರ ಕೈಗೊಳ್ಳುವ ಕ್ರಮ ಒಂದು ಉದಾಹರಣೆಯಾಗಿ ಸಾಬೀತಾಗಬೇಕು ಎಂದು ಕ್ಯಾಟ್ ಹೇಳಿದೆ. ಹೀಗಾಗಿ ಈ ಪ್ಲಾಟ್ ಫಾರ್ಮ್ ಗಳ ಮೇಲೆ 7 ದಿನಗಳ ನಿಷೇಧ ವಿಧಿಸಬೇಕು ಎಂದು ಅದು ಸರ್ಕಾರವನ್ನು ಕೋರಿದೆ. ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಟ್ ನ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭರ್ತಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಇಷ್ಟೊಂದು ಕಮ್ಮಿ ದಂಡ ವಿಧಿಸುವುದು ನ್ಯಾಯಾಲಯ ಹಾಗೂ ಆಡಳಿತಾತ್ಮಕ ವ್ಯವಸ್ಥೆಗೆ ಎಸೆದ ತಮಾಷೆಯಾಗಿದೆ. ಅರ್ಥವ್ಯವಸ್ಥೆಗೆ ಉಂಟಾಗಿರುವ ಹಾನಿಯನ್ನು ಆಧರಿಸಿ ಈ ದಂಡ ಅಥವಾ ಶಿಕ್ಷೆ ನಿರ್ಧಾರಿತವಾಗಬೇಕು ಎಂದು ಕ್ಯಾಟ್ ಹೇಳಿದೆ.
ಇದನ್ನು ಓದಿ- Google Sites: Free ವೆಬ್ ಸೈಟ್ ರಚಿಸಿ ನಿಮ್ಮ ಬಿಸಿನೆಸ್, ಸ್ಟಾರ್ಟ್ ಅಪ್ ಗೆ ಹೊಸ ಮೆರಗು ನೀಡಿ
Vocal For Localಗೆ ಉತ್ತೇಜನೆ ಸಿಗಬೇಕು
ಪ್ರಧಾನಿ ನರೇಂದ್ರ ಮೋದಿ ನೀಡಿರುವ ವೋಕಲ್ ಫಾರ್ ಲೋಕಲ್ ಗೆ ಉತ್ತೇಜನ ಹಾಗೂ ಸ್ವಾವಲಂಭಿ ಭಾರತ ಅಭಿಯಾನವನ್ನು ಗಟ್ಟಿಗೊಳಿಸಲು ಉತ್ಪನ್ನಗಳ ಮೂಲ ದೇಶದ ಮಾಹಿತಿ ನೀಡುವುದು ಆವಶ್ಯಕವಾಗಿದೆ ಎಂದು ಭರ್ತಿಯಾ ಹಾಗೂ ಖಂಡೇಲ್ವಾಲ್ ಹೇಳಿದ್ದಾರೆ. ಆದರೆ, ಇ-ಕಾಮರ್ಸ್ ಕಂಪನಿಗಳು ಸತತವಾಗಿ ನಿಯಮ ಹಾಗೂ ಕಾನೂನನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿವೆ. ಹೀಗಾಗಿ ಮೊದಲ ತಪ್ಪಿಗೆ 7 ದಿನ ಹಾಗೂ ಎರಡನೇ ಬಾರಿ ಎಸಗಲಾಗುವ ತಪ್ಪಿಗೆ 15 ದಿನಗಳ ನಿಷೇಧದ ನಿಯಮ ಸರ್ಕಾರ ಜಾರಿಗೆ ತರಬೇಕು ಎಂದು ಕ್ಯಾಟ್ ಕೋರಿದೆ.
ಇದನ್ನು ಓದಿ-10,000 ಹೂಡಿಕೆ ಮಾಡಿ 16 ಲಕ್ಷ ಸಂಪಾದಿಸಿ, Post Office ಈ ಸ್ಕೀಮ್ ನೀಡುತ್ತೆ ಜಬರ್ದಸ್ತ್ ರಿಟರ್ನ್
ನಿಯಮಗಳ ಅಡಿ ದಂಡ ವಿಧಿಸಬೇಕು
ನಿಯಮಗಳ ಉಲ್ಲಂಘನೆ ಮಾಡುವ ಕಂಪನಿಗಳ ವಿರುದ್ಧ ಕೇಂದ್ರ ಸರ್ಕಾರ ಈ ಮೊದಲೇ ನಿರ್ಧರಿಸಲಾಗಿರುವ ಮಾನದಂಡಗಳನ್ನು ಆಧರಿಸಿ ದಂಡ ವಿಧಿಸಬೇಕು. ಅಮೆಜಾನ್ (Amazon) ನಂತಹ ಜಾಗತಿಕ ಮಟ್ಟದಲ್ಲಿ ವ್ಯಾಪಾರ ನಡೆಸುವ ಕಂಪನಿಗೆ 25 ಸಾವಿರ ರೂ.ಗಳ ದಂಡ ಕ್ಷುಲ್ಲಕವಾಗಿದೆ. ಒಂದು ವೇಳೆ ದಂಡದ ಮೊತ್ತ ಹಾಗೂ ಶಿಕ್ಷೆ ಕಠಿಣವಾಗಿದ್ದರೆ ಈ ಕಂಪನಿಗಳು ನಿಯಮಗಳನ್ನು ಉಲ್ಲಂಘಿಸುವ ಮೊದಲು ಹಲವು ಬಾರಿ ಯೋಚಿಸಲಿವೆ. 25.000 ರೂ. ಮೊತ್ತ ದಂಡದ ಕಾನೂನಿನ ಜೊತೆಗೆ ನಡೆಸಲಾದ ಒಪ್ಪಂದ ಎಂದು ಬಿಂಬಿಸುತ್ತದೆ ಎಂದು ಭರ್ತಿಯಾ ಹಾಗೂ ಖಂಡೇಲ್ವಾಲ್ ಹೇಳಿದ್ದಾರೆ. ಕಾನೂನು ಎಲ್ಲರಿಗೂ ಸಮನಾಗಿರಬೇಕು. ಫ್ಲಿಪ್ ಕಾರ್ಟ್ ಹಾಗೂ ಮಿಂತ್ರಾಗಳಂತಹ ಇ-ಕಾಮರ್ಸ್ ಕಂಪನಿಗಳಿಗೂ ಕೂಡ ಇದೆ ನಿಯಮ ಅನ್ವಯಿಸಬೇಕು ಎಂದು ಕ್ಯಾಟ್ ಹೇಳಿದೆ.