ಅಪರಾಧಗಳ ತನಿಖೆ ನಡೆಸುವ ಸಿಬಿಐ ಇದೀಗ ಒಂದು ಕಾಯಿನ್‌ ಹುಡುಕಾಟದಲ್ಲಿ ನಿರತವಾಗಿದೆ. ಕಾಯಿನ್‌ ಹುಡುಕೋಕೆ ಸಿಬಿಐ ಹೋಗಬೇಕಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಈ ನಾಣ್ಯ ಸಾಮಾನ್ಯದಲ್ಲ. ಚಿನ್ನದ ನಾಣ್ಯ ಇದಾಗಿದ್ದು, ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕಾದ್ರೆ ಟೀಂ ಇಂಡಿಯಾ ಈ 2 ಕೆಲಸ ಮಾಡಲೇಬೇಕು!


ಸಿಬಿಐ ಹುಡುಕಾಡುತ್ತಿರುವ ಚಿನ್ನದ ನಾಣ್ಯವು 1987ರಲ್ಲಿ ಹೈದರಾಬಾದ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು. ಆ ಬಳಿಕ ಅದನ್ನು ಹರಾಜು ಪ್ರಕ್ರಿಯೆಯಲ್ಲಿ ಯಾರೋ ತೆಗೆದುಕೊಂಡು ಹೋಗಿದ್ದು, ಇದೀಗ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇದೆ ಎಂಬ ಮಾಹಿತಿ ತಿಳಿದುಬಂದಿದೆ. ಇನ್ನು ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇದು ಆಶ್ಚರ್ಯವಾದ್ರೂ ಸತ್ಯ ಸಂಗತಿ.  ವಿಶೇಷ ಹಾಗೂ ಬೆಲೆ ಕಟ್ಟಲಾಗದ ನಾಣ್ಯದ ಇತಿಹಾಸದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ. 


ಈ ನಾಣ್ಯದ ಇತಿಹಾಸವೇನು?
ಸುಮಾರು 410 ವರ್ಷಗಳ ಹಿಂದಿನ ಈ ನಾಣ್ಯ 12 ಕೆಜಿ ತೂಕವಿದೆ ಎಂದು ಚಕ್ರವರ್ತಿ ಜಹಾಂಗೀರ್ ತನ್ನ ತುಜುಕ್-ಎ-ಜಹಂಗಿರಿ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ. ಜಹಾಂಗೀರ್ ಇರಾನ್ ರಾಯಭಾರಿ ಯಾದಗರ್ ಅಲಿಗೆ 12 ಕೆಜಿ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾನೆ. ಈ ನಾಣ್ಯವನ್ನು ಆಗ್ರಾದಲ್ಲಿ ಮುದ್ರಿಸಲಾಗಿದ್ದು, ಕುಶಲಕರ್ಮಿಗಳು ನಾಣ್ಯದಲ್ಲಿ ಪರ್ಷಿಯನ್ ಭಾಷೆಯಲ್ಲಿ ಗಾದೆಗಳನ್ನು ಕೆತ್ತಿದ್ದಾರೆ. 


ವರದಿಗಳನ್ನು ಆಧರಿಸಿದ ಬಳಿಕ ದೊರೆತ ಮಾಹಿತಿ ಪ್ರಕಾರ, ಚಕ್ರವರ್ತಿ ಜಹಾಂಗೀರ್ 12 ಕೆಜಿಯ ಎರಡು ಚಿನ್ನದ ನಾಣ್ಯಗಳನ್ನು ತಯಾರಿಸಿದ್ದಾನೆ. ಅದರಲ್ಲಿ ಒಂದನ್ನು ಯಾದಗರ್ ಅಲಿಗೆ ನೀಡಿದ್ದು, ಇನ್ನೊಂದನ್ನು ಹೈದರಾಬಾದ್ ನಿಜಾಮನಿಗೆ ಹಸ್ತಾಂತರಿಸಲಾಗಿತ್ತು. ಇದರ ನಂತರ, 1987 ರಲ್ಲಿ ಈ ನಾಣ್ಯವನ್ನು ಹುಡುಕುವ ಮೊದಲ ಪ್ರಯತ್ನವನ್ನು ಮಾಡಲಾಯಿತು. ಈ ಚಿನ್ನದ ನಾಣ್ಯದ ಹರಾಜಿನ ಸುದ್ದಿ ಭಾರತ ಸರ್ಕಾರಕ್ಕೆ ತಿಳಿದಾಗ, ಸರ್ಕಾರವು ತಕ್ಷಣವೇ ಸಿಬಿಐ ಅನ್ನು ಅದರ ತನಿಖೆಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ಕಳುಹಿಸಿದೆ.


ಇದನ್ನೂ ಓದಿ: ಟಿ20 ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರನಿಗೆ ಸ್ಥಾನ ಸಿಗಲ್ಲ!


1987ರಲ್ಲಿ ಎಷ್ಟೇ ಹುಡುಕಾಟ ನಡೆಸಿದರೂ ಸಿಗದ ಈ ಚಿನ್ನದ ನಾಣ್ಯದ ಬೆಲೆ 126 ಕೋಟಿ ಎಂದರೆ ಎಂತವರಿಗೂ ಶಾಕ್ ಆಗುತ್ತೆ. ಇದೀಗ ಈ ನಾಣ್ಯವನ್ನು ಹುಡುಕಲು ಸರ್ಕಾರ ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಜೂನ್ 2022 ರಲ್ಲಿ, ಈ ವಿಶಿಷ್ಟ ಚಿನ್ನದ ನಾಣ್ಯ ಪತ್ತೆಗಾಗಿ ತನಿಖೆಯನ್ನು ಪ್ರಾರಂಭಿಸಲು ಸರ್ಕಾರವು ಸಿಬಿಐಗೆ ಸೂಚನೆ ನೀಡಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ