Covid-19 Vaccine ಹಾಕಿಸಿ, ಎಫ್ಡಿ ಮೇಲೆ ಹೆಚ್ಚಿನ ಬಡ್ಡಿ ಪಡೆಯಿರಿ
More Interest on FD: ನೀವೂ ಕೂಡ ಬ್ಯಾಂಕಿನ ಸ್ಥಿರ ಠೇವಣಿ (ಎಫ್‌ಡಿ) ಯಲ್ಲಿ ಹಣ ಹೂಡಿಕೆ ಮಾಡಿದ್ದೀರೆ? ಹಾಗಿದ್ದರೆ ಈ ಕೆಲಸ ಮಾಡಿದರೆ ನಿಮಗೆ ಹೆಚ್ಚು ಆದಾಯ ಗಳಿಸಲು ನಿಮಗೆ ಅವಕಾಶವಿದೆ.
ನವದೆಹಲಿ: ಎಫ್‌ಡಿ ಮೇಲೆ ಅಧಿಕ ಬಡ್ಡಿ : ನೀವು ಸಹ ಹಣವನ್ನು ಬ್ಯಾಂಕಿನ ಸ್ಥಿರ ಠೇವಣಿ (ಎಫ್‌ಡಿ) ಯಲ್ಲಿ ಹೂಡಿಕೆ ಮಾಡಿದ್ದರೆ ನಿಮಗೆ ಹೆಚ್ಚು ಗಳಿಸುವ ಅವಕಾಶವಿದೆ. ಅದಕ್ಕಾಗಿ ನೀವು ಹೆಚ್ಚಾಗಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ. ಕರೋನಾ ಲಸಿಕೆ ಪಡೆದರೆ ಅಷ್ಟೇ ಸಾಕು. ನೀವು ಕೋವಿಡ್ -19 ಲಸಿಕೆ (Covid-19 Vaccine) ಪಡೆದರೆ, ನಿಮ್ಮ ಎಫ್‌ಡಿ ಮೇಲೆ ಅಧಿಕ ಬಡ್ಡಿ ಸಿಗಲಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೊಡುಗೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಪ್ರಸ್ತಾಪವನ್ನು ನೀಡಿದ್ದು, ಇದರಲ್ಲಿ ಕರೋನಾ ಲಸಿಕೆ (Corona Vaccine) ಪಡೆದವರಿಗೆ ನಿಗದಿತ ಠೇವಣಿಗಳ ಮೇಲೆ 25 ಬೇಸಿಸ್ ಪಾಯಿಂಟ್ ಹೆಚ್ಚಿನ ಬಡ್ಡಿ ನೀಡಲಾಗುವುದು. ಹಿರಿಯ ನಾಗರಿಕರಿಗೆ ಈ ಕುರಿತು 25 ಬೇಸಿಸ್ ಪಾಯಿಂಟ್‌ಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು, ಅಂದರೆ ಅವರಿಗೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ಲಭ್ಯವಾಗಲಿದೆ.
ಇದನ್ನೂ ಓದಿ - Post Office Scheme: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100 ರೂ.ಗಿಂತ ಕಡಿಮೆ ಹೂಡಿಕೆಯಲ್ಲಿ ಪಡೆಯಿರಿ 14 ಲಕ್ಷ ರೂ.
ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ (Immune India Deposit Scheme) :
ವ್ಯಾಕ್ಸಿನೇಷನ್ ಉತ್ತೇಜಿಸಲು ಬ್ಯಾಂಕ್ ವಿಶೇಷ ಠೇವಣಿ ಯೋಜನೆ 'ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ' ತಂದಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯೋಜನೆ 1111 ದಿನಗಳವರೆಗೆ ಲಭ್ಯವಿರಲಿದೆ. ಇದರಲ್ಲಿ ಲಸಿಕೆ ಪಡೆದವರಿಗೆ ಸಾಮಾನ್ಯ ಎಫ್‌ಡಿ ದರಗಳಿಗಿಂತ 25 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ತಿಳಿಸಿದೆ.
Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ಎಫ್‌ಡಿ ದರಗಳು:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 2.75% ರಿಂದ 5.1% ಬಡ್ಡಿಯನ್ನು ಪಾವತಿಸುತ್ತದೆ. ಈ ದರಗಳು 8 ಜನವರಿ 2021 ರಿಂದ ಅನ್ವಯವಾಗುತ್ತವೆ. ನೀವು ಕರೋನಾ ಲಸಿಕೆ ಪಡೆದರೆ, ಈ ಸ್ಥಿರ ಬಡ್ಡಿದರಗಳಿಗಿಂತ 25 ಬಿಎಸ್ಪಿ ಹೆಚ್ಚು ಪಡೆಯಬಹುದು.
ಟರ್ಮ್ | ಎಫ್ಡಿ ಬಡ್ಡಿದರ |
7 -14 ದಿನಗಳು | 2.75% |
15 - 30 ದಿನಗಳು | 2.90% |
31 - 45 ದಿನಗಳು | 2.90% |
46 - 59 ದಿನಗಳು | 3.25% |
60 - 90 ದಿನಗಳು | 3.25% |
91 - 179 ದಿನಗಳು | 3.90% |
180 - 270 ದಿನಗಳು | 4.25% |
271 - 364 ದಿನಗಳು | 4.25% |
1-2 ವರ್ಷಗಳು | 4.90% |
2-3 ವರ್ಷಗಳು | 5.00% |
3-5 ವರ್ಷಗಳು | 5.10% |
5 ರಿಂದ 10 ವರ್ಷಗಳು | 5.10% |
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.