PIB Fact Check: ಆಧಾರ್ ಕಾರ್ಡ್ ಹೊಂದಿರುವರಿಗೆ ಕೇಂದ್ರದಿಂದ 4.78 ಲಕ್ಷ ರೂ.ಅಗ್ಗದ ಸಾಲ!?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಆಧಾರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ 4.78 ಲಕ್ಷ ರೂ. ಸಾಲ ನೀಡಲಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಆಧಾರ್ ಕಾರ್ಡ್ ಮೂಲಕ ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ ಎಂದು ಹೇಳಲಾಗಿದೆ.
ನವದೆಹಲಿ: ಆಧಾರ್ ಕಾರ್ಡ್ ಮೂಲಕ ದೇಶದ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಮತ್ತು ಯೋಜನೆಗಳ ಪ್ರಯೋಜನಗಳನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವು 4.78 ಲಕ್ಷ ರೂ. ಅಗ್ಗದ ಸಾಲ ನೀಡಲಿದೆ ಎಂದು ಹೇಳಲಾಗಿದೆ. ಸರ್ಕಾರ ಆಧಾರ್ ಕಾರ್ಡ್ ಮೂಲಕ ಜನರಿಗೆ ಸಾಲ ನೀಡುತ್ತಿದೆ ಎಂದು ಈ ಸಂದೇಶದಲ್ಲಿ ಹೇಳಲಾಗುತ್ತಿದೆ. ಈ ಸಂದೇಶದ ಜೊತೆಗೆ ಸಾಲಕ್ಕೆ ಅರ್ಜಿ ಸಲ್ಲಿಸಲು ಲಿಂಕ್ ಕೂಡ ನೀಡಲಾಗಿದೆ.
ವೈರಲ್ ಸುದ್ದಿಯ ಸತ್ಯಾಸತ್ಯತೆ!
ವೈರಲ್ ಆಗುತ್ತಿರುವ ಸಂದೇಶದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದಾಗ, ಅದಕ್ಕೆ ಸಂಬಂಧಿಸಿದ ನೈಜ ಮಾಹಿತಿ ಬಯಲಾಗಿದೆ. ಕೇಂದ್ರ ಸರ್ಕಾರದಿಂದ ಇಂತಹ ಯಾವುದೇ ಆದೇಶ ನೀಡಿಲ್ಲವೆಂದು ವಾಸ್ತವವನ್ನು ಪರಿಶೀಲಿಸಿದಾಗ ಕಂಡುಬಂದಿದೆ. ಈ ಮಾಹಿತಿ ಸಂಪೂರ್ಣ ನಕಲಿಯಾಗಿದೆ. ನಿಮ್ಮ ಹಣಕಾಸು ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ PIB ಫ್ಯಾಕ್ಟ್ ಚೆಕ್ ಸಲಹೆ ನೀಡಿದೆ.
ಇದನ್ನೂ ಓದಿ: 'ಮೋದಿ ಬಂದರೆ ಗೆಲ್ಲುತ್ತೇವೆ' ಎಂಬ ಮನಸ್ಥಿತಿ ಕೆಲಸ ಮಾಡುವುದಿಲ್ಲ"-ಪ್ರಧಾನಿ ಮೋದಿ ಎಚ್ಚರಿಕೆ
ಕೇಂದ್ರ ಸರ್ಕಾರದ ಅಧಿಕೃತ ಸತ್ಯ ಪರೀಕ್ಷಕ ‘PIB ಫ್ಯಾಕ್ಟ್ ಚೆಕ್' ಇಂತಹ ಯಾವುದೇ ತಪ್ಪು ಸಂದೇಶವನ್ನು ಫಾರ್ವರ್ಡ್ ಮಾಡುವುದನ್ನು ನಿಷೇಧಿಸಿದೆ. ಮೇಲಿನ ಸಂದೇಶವನ್ನು PIB ಫ್ಯಾಕ್ಟ್ ಚೆಕ್ ಈ ಸಂದೇಶ ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. ಇಂತಹ ಯಾವುದೇ ಆದೇಶವನ್ನು ಕೇಂದ್ರ ಸರ್ಕಾರ ನೀಡಿಲ್ಲವೆಂದು ಸ್ಪಷ್ಟನೆ ನೀಡಿದೆ.
ವೈರಲ್ ಸಂದೇಶದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಕೇಂದ್ರ ಸರ್ಕಾರವು 4.78 ಲಕ್ಷ ರೂ. ಸಾಲ ನೀಡುತ್ತಿದೆ ಎಂದು ಹೇಳಲಾಗಿದೆ. ಆಧಾರ್ ಕಾರ್ಡ್ ಮೂಲಕ ಈ ಸಾಲ ದೊರೆಯಲಿದೆ. ಕಡತ ಶುಲ್ಕ ಮತ್ತು ಬಡ್ಡಿ ದರ ಇತ್ಯಾದಿಗಳನ್ನು ಇದರಲ್ಲಿ ಚರ್ಚಿಸಲಾಗಿಲ್ಲ. ಸಂದೇಶದೊಂದಿಗೆ ನೀಡಿರುವ ಲಿಂಕ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವಂತೆ ಕೇಳಲಾಗಿದೆ.
ಇದನ್ನೂ ಓದಿ: ಮಗನ ಸಾವು ನೋಡಲಾರೆ ಎಂದು 22ನೇ ಮಹಡಿಯಿಂದ ಜಿಗಿದು ಮಹಿಳೆ ಸಾವು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.