COVID-19 ಲಸಿಕೆಯ ಮಾಧ್ಯಮ ವರದಿಗೆ ಕೇಂದ್ರ ಸಚಿವಾಲಯ ಸ್ಪಷ್ಟನೆ

Covid-19 Vaccine:  ಭಾರತದಲ್ಲಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಭಾರತದಲ್ಲಿ ಬಳಸಲಾಗುವ ಕೋವಿಡ್-19 ಲಸಿಕೆಗಳ ಉಪಯೋಗ ಮತ್ತು ಅನುಕೂಲಗಳನ್ನು  ಮೌಲ್ಯಮಾಪನ ಮಾಡಿದೆ. 

Written by - Yashaswini V | Last Updated : Jan 18, 2023, 01:52 PM IST
  • COVID-19 ಲಸಿಕೆಯ ಮಾಧ್ಯಮ ವರದಿಗೆ ಸಚಿವಾಲಯ ಸ್ಪಷ್ಟನೆ
  • COVID-19 ಲಸಿಕೆಗಳ ಪ್ರಯೋಜನಗಳು ಮತ್ತು ಅನಾನುಕೂಲಗಳ ಕುರಿತು ಐಸಿಎಂಆರ್ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಚಿವಾಲಯ
  • ಐಸಿಎಂಆರ್ ಮತ್ತು ಸಿಡಿಎಸ್‌ಸಿಒ ಕರೋನವೈರಸ್ ಲಸಿಕೆಗಳ ಬಹು ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡಿವೆ ಎಂಬ ಮಾಧ್ಯಮ ವರದಿಗಳ ಕುರಿತಂತೆ ಸ್ಪಷ್ಟನೆ ನೀಡಿರುವ ಸಚಿವಾಲಯ
COVID-19 ಲಸಿಕೆಯ ಮಾಧ್ಯಮ ವರದಿಗೆ ಕೇಂದ್ರ ಸಚಿವಾಲಯ ಸ್ಪಷ್ಟನೆ title=
Covid-19 Vaccine

Covid-19 Vaccine: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ (ಸಿಡಿಎಸ್‌ಸಿಒ) ಆರ್‌ಟಿಐ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಕರೋನವೈರಸ್ ಲಸಿಕೆಗಳ ಬಹು ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡಿವೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿರಾಕರಿಸಿದೆ. ಕೋವಿಡ್-19 ಲಸಿಕೆಯ ಅಡ್ಡಪರಿಣಾಮಗಳ ಕುರಿತಂತೆ ಇತ್ತೀಚಿನ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಆರೋಗ್ಯ ಸಚಿವಾಲಯ, ಈ ವರದಿಗಳು ಆಧಾರ ರಹಿತವಾದ ವರದಿಗಳು ಎಂದು ಸ್ಪಷ್ಟಪಡಿಸಿದೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾರ್ವಜನಿಕ ಡೊಮೇನ್‌ನಲ್ಲಿ ಜಾಗತಿಕ ವೈಜ್ಞಾನಿಕ ಪುರಾವೆಗಳೊಂದಿಗೆ ಪೂರ್ವಭಾವಿ ಬಹಿರಂಗಪಡಿಸುವಿಕೆಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನೀತಿಗೆ ಅನುಗುಣವಾಗಿ, ಐಸಿಎಂಆರ್ ಕೋವಿಡ್-19  ಲಸಿಕೆಗಳ ಅನುಕೂಲಗಳು ಮತ್ತು ಅನಾನುಕೂಲಗಳಿಗೆ ಸಂಬಂಧಿಸಿದ ಆರ್‌ಟಿಐ ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ನೀಡಿದೆ.  ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (CDC) ಮತ್ತು ಆರೋಗ್ಯ ಸಚಿವಾಲಯವು ವಿವಿಧ ಕೋವಿಡ್-19  ಲಸಿಕೆಗಳ ಕುರಿತಂತೆ ಪುರಾವೆಗಳಿಗೆ ಆಧಾರವಾಗಿ ಮಾಹಿತಿ ಉದ್ದೇಶದಿಂದ ಮಾತ್ರ ಪ್ರತಿಷ್ಠಿತ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಮಾತ್ರ  ಒದಗಿಸಿತ್ತು ಎಂದು ಅದು ಹೇಳಿದೆ.

ಇದನ್ನೂ ಓದಿ- Goat Milk Benefits : ಈ ಮಾರಕ ರೋಗಕ್ಕೆ ರಾಮಬಾಣ ಮೇಕೆ ಹಾಲು, ಪ್ರಯೋಜನ ತಿಳಿದ್ರೆ ಶಾಕ್‌ ಆಗ್ತೀರಾ!

ಇದರಲ್ಲಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದಿಸಿದ ಕೋವಿಡ್-19   ಲಸಿಕೆಗಳ ಪಟ್ಟಿ ಅಧಿಕೃತ CDSCO ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಅದು ಹೇಳಿದೆ. CDSCO ಈ ವಿಷಯದ ಕುರಿತು ತಮ್ಮ ಬಳಿ ಯಾವುದೇ ಇತರ ಮಾಹಿತಿ ಲಭ್ಯವಿಲ್ಲ ಎಂಬುದನ್ನು ಕೂಡ ಉಲ್ಲೇಖಿಸಿರುವುದಾಗಿ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ- Covid BF. 7 ನಿಯಂತ್ರಣ ಸಭೆ; ಸರ್ಕಾರ ಸಿದ್ಧತೆ ಹೇಗಿದೆ? ರಾಜಕೀಯ ಕಾರ್ಯಕ್ರಮಕ್ಕೆ ನಿರ್ಬಂಧನೆ ಇಲ್ಲ!

ಭಾರತದಲ್ಲಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಭಾರತದಲ್ಲಿ ಬಳಸಲಾಗುವ ಕೋವಿಡ್-19 ಲಸಿಕೆಗಳ ಉಪಯೋಗ ಮತ್ತು ಅನುಕೂಲಗಳನ್ನು  ಮೌಲ್ಯಮಾಪನ ಮಾಡಿದೆ.  ಕೋವಿಡ್-19 ಲಸಿಕೆ ಪಡೆದವರಲ್ಲಿ ಸಾಮಾನ್ಯ ರೋಗ ಲಕ್ಷಣಗಳಾದ (ತಲೆನೋವು, ಜ್ವರ, ಸುಸ್ತು, ಪೈರೆಕ್ಸಿಯಾ, ಶೀತ, ಆರ್ಥ್ರಾಲ್ಜಿಯಾ, ಮೈಯಾಲ್ಜಿಯಾ)  ಕಾಣಿಸಿಕೊಳ್ಳುವುದು ಸಹಜ. ಆದರೆ, ಮೊದಲೇ ಯಾವುದಾದರೂ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇದರ ತೀವ್ರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು ಎಂದು ಸಚಿವಾಲಯ ವಿವರಿಸಿದೆ.   

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News