ನವದೆಹಲಿ : ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಯಾಗಿದ್ದರೆ, ಈ ಸುದ್ದಿ ನಿಮಗಾಗಿ. ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಂ ಕಿಸಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಬಂದಿದೆ. ನವರಾತ್ರಿ ಸಂದರ್ಭದಲ್ಲಿ ದೇಶಾದ್ಯಂತ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರ 2000 ರೂ.ವರ್ಗಾವಣೆ ಮಾಡಲಾಗುತ್ತದೆ. ಪಿಎಂ ಕಿಸಾನ್ ನಿಧಿಯ 18​​ನೇ ಕಂತಿನ ಬಿಡುಗಡೆಯ ದಿನಾಂಕವನ್ನು ಸರ್ಕಾರ ಘೋಷಿಸಿದೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 5 ರಂದು ರೈತರ ಖಾತೆಗೆ ಹಣ ವರ್ಗಾವಣೆ :
ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್‌ಸೈಟ್ ಪ್ರಕಾರ,ಅಕ್ಟೋಬರ್ 5 ರಂದು ರೈತರಿಗೆ 18 ನೇ ಕಂತಿನ ಹಣವನ್ನು ಬಿಡುಗಡೆಯಾಗಲಿದೆ.ಈ ಯೋಜನೆಯಡಿ ದೇಶದ ಬಡ ರೈತರಿಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ ಆರು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.ಈ ಹಣವನ್ನು ನೇರವಾಗಿ ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.ಈ ಕಂತನ್ನು ರೈತರಿಗೆ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ಯಂತೆ ನೀಡಲಾಗುತ್ತದೆ. 


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಜಾಕ್ ಪಾಟ್ !ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ದೀಪಾವಳಿ ಬೋನಸ್ ! ಈ ಬಾರಿ ಸರ್ಕಾರದ ಭರ್ಜರಿ ಕೊಡುಗೆ


 2019 ರಲ್ಲಿ ಈ ಯೋಜನೆ ಪ್ರಾರಂಭ :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಸರ್ಕಾರ 2019 ರಲ್ಲಿ ಪ್ರಾರಂಭಿಸಿತು.ಯೋಜನೆಯಡಿ ಪಡೆದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆ.ಪಿಎಂ ಕಿಸಾನ್‌ನ ಎಲ್ಲಾ ಫಲಾನುಭವಿ ರೈತರು eKYC ಮಾಡಿಸಿಕೊಳ್ಳುವುದು ಅವಶ್ಯಕ.ಇ-ಕೆವೈಸಿ ಮೂಲಕ ನಿಮ್ಮ ಗುರುತನ್ನು ದೃಢಪಡಿಸಿದ ನಂತರವೇ ಹಣ ನಿಮ್ಮ ಖಾತೆಗೆ ಬರುತ್ತದೆ.OTP ಮೂಲಕ ಅಥವಾ ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಮುಖದ ಗುರುತು ಮೂಲಕ ಯಾವುದೇ CSC ಕೇಂದ್ರಕ್ಕೆ ಭೇಟಿ ನೀಡಿ eKYC ಮಾಡಿಸಿಕೊಳ್ಳಬಹುದು. 


ಇ-ಕೆವೈಸಿ ಮಾಡದವರಿಗೆ ಸಮಸ್ಯೆ : 
 ಇ-ಕೆವೈಸಿ ಇಲ್ಲದ ಜನರು ಪಿಎಂ ಕಿಸಾನ್‌ ಯೋಜನೆಯ ಪ್ರಯೋಜನಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮೂಲಕ OTP ಸಹಾಯದಿಂದ PM ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು e-KYC ಅನ್ನು ಪೂರ್ಣಗೊಳಿಸಬಹುದು.ಒಂದು ವೇಳೆ ಇದು ಸಾಧ್ಯವಾಗದೆ ಹೋದರೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡುವ ಮೂಲಕ ನೀವು e-KYC ಪ್ರಕ್ರಿಯೆ ಪೂರ್ಣಗೊಳಿಸಬಹುದು.


ಇದನ್ನೂ ಓದಿ : ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್


ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ಸಂಪೂರ್ಣ ವ್ಯವಸ್ಥೆಯು ಸರ್ಕಾರ ಮತ್ತು ರೈತರ ನಡುವೆ ಇದೆ.ಇದರಲ್ಲಿ ನಿಧಿಯನ್ನು ಬಿಡುಗಡೆ ಮಾಡಿದ ನಂತರ ಸರ್ಕಾರವು ನೇರವಾಗಿ ಬ್ಯಾಂಕ್‌ಗಳ ಮೂಲಕ ರೈತರ ಖಾತೆಗೆ ಹಣ ವರ್ಗಾಯಿಸುತ್ತದೆ. 


eKYC ಮಾಡುವುದು ಹೇಗೆ ? :
> OTP ಆಧಾರಿತ e-KYC (PM-Kisan ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ)
> ಬಯೋಮೆಟ್ರಿಕ್ ಆಧಾರಿತ e-KYC, ಸಾಮಾನ್ಯ ಸೇವಾ ಕೇಂದ್ರ (CSC) ಮತ್ತು ರಾಜ್ಯ ಸೇವಾ ಕೇಂದ್ರ (SSK) ನಲ್ಲಿ ಲಭ್ಯವಿದೆ
> ಮುಖದ ದೃಢೀಕರಣ ಆಧಾರಿತ eKYC, PM ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.