ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ನೀವೂ ತಿಳಿದುಕೊಳ್ಳಿ ಈ ಸ್ಕೀಮ್ ಬಗ್ಗೆ !

Post office scheme : ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಅಸಲಿಗಿಂತ ಹೆಚ್ಚು ಬಡ್ಡಿಯೇ ಸಿಗುತ್ತದೆ. ಅದು ಹೇಗೆ ನೋಡೋಣ.   

Written by - Ranjitha R K | Last Updated : Sep 26, 2024, 09:53 AM IST
  • ಪೋಸ್ಟ್ ಆಫೀಸ್ ನಲ್ಲಿ ಮಾಡುವ ಹೂಡಿಕೆ ಬ್ಯಾಂಕ್‌ನಂತೆ ಸುರಕ್ಷಿತವಾಗಿರುತ್ತದೆ.
  • ಇಲ್ಲಿ ಹೂಡುವ ಹಣಕ್ಕೆ ಸರ್ಕಾರ ಭದ್ರತಾ ಖಾತರಿಯನ್ನು ನೀಡುತ್ತದೆ.
  • ಸಾವಿರಾರು ಸ್ಕೀಮ್‌ಗಳನ್ನು ಪೋಸ್ಟ್ ಆಫೀಸ್‌ನಲ್ಲಿ ನಡೆಸಲಾಗುತ್ತದೆ.
 ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ನೀವೂ ತಿಳಿದುಕೊಳ್ಳಿ ಈ ಸ್ಕೀಮ್ ಬಗ್ಗೆ ! title=

ಬೆಂಗಳೂರು : ಪೋಸ್ಟ್ ಆಫೀಸ್ ನಲ್ಲಿ ಮಾಡುವ ಹೂಡಿಕೆ ಬ್ಯಾಂಕ್‌ನಂತೆ ಸುರಕ್ಷಿತವಾಗಿರುತ್ತದೆ.ಇಲ್ಲಿ ಹೂಡುವ ಹಣಕ್ಕೆ ಸರ್ಕಾರ ಭದ್ರತಾ ಖಾತರಿಯನ್ನು ನೀಡುತ್ತದೆ.ಸಾವಿರಾರು ಸ್ಕೀಮ್‌ಗಳನ್ನು ಪೋಸ್ಟ್ ಆಫೀಸ್‌ನಲ್ಲಿ ನಡೆಸಲಾಗುತ್ತದೆ. ಆದರೆ ಇಲ್ಲಿ ನಾವು ಪೋಸ್ಟ್ ಆಫೀಸ್ ಎಫ್‌ಡಿ ಬಗ್ಗೆ ಹೇಳುತ್ತಿದ್ದೇವೆ.ವಿವಿಧ ಅವಧಿಯ FD ಆಯ್ಕೆಗಳು ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.5 ವರ್ಷಗಳ ಎಫ್‌ಡಿಗೆ ಶೇಕಡಾ 7.5 ಬಡ್ಡಿ ಸಿಗುತ್ತಿದೆ.ಈ ಆದಾಯದ ಮೇಲೆ ಆದಾಯ ತೆರಿಗೆ ಕಾಯಿದೆ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಇರುತ್ತದೆ.ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬಹುದು.ಅದು ಹೇಗೆ ನೋಡೋಣ. 

ಪೋಸ್ಟ್ ಆಫೀಸ್‌ನಲ್ಲಿ ನಿಮ್ಮ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಲು 5 ವರ್ಷಗಳ ಎಫ್‌ಡಿ ಆಯ್ಕೆ ಮಾಡಬೇಕು.ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೇಲೆ ಮೆಚ್ಯೂರ್ ಆಗುವವರೆಗೆ ಬಿಡಬೇಕು.ನಂತರ ಸತತ ಎರಡು ಬಾರಿ ಈ ಯೋಜನೆಯನ್ನು ವಿಸ್ತರಣೆ ಮಾಡಬೇಕು.ಅಂದರೆ 15 ವರ್ಷಗಳ ಕಾಲ ಈ FD ಅನ್ನು ನಡೆಸಬೇಕು.ಈ ಎಫ್‌ಡಿಯಲ್ಲಿ 10 ಲಕ್ಷವನ್ನು ಹೂಡಿಕೆ ಮಾಡಿದರೆ,ಶೇಕಡಾ 7.5 ರ ಬಡ್ಡಿದರದಲ್ಲಿ,5 ವರ್ಷಗಳಲ್ಲಿ ಈ ಮೊತ್ತದ ಮೇಲೆ  4,49,948 ಬಡ್ಡಿ ಸಿಗುತ್ತದೆ. ಹಾಗಾಗಿ ಒಟ್ಟು ಅಲ್ಲಿ 14,49,948 ರೂ. ಶೇಖರಣೆಯಾದ ಹಾಗೆ ಆಗುತ್ತದೆ. 

ಇದನ್ನೂ ಓದಿ : Arecanut Price in Karnataka: ಕರ್ನಾಟಕದ‌ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್

ಈ ಯೋಜನೆಯನ್ನು ಮತ್ತೆ 5 ವರ್ಷಗಳವರೆಗೆ ಅಂದರೆ 10 ವರ್ಷಗಳ ನಂತರ ಒಟ್ಟು 21,02,349 ರೂಪಾಯಿ ನಿಮಗೆ ಸಿಗುತ್ತದೆ. ಇದನ್ನು ಮೆಚ್ಯೂರ್ ಆಗಲು ಬಿಟ್ಟು ಮರು ವಿಸ್ತರಣೆ ಮಾಡಬೇಕು.ಆಗ ಈ ಯೋಜನೆ ಮುಕ್ತಾಯದ ನಂತರ ನಿಮ್ಮ ಕೈ ಸೇರುವ ಒಟ್ಟು ಮೊತ್ತ 30,48,297 ರೂಪಾಯಿಗಳು.ಅಂದರೆ,ಇಲ್ಲಿ ನಿಮಗೆ ಸಿಗುವ ಬಡ್ಡಿ ಅಸಲಿಗಿಂತ ಹೆಚ್ಚಿರುತ್ತದೆ.  

ವಿಸ್ತರಣಾ ನಿಯಮಗಳನ್ನು ಅರ್ಥಮಾಡಿಕೊಳ್ಳಿ : 
ಪೋಸ್ಟ್ ಆಫೀಸ್ 1 ವರ್ಷದ FD ಅನ್ನು ಮುಕ್ತಾಯ ದಿನಾಂಕದಿಂದ 6 ತಿಂಗಳೊಳಗೆ ವಿಸ್ತರಿಸಬಹುದು.2 ವರ್ಷಗಳ ಎಫ್‌ಡಿಗಳನ್ನು ಮೆಚ್ಯುರಿಟಿ ಅವಧಿಯ 12 ತಿಂಗಳೊಳಗೆ ಪೋಸ್ಟ್ ಆಫೀಸ್‌ಗೆ ವರದಿ ಮಾಡಬೇಕು ಮತ್ತು ಮೆಚ್ಯೂರಿಟಿ ಅವಧಿಯ 18 ​​ತಿಂಗಳೊಳಗೆ 3 ಮತ್ತು 5 ವರ್ಷಗಳ ಎಫ್‌ಡಿ ವಿಸ್ತರಣೆ ಮಾಡಬಹುದು. ಇದರ ಹೊರತಾಗಿ ಖಾತೆ ತೆರೆಯುವ ಸಮಯದಲ್ಲಿ ಮುಕ್ತಾಯದ ನಂತರ ಖಾತೆ ವಿಸ್ತರಣೆಗೆ ವಿನಂತಿಸಬಹುದು.ಮುಕ್ತಾಯದ ದಿನಾಂಕದಂದು ಸಂಬಂಧಿಸಿದ ಖಾತೆಗೆ ಅನ್ವಯವಾಗುವ ಬಡ್ಡಿ ದರವು ವಿಸ್ತೃತ ಅವಧಿಗೆ ಅನ್ವಯಿಸುತ್ತದೆ. 

ಇದನ್ನೂ ಓದಿ : Travel Insurance: 1 ರೂಪಾಯಿ ಖರ್ಚಿಲ್ಲದೆ ಪಡೆಯಿರಿ ₹ 10,00,000 ವರೆಗಿನ ವಿಮೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News