ಈ ದಿನ ಖಾತೆ ಸೇರಲಿದೆ ಪಿಎಂ ಕಿಸಾನ್ ನಿಧಿಯ 2000 ರೂಪಾಯಿ .! ಕೃಷಿ ಸಚಿವರ ಘೋಷಣೆ
PM Kisan : ಕಾರ್ಯಕ್ರಮವೊಂದರಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪಿಎಂ ಕಿಸಾನ್ ನಿಧಿಯ 11 ನೇ ಕಂತಿನ ದಿನಾಂಕಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆ ಮಾಡಿದ್ದಾರೆ. ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತುಗಾಗಿ ದೇಶಾದ್ಯಂತ 12.50 ಕೋಟಿ ರೈತರು ಕಾತರದಿಂದ ಕಾಯುತ್ತಿದ್ದಾರೆ. ರೈತರ ಈ ನಿರೀಕ್ಷೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತೆರೆ ಎಳೆದಿದ್ದಾರೆ. 11 ನೇ ಕಂತಿನ ಹಣ ರೈತ ಖಾತೆಗೆ ಯಾವಾಗ ಬರಲಿದೆ ಎನ್ನುವ ದಿನಾಂಕವನ್ನು ಸಚಿವರು ಘೋಷಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಘೋಷಿಸಿದ ಕೃಷಿ ಸಚಿವ :
ಪಿಎಂ ಕಿಸಾನ್ ನಿಧಿಯ 11 ನೇ ಕಂತಿನ ಹಣ ವರ್ಗಾವಣೆ ದಿನಾಂಕವನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಘೋಷಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರು ಈ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ರೈತರಿಗಾಗಿ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ 6 ಸಾವಿರ ರೂ. ವರ್ಗಾಯಿಸಲಾಗುವುದು.
ಇದನ್ನೂ ಓದಿ : ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ 115 ಕಿಮೀ ವರೆಗೆ ರೇಂಜ್ .! ಇತರ ವೈಶಿಷ್ಟ್ಯ ಹೀಗಿದೆ
ಮೇ 31 ರಂದು ರೈತರ ಖಾತೆಗೆ ಹಣ :
ಮೇ 31 ರಂದು ಮತ್ತೆ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ಸಚಿವರಿಂದ ದಿನಾಂಕ ಘೋಷಣೆಯಾದ ಬಳಿಕ ರೈತರ ಇದೀಗ ರೈತರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಅಗತ್ಯವಿದೆ ಇ-ಕೆವೈಸಿ :
ಈ ಬಾರಿ 11ನೇ ಕಂತಿನ ಲಾಭ ಪಡೆಯಲು ಇ-ಕೆವೈಸಿ ಮಾಡುವುದು ಅಗತ್ಯ. 12 ಮತ್ತು ಒಂದೂವರೆ ಕೋಟಿಗಳಲ್ಲಿ ಸುಮಾರು 80 ಪ್ರತಿಶತ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಇ-ಕೆವೈಸಿ ಮಾಡಬಹುದು. ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇದನ್ನೂ ಓದಿ : TVS iQube Electric Scooter: ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ. ವರೆಗೆ ಚಲಿಸುವ ಈ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳಿವು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.