ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ 115 ಕಿಮೀ ವರೆಗೆ ರೇಂಜ್ .! ಇತರ ವೈಶಿಷ್ಟ್ಯ ಹೀಗಿದೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಬಿಗಾಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ BG D15 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 99,999 ರೂ. ಆಗಿದೆ. ಇದುಸಿಂಗಲ್ ಚಾರ್ಜ್ ನಲ್ಲಿ 115 ಕಿಮೀ ವರೆಗೆ ಚಲಿಸುತ್ತದೆ.  

Written by - Ranjitha R K | Last Updated : May 19, 2022, 12:39 PM IST
  • ಮಾರುಕಟ್ಟೆಗೆ ಹೊಸ BG D15 ಎಲೆಕ್ಟ್ರಿಕ್ ಸ್ಕೂಟರ್
  • ಸಿಂಗಲ್ ಚಾರ್ಜ್ ನಲ್ಲಿ 115 ಕಿಮೀ ವರೆಗೆ ಚಲಿಸುತ್ತದೆ.
  • ಮಾರುಕಟ್ಟೆಯಲ್ಲಿ ಬೆಲೆ ಎಷ್ಟು ಗೊತ್ತಾ ?
ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ 115 ಕಿಮೀ ವರೆಗೆ ರೇಂಜ್ .! ಇತರ  ವೈಶಿಷ್ಟ್ಯ ಹೀಗಿದೆ  title=
Bgauss BG D15 Electric Scooter (file photo)

ನವದೆಹಲಿ : Bgauss BG D15 Electric Scooter: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಬೀಗೋಸ್ ಭಾರತದಲ್ಲಿ ಹೊಸ BG D15 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು B8 ಮತ್ತು A2 ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ  99,999 ರೂ .ಆಗಿದ್ದು, ಇದು ಉನ್ನತ ಮಾದರಿಗೆ  1.15 ಲಕ್ಷ ನೀಡಬೇಕಾಗುತ್ತದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಫಂಕಿ ಲುಕ್, ಸ್ಟ್ರಾಂಗ್ ಬಾಡಿ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.  ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ 3.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದನ್ನು ಎರಡು ವಿಧಾನಗಳಲ್ಲಿ ನೀಡಲಾಗುತ್ತದೆ - ಇಕೋ ಮತ್ತು ಸ್ಪೋರ್ಟ್ಸ್.

7 ಸೆಕೆಂಡುಗಳಲ್ಲಿ 0-60 km/h ವೇಗ :
ಬೀಗೋಸ್ ಬಿಜಿ ಡಿ15 ಎಲೆಕ್ಟ್ರಿಕ್ ಸ್ಕೂಟರ್ ಸ್ಪೋರ್ಟ್ಸ್ ಮೋಡ್‌ನಲ್ಲಿ ಗಂಟೆಗೆ 0-60 ಕಿಮೀ ವೇಗವನ್ನು ಪಡೆಯಲು ಕೇವಲ 7 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಿದೆ. ಇವುಗಳ ಸಹಾಯದಿಂದ ಸವಾರನು ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನುಮಾಡುವದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : 19-05-2022 Today Vegetable Price: ಇಲ್ಲಿದೆ ಇಂದಿನ ತರಕಾರಿ ದರ

ಒಂದೇ ಚಾರ್ಜ್‌ನಲ್ಲಿ, ಈ ಎಲೆಕ್ಟ್ರಿಕ್ ಸ್ಕೂಟರ್ 115 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ .  ಅದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಈ ಸ್ಕೂಟರ್ ಅನ್ನು ಪುಣೆ ಮೂಲದ ಪ್ಲಾಂಟ್ ನಲ್ಲಿ ಸಿದ್ಧಪಡಿಸಲಾಗಿದೆ.   

 ಪ್ರಬಲ ಸುರಕ್ಷಾ ಫೀಚರ್ಸ್ ಹೊಂದಿದೆ : 
Bgauss BG D15 20 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು  ಸಂಪೂರ್ಣ ವಾಟರ್ ಪ್ರೂಫ್ ಐಪಿ  67 ರೇಟೆಡ್ ಎಲೆಕ್ಟ್ರಿಕ್ ಮೋಟಾರ್. ಇದರಲ್ಲಿ ಬ್ಯಾಟರಿಯು ಹೆಚ್ಚಿನ ತಾಪಮಾನ ಮತ್ತು ಧೂಳಿನಿಂದ ಸುರಕ್ಷಿತವಾಗಿರುತ್ತದೆ. ಸವಾರರು ಸ್ಮಾರ್ಟ್‌ಫೋನ್ ಮೂಲಕ ಸ್ಕೂಟರ್‌ಗೆ ಕನೆಕ್ಟ್ ಆಗಬಹುದು.  ಡಿಟ್ಯಾಚೇಬಲ್ ಬ್ಯಾಟರಿ, ಇನ್ ಬಿಲ್ಟ್ ನ್ಯಾವಿಗೇಷನ್, ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, ಕೀಲೆಸ್ ಸ್ಟಾರ್ಟ್, ಯುಎಸ್‌ಬಿ ಪೋರ್ಟ್ ಮತ್ತು ನೋಟಿಫಿಕೇಶನ್ ಅಲರ್ಟ್ ನೊಂದಿಗೆ ಈ  EV ಬರುತ್ತದೆ. ಈ ಸ್ಕೂಟರ್ ಸಂಪೂರ್ಣವಾಗಿ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಇದನ್ನೂ ಓದಿ : 19-05-2022 Today Gold Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌.. ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News