ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಬಹಳ ದುಬಾರಿಯಾಗಿದೆ. ಕೆಲವೇ ಜನರು ಅದನ್ನು ನಿಭಾಯಿಸುವುದು ಸಾಧ್ಯವಾಗುತ್ತದೆ.  ಈ ವೆಚ್ಚವನ್ನು ಭರಿಸುವುದು ಪ್ರತಿಯೊಬ್ಬರಿಗೂ ಸಾಧ್ಯವಾಗುವುದಿಲ್ಲ. ಅಂತಹವರಿಗೆ ಶಿಕ್ಷಣ ಸಾಲ ತುಂಬಾ ಸಹಕಾರಿ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕನಸನ್ನು ನನಸಾಗಿಸಲು ಇದು ಸಹಾಯ ಮಾಡುತ್ತದೆ. ಬಡತನದಿಂದ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಸಾಲಗಳನ್ನು ನೀಡಲಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ (ಪದವಿಪೂರ್ವ, ಸ್ನಾತಕೋತ್ತರ ಪದವಿ, ಪಿಎಚ್‌ಡಿ, ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್) ಸಾಲವನ್ನು ತೆಗೆದುಕೊಳ್ಳಬೇಕಾದರೆ ಚಿಂತಿಸಬೇಕಾಗಿಲ್ಲ. ಕೇಂದ್ರ ಸರ್ಕಾರವು Central Sector Interest Subsidy Scheme ಅನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗದ (EWS) ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಾಲವನ್ನು ನೀಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಸಾಲ ಪಡೆಯುವುದು ಹೇಗೆ ? : 
1. ಪೋಷಕರ ವಾರ್ಷಿಕ ಆದಾಯ 4.5 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸಬಹುದು. 
2. ಪದವಿ, ಸ್ನಾತಕೋತ್ತರ, ಪಿಎಚ್‌ಡಿ, ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳು ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಸರ್ಕಾರಿ ಸಂಸ್ಥೆಗಳು ಮತ್ತು ಮಾನ್ಯತೆ ಪಡೆದ ಸ್ಥಳಗಳಿಂದ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ.
3. ಕೋರ್ಸ್ ಅನ್ನು ಮಧ್ಯದಲ್ಲಿಯೇ ಮೊಟಕುಗೊಳಿಸುವವರಿಗೆ  ಬಡ್ಡಿ ಸಹಾಯಧನ ನೀಡುವುದಿಲ್ಲ.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ! ಹಬ್ಬದ ಹೊಸ್ತಿಲಲ್ಲಿ ಸರ್ಕಾರದ ದೊಡ್ಡ ನಿರ್ಧಾರ


EMI ಅನ್ನು ಯಾವಾಗ ಪಾವತಿಸಬೇಕು? : 
CSIS ಯೋಜನೆಯಲ್ಲಿ ಸಾಲ ತೆಗೆದುಕೊಂಡ ತಕ್ಷಣ EMI ಪಾವತಿಸುವ ಅಗತ್ಯವಿಲ್ಲ. ಕೋರ್ಸ್ ಮುಗಿದ ನಂತರ, ಒಂದು ವರ್ಷಗಳ ಸಮಯಾವಕಾಶ ಸಿಗುತ್ತದೆ. ನಂತರ ವಿದ್ಯಾರ್ಥಿ ಸಾಲದ EMI ಪಾವತಿಸಬೇಕು. ಈ ಸಾಲದ ಬಡ್ಡಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ.


ಈ ರೀತಿ ಅರ್ಜಿ ಸಲ್ಲಿಸಿ : 
ಹಂತ 1: ಜನಸಮರ್ಥ್‌ನ ವೆಬ್‌ಸೈಟ್‌ಗೆ ಹೋಗಿ  (jansamarth.in .)
ಹಂತ 2: ಶಿಕ್ಷಣ ಸಾಲದ ಆಯ್ಕೆಯು ಮೊದಲ ಪುಟದಲ್ಲಿ ಕಾಣಿಸುತ್ತದೆ. ಚೆಕ್ ಎಲಿಜಿಬಿಲಿಟಿ ಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ಇಲ್ಲಿ ನೀವು ಯಾವ ಕೋರ್ಸ್, ಕೋರ್ಸ್ ಅವಧಿ, ಕುಟುಂಬದ ವಾರ್ಷಿಕ ಆದಾಯ ಮುಂತಾದ ಸಾಮಾನ್ಯ ವಿವರಗಳನ್ನು ಭರ್ತಿ ಮಾಡಬೇಕು. ಇವುಗಳನ್ನು ಆಯ್ಕೆ ಮಾಡಬೇಕು. 
ಹಂತ 4: ನಿಮ್ಮ ಅಧ್ಯಯನಕ್ಕಾಗಿ ಸರ್ಕಾರವು ಎಷ್ಟು ಸಾಲವನ್ನು ನೀಡುತ್ತದೆ. ಎಷ್ಟು ಬಡ್ಡಿ ಇರುತ್ತದೆ ಮತ್ತು EMI ಎಷ್ಟು ಎನ್ನುವುದು ಇಲ್ಲಿ ತಿಳಿಯುತ್ತದೆ. ಅದರ ನಂತರ ಅರ್ಜಿ ಸಲ್ಲಿಸಲು ಲಾಗ್ ಇನ್ ಕ್ಲಿಕ್ ಮಾಡಿ.
ಹಂತ 5: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ. ಸಾಲಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳೊಂದಿಗೆ ಹೊಸ ಪುಟವು ತೆರೆಯುತ್ತದೆ, ಅವುಗಳನ್ನು ಎಚ್ಚರಿಕೆಯಿಂದ ಓದಿ. ಎಡಭಾಗದಲ್ಲಿರುವ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ಅದರ ಮೇಲಿನ  ಅಗ್ರೀ ಮೇಲೆ ಕ್ಲಿಕ್ ಮಾಡಿ.
ಹಂತ 6: ಗೆಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ. ಮೊಬೈಲ್‌ನಲ್ಲಿ OTP ಬರುತ್ತದೆ, ಅದನ್ನು ಭರ್ತಿ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಇದರ ನಂತರ ಆಧಾರ್ ಕಾರ್ಡ್, ಪ್ಯಾನ್, ಬ್ಯಾಂಕ್ ವಿವರಗಳನ್ನು ಒದಗಿಸಬೇಕು.
ಹಂತ 7: ಎಲ್ಲಾ ವಿವರಗಳನ್ನು ಸೇವ್ ಮಾಡಿ. ನಂತರ ಈ ವಿವರಗಳನ್ನು ಪರಿಶೀಲಿಸಲಾಗುತ್ತದೆ. ನೀವು ಅರ್ಹರಾಗಿದ್ದರೆ, ನಿಮಗೆ ಸಾಲ ಸಿಗುತ್ತದೆ.


ಇದನ್ನೂ ಓದಿ : EPFO good News :ಪಿಎಫ್ ಖಾತೆಗೆ ಬಡ್ಡಿವರ್ಗಾವಣೆ ! ನಿಮ್ಮ ಖಾತೆಯನ್ನು ತಕ್ಷಣ ಪರಿಶೀಲಿಸಿ
 
ಈ ಯೋಜನೆಯ ಅಡಿಯಲ್ಲಿ, ಭಾರತದ ಹೊರಗಿನ ಶಿಕ್ಷಣಕ್ಕಾಗಿ ಸಾಲ ಸಿಗುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.