Changes From 1 March 2024 : ಇಂದಿನಿಂದ ಹೊಸ ತಿಂಗಳು ಅಂದರೆ ಮಾರ್ಚ್ ಆರಂಭವಾಗಿದೆ. ಪ್ರತಿ ತಿಂಗಳು ಅನೇಕ ನಿಯಮಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಮಾರ್ಚ್ ತಿಂಗಳು ಈ ವಿಚಾರದಲ್ಲಿ ಸ್ವಲ್ಪ ವಿಶೇಷವೇ. ಏಕೆಂದರೆ ಇದು ಆರ್ಥಿಕ ವರ್ಷದ ಕೊನೆಯ ತಿಂಗಳು. ಆದ್ದರಿಂದ ಪ್ರತಿಯೊಬ್ಬರೂ ಹಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಬಾರಿ ಜಿಎಸ್‌ಟಿ ನಿಯಮಗಳಿಂದ ಎಲ್‌ಪಿಜಿ ಮತ್ತು ಫಾಸ್ಟ್ಯಾಗ್‌ಗೆ ಸಂಬಂಧಪಟ್ಟಂತೆ ಹಲವು ಬದಲಾವಣೆಗಳನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಮಾರ್ಚ್ 1 ರಿಂದ  ಬದಲಾಗಲಿರುವ ಪ್ರಮುಖ ನಿಯಮಗಳು : 
ಜಿಎಸ್‌ಟಿ ನಿಯಮ :

ಜಿಎಸ್‌ಟಿಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಇನ್ನು ಮುಂದೆ 5 ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ನಡೆಸುತ್ತಿರುವವರು ಇ-ಚಲನ್ ಇಲ್ಲದೆ ಇ-ವೇ ಬಿಲ್ ಜನರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಯಮ ಮಾರ್ಚ್ 1 ರಿಂದ ಜಾರಿಗೆ ಬರಲಿದೆ.


ಇದನ್ನೂ ಓದಿ : LPG Latest Price: ಮಾರ್ಚ್‌ನ ಮೊದಲ ದಿನವೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆ 25.50 ರೂ. ಏರಿ


ಫಾಸ್ಟ್ಯಾಗ್ ಇ-ಕೆವೈಸಿ : 
ಫಾಸ್ಟ್ಯಾಗ್‌ನ EKYC ಅನ್ನು ನವೀಕರಿಸಲು ಇಂದು ಕೊನೆಯ ದಿನ. ಮಾರ್ಚ್ 1 ರಿಂದ KYC ಅನ್ನು ಅಪ್ಡೇಟ್ ಮಾಡದೇ ಹೋದರೆ NHAI ನಿಂದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.


ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ :
ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲು ಎಸ್‌ಬಿಐ ನಿರ್ಧರಿಸಿದೆ. ಬ್ಯಾಂಕ್ ತನ್ನ ಮಿನಿಮಮ್ ಡೇ ಬಿಲ್ ಲೆಕ್ಕಾಚಾರದ ನಿಯಮಗಳನ್ನು ಬದಲಾಯಿಸಲು ನಿರ್ಧರಿಸಿದೆ. ಮಾರ್ಚ್ 15 ರಿಂದ ಈ ನಿಯಮಗಳು ಬದಲಾಗುತ್ತವೆ. 


ಬ್ಯಾಂಕ್ ರಜೆ ಪಟ್ಟಿ :
ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಮತ್ತು ಹೋಳಿಯಂತಹ ದೊಡ್ಡ ಹಬ್ಬಗಳಿವೆ. ಈ ತಿಂಗಳು ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ರಜಾದಿನಗಳ ಪಟ್ಟಿಯು ಪ್ರದೇಶವಾರು ಬದಲಾಗಬಹುದು.ಯಾವುದೇ ಕೆಲಸಕ್ಕಾಗಿ ಶಾಖೆಗೆ ಹೋಗುವ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಆದರೆ, ಈ ಸಮಯದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಕೆಲಸವನ್ನು ಮಾಡಬಹುದು. 


ಇದನ್ನೂ ಓದಿ : Good News: ದೇಶದ ಕೋಟ್ಯಾಂತರ ರೈತರಿಗೆ ಮೋದಿ ಸರ್ಕಾರದ ಭರ್ಜರಿ ಉಡುಗೊರೆ, 24 ಸಾವಿರ ರೂ.ಗಳ ಸಬ್ಸಿಡಿಗೆ ಅನುಮೋದನೆ!


ಸಿಲಿಂಡರ್ ಬೆಲೆ ಏರಿಕೆ:
ಮಾರ್ಚ್ ಮೊದಲ ದಿನ ತೈಲ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಈ ಹಿಂದೆ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲೂ ಬೆಲೆ ಏರಿಕೆಯಾಗಿತ್ತು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸತತ ಮೂರು ತಿಂಗಳಿನಿಂದ ಏರಿಕೆಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ